Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವನ್ಯಜೀವಿ, ಮಾನವ ನಡುವಿನ ಸಂಘರ್ಷಕ್ಕೆ ನಮ್ಮ ಕ್ರೂರ ನಡೆಯೇ ಕಾರಣ: ಗುರುದೇವ ಸಿದ್ಧಾಪೂರಮಠ





 ಅಂಕಲಗಿ,31 : ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವದಕ್ಕೆ ನಮ್ಮ ಕ್ರೂರ ನಡೆಯೇ ಕಾರಣ ಎಂದು  ಗೋಕಾಕ ನ   ಲೈನ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ , ಗುರುದೇವ ಸಿದ್ದಾಪುರಮಠ ಹೇಳಿದರು. ಅವರು  ಗುರುವಾರ   ಅಡವಿಸ್ವಾಮಿ ಶರಣರು,  ಬೆಳಗಾವಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು  ಲೈನ್ಸ್ ಕ್ಲಬ್ ಗೋಕಾಕ  ಇವರ ಸಹಯೋಗದಲ್ಲಿ   ಶ್ರಾವಣ ಮಾಸದ ನಿಮಿತ್ತ  ಅಡವಿಸಿದ್ದೇಶ್ವರ ಶರಣ ಸದ್ಭಕ್ತರಿಂದ   ಅಕ್ಕತಂಗೇರಹಾಳ ಗ್ರಾಮದ ಶ್ರೀ ದುರ್ಗಾ ದೇವಸ್ಥಾನದಿಂದ ಶ್ರೀ ಕ್ಷೇತ್ರ ಉಳವಿ ಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು  ಕುಂಡದ ಸಸಿಗೆ ನೀರುಣಿಸುವದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ  ಮಾತನಾಡಿದರು.  ಕಳೆದ ೫ ವರ್ಷಗಳಿಂದ ಈ ಶರಣ ರ ಪಾದಯಾತ್ರೆ ಸಂಪ್ರದಾಯಕ್ಕೆ ನಾವು ಸಾಕ್ಷಿಯಾಗುತ್ತಿದ್ದು ,ನಮ್ಮಪೂರ್ವ ಜನ್ಮದ ಪುಣ್ಯ .   ಪವಿತ್ರ ಶ್ರಾವಣ ಮಾಸದಲ್ಲಿ ಸಹ್ಯಾದ್ರಿಯ ಕ್ಷೇತ್ರ ಉಳವಿ ಗೆ ಪಾದ ಬೆಳೆಸಿದ್ದು ,  ಪರಿಸರ ಮತ್ತು ವನ್ಯಜೀವಿ ಸಂಕುಲಕ್ಕೆ ಹೊಸ ಭಾಷ್ಯ ಬರೆಯಲಿ.  ಇಂದಿನ ನಮ್ಮೀ ಕೂಗಿನಿಂದ  ಪರಿಸರ ಮತ್ತು ವನ್ಯಜೀವಿ  ಸಂಪತ್ತು ಮತ್ತಷ್ಟು ಸಂಪನ್ನವಾದರೆ  ಇದುವೇ   ನಮ್ಮ ಮುಂದಿನ ಪೀಳಿಗೆಗೆ ಕೊಡುವ ಅತ್ಯಂತ ದೊಡ್ಡ ಆಸ್ತಿ ಎಂದರು.


ಅತಿಥಿಯಾಗಿ ಪಾಲ್ಗೊಂಡಿದ್ದ ಗೋಕಾಕ ಲೈನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಶೈಲ ಹಂಜಿ  ಮಾತನಾಡಿ, ಪಾದಯಾತ್ರಾರ್ಥಿಗಳು ಶರಣ ತತ್ವ ಮತ್ತು ಸಿದ್ಧಾಂತ ಗಳನ್ನು ಅನುಸರಿಸುವದರ ಮೂಲಕ  ಶಿವ ಶರಣರ ನಾಡದ ಈ ಕುಂದರನಾಡು ಸಕಲ ಸಂಪತ್ತಿನ ಬೀಡಾಗಲಿ  ಎಂದರಲ್ಲದೆ,  ಬದುಕಿನಲ್ಲಿ   ಶಿಸ್ತು ಮತ್ತು ಸಂಯಮದಿಂದ  ವರ್ತಿಸಿ,  ಇತರರಿಗೆ ಸ್ಫೂರ್ತಿಯಾಗಬೇಕು ಅಂದಾಗ ಈ ಶ್ರಾವಣ ಮಾಸದ ಆಚರಣೆ ಸಾರ್ಥಕವಾಗುವದು ಎಂದರು.


ಶ್ರೀ ದುರ್ಗಾ ದೇವಸ್ಥಾನ ದ ಅಧ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ಪಾದಯಾತ್ರಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.  ಬೆಳಗಾವಿ ಶ್ರೀ ಬಸವೇಶ್ವರ ಇಲೆಕ್ಟ್ರಿಕಲ್ಸ್ ಗುತ್ತಿಗೆದಾರ ಬಸವರಾಜ ಮಠಪತಿ ಸರ್ವ ಪಾದಯಾತ್ರಾರ್ಥಿಗಳಿಗೆ ಟೀ ಶರ್ಟ್ ವಿತರಿಸಿದರು.  ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಅದ್ಯಕ್ಷ ಸುರೇಶ ಉರಬಿನಟ್ಟಿ ಸರ್ವರನ್ನು ಸ್ವಾಗತಿಸಿ ಮಾತನಾಡಿ,  ಸಹ್ಯಾದ್ರಿಯು ನಮ್ಮ ಅಮೂಲ್ಯ ಸಂಪತ್ತು. ಅದರ ಸಂರಕ್ಷಣೆಗೆ ನಾವು ಯಾವತ್ತೂ ಬದ್ದರಾಗಿರಬೇಕು ಎಂದರಲ್ಲದೆ,  ಧನ್ಯವಾದ ಹೇಳಿದರು.


ಈ ಸಂದರ್ಭದಲ್ಲಿ  ಧುರೀಣರಾದ ವ್ಹಿ.ಬಿ.ಈಶ್ವರಪ್ಪಗೋಳ,  ಜೆಜಿಕೋ ನಿರ್ದೇಶಕ ಅರ್ಜುನ ಕರಲಿಂಗನ್ನವರ,  ಅಡಿವೆಪ್ಪಾ ಬ ಪಾಟೀಲ,  ಸಂತೋಷ ಈಶ್ವರಪ್ಪಗೋಳ, ಅಶೋಕ ಕರಲಿಂಗನ್ನವರ,   ಶಂಕರ ಬೆಣ್ಣಿ, ಶಿವಾನಂದ ಪಂಗನ್ನವರ,  ಮಹಾಂತೇಶ ಈಶ್ವರಪ್ಪಗೋಳ,  ಗೌಡಪ್ಪಾ ಹೊಳೆಯಾಚಿ,  ಶ್ರೀಧರ ಈಶ್ವರಪ್ಪಗೋಳ,  ಗುರು ಶರಣ ,ಮಹೇಶ ನಿರ್ವಾಣಿ,  ರಾಜು ತಿಳಗಂಜಿ, ಅಜೇಯ ಕಬಾಡಗಿ, ವಿನೋದ ನೇಸರಗಿ, ದುಂಡಪ್ಪಾ ವನ್ನೂರ,  ಬಸವರಾಜ ಗುರಾಯಿ, ಅಜ್ಜಪ್ಪಾ ಬೆಣ್ಣಿ, ಕಾರ್ತಿಕ ಸತ್ತಿಗೇರಿ, ಸಿದ್ದು ಸತ್ತಿಗೇರಿ ಸೇರಿದಂತೆ ನೂರಾರು ಶರಣರು ಉಪಸ್ತಿತರಿದ್ದರಲ್ಲದೆ, ಕ್ಷೇತ್ರ ಉಳವಿಗೆ ಹೆಜ್ಜೆ ಹಾಕಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ