Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ : ಜಿ ಎಸ್ ಪಾಟೀಲ ಅಭಿಮತ






ಅಂಕಲಗಿ. ೧೫-  ನೀರು, ಗಾಳಿ, ಭೂಮಿ, ಗುಡ್ಡ, ಬೆಟ್ಟಗಳು, ವನ್ಯಜೀವಿಗಳು   ಪರಿಸರದ ಸಂರಕ್ಷಕಗಳು.  ಅವುಗಳ ಶುಚಿತ್ವ ನಮ್ಮೆಲ್ಲರ ಆದ್ಯ ಕರ್ತವ್ಯ.  ಎಲ್ಲೆಂದರಲ್ಲಿ ಕಸ,ಕಡ್ಡಿಗಳನ್ನು ಎಸೆಯುವದು, ಮಲಿನತೆಗೊಳಿಸಿ ಪರಿಸರಕ್ಕೆ ಧಕ್ಕೆ ಮಾಡುವದು ಅನಾಗರಿಕತನದ ಅನಾವರಣ ಎಂದು ಪರಿಸರ ಪ್ರೇಮಿ,  ಬೆಳಗಾವಿ ನಿವ್ರತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಜಿ ಎಸ್ ಪಾಟೀಲ ಹೇಳಿದರು. ಧರ್ಮ ಪತ್ನಿ ನಿತ್ಯಮಂಗಲ ರೊಂದಿಗೆ  ಆಗಮಿಸಿದ್ದ  ಅವರು ಶನಿವಾರ ಬೆಳಗಾವಿ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದ ಸನ್ನಿಧಿಗೆ  ಆರತಿ ಪೂಜೆ ಸಲ್ಲಿಸಿ  ಟ್ರಸ್ಟ್ ಕಮಿಟಿ ಯಿಂದ ಸನ್ಮಾನ ಪಡೆದು ಮಾತನಾಡಿದರು.    ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ಸಾಲದು. ಅವುಗಳ ಪೋಷಿಸುವ ಹೊಣೆಗಾರಿಕೆ ನಮ್ಮದಾದಾಗ  ಈ ಪರಿಸರ ಮತ್ತು ವನ್ಯ ಸಂಕುಲದಲ್ಲಿ ಸಂತಸ ಕಾಣಬಹುದಾಗಿದೆ.  ಪರಿಸರ ಅಭಿವ್ರದ್ಧಿಗೆ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸುವದಾಗಬೇಕು , ಅರಣ್ಯದಲ್ಲಿ ವನ್ಯಜೀವಿ   ಸಂಕುಲ ಸಂತಸದಿದ್ದರೆ ಮಾತ್ರ ಆ  ಪರಿಸರ ಚೆನ್ನ  ಎಂದರಲ್ಲದೆ, ಇಂಥ ದಿಸೆಯಲ್ಲಿ

ಸ್ನೇಹ ಸಮಾಜ ಸೇವಾ ಸಂಘದ ಸಮಾಜಪರ ಮತ್ತು ಪರಿಸರ ಕಾಳಜಿ ನಿಜಕ್ಕೂ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದರಲ್ಲದೆ,  ಸನ್ಮಾನಿಸಿದ್ದಕ್ಕೆ ಧನ್ಯವಾದ ಹೇಳಿದರು.    ಸಂಘದ ಅಧ್ಯಕ್ಷರಾದ ಸುರೇಶ ಉರಬಿನಟ್ಟಿ  ಜಿ ಎಸ್ ಪಾಟೀಲ.

ಅವರು ಸಲ್ಲಿಸಿದ ಪ್ರಾಮಾಣಿಕ  ಸೇವೆಯಿಂದಾಗಿ ಜನ,ಮನದಲ್ಲಿ ಶಾಶ್ವತ ನೆಲೆ ನಿಂತವರು ಪರಿಸರ ಪ್ರೀ ಯರಾದ ಅವರು ಕೊಡುವ ಸಲಹೆ, ಸೂಚನೆಗಳು ನಮ್ಮ ಸಂಘಕ್ಕೆ ಸದಾ ಶ್ರೀರಕ್ಷೆಯಾಗಿದೆ  ಎಂದರಲ್ಲದೆ,   ದಂಪತಿಗಳನ್ನು ಕಮಿಟಿ ಪರ ಸನ್ಮಾನಿಸಿ ಅಭಿನಂದಿಸಿದರು.

ಮಲ್ಹಾರ ದಿಕ್ಷಿತ್ ಮತ್ತು ಹನುಮಾನ ಭಕ್ತರು ಸನ್ನಿಧಿಗೆ ಹನುಮಾನ ಚಾಳೀಸಾ ಪಠನೆ ಮಾಡಿದರು. ಆರ್ಚಕರಾದ ಪ್ರಕಾಶ ದೀಕ್ಷಿತ್ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಂಜುನಾಥ ಪಾಟೀಲ, ಖಜಾಂಚಿ ಮನೋಹರ ಕಾಜಗಾರ,  ಸದಸ್ಯರಾದ ಮಹಾದೇವ ಟೊಣ್ಣೆ,  ಎಸ್ ಎಲ್ ಸನದಿ,  ಜಿ ಜಿ ಹುನ್ನೂರ,  ಎನ್ ಬಿ ಹಣ್ಣಿಕೇರಿ,  ಶಿವಾನಂದ ಮಠಪತಿ,  ಚಂದ್ರಶೇಖರ ಖನಗಣ್ಣಿ, ಬಸವರಾಜ ಹಿರೇಮಠ ಸೇರಿದಂತೆ  ಪ್ರಸಾದ ಸೇವೆಗೈದ. ಶ್ರೀ ದೇವಿ ಪ್ರಸಾದ ಹೋಟೆಲ್ ಸಿಬ್ಬಂದಿ,  ಶ್ರೀ ದುರ್ಗಾ ಹೋಟೆಲ್ ನ ಮಂಜುನಾಥ ನಾಯರಿ,  ಶ್ರೀ ದುರ್ಗಾ ಮಹಿಳಾ ಮಂಡಳ ದ  ನಿರ್ಮಲಾ ಉರಬಿನಹಟ್ಟಿ,  ಪಲ್ಲವಿ ಪಾಟೀಲ, ಸುಜಾತಾ ಜುಟ್ಟನ್ನವರ,  ಕಾವ್ಯಾ ಚಿಟಗಿ, ಶಶಿರೇಖಾ ನಾಯರ್,  ಸುಮಾಂಗಲಾ ತೋಂಟಾಪೂರ  ಮತ್ತು ಆಂಜನೇಯ ಸ್ವಾಮಿ ಭಕ್ತರು,

ಮಹಿಳೆಯರು, ಮಕ್ಕಳು ಉಪಸ್ತಿತರಿದ್ದರು.

ವರದಿ, ಸುರೇಶ ಉರಬಿನಟ್ಟಿ






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ