Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಹಸಿರು ಭೂಮಿ ಆಂದೋಲನ" ಸಾರ್ವಜನಿಕರಿಗೆ ಪ್ರೇರಣೆ: ಮಾಜಿ ಗ್ರಾ.ಪಂ. ಸದಸ್ಯ ವಾಸುದೇವ ವಿಶ್ವಕರ್ಮ

ಯಾದಗಿರಿ:  ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಶಾರದಹಳ್ಳಿ ಹಾಗೂ ಐಕೂರಿನ ಮಾತೋಶ್ರೀ ಗಂಗಮ್ಮ ಗಂ. ದಿ.ಸೂಗಣ್ಣ ಸಾಹು ವಾರದ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಗಳ ಸಹಯೋಗದಡಿ ಪರಿಸರವನ್ನು ಉಳಿಸಿ ಬೆಳೆಸುವ ನೂತನ ಪರಿಕಲ್ಪನೆಯ "ಹಸಿರು ಭೂಮಿ ಆಂದೋಲನ" ದ ಆರನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ. ಸದಸ್ಯರಾದ ವಾಸುದೇವ ಎಂ. ವಿಶ್ವಕರ್ಮ ಮಾತನಾಡಿ, ದೇಶವು ಪ್ರಸ್ತುತ ಅಭಿವೃದ್ಧಿಯತ್ತ ಸಾಗುತ್ತಿರುವ ದಿನಗಳಲ್ಲಿ ಕೈಗಾರಿಕೋದ್ಯಮಗಳಿಗಾಗಿ ಭೂಮಿಯ ಬಳಕೆಯಾಗುವುದರಿಂದ ಪರಿಸರವು ಕ್ಷೀಣಿಸುತ್ತಿದೆ, ಆದ್ದರಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಪರಿಸರದ ಬಗ್ಗೆ ಕಾಳಜಿ ಬರಬೇಕು. ಪ್ರತಿಯೊಂದು ಮನೆಗಳ ಮುಂದೆ ಗಿಡಗಳನ್ನು ನೆಡಬೇಕು, ಆ ನಿಟ್ಟಿನಲ್ಲಿ "ಹಸಿರು ಭೂಮಿ ಆಂದೋಲನ" ಕಾರ್ಯಕ್ರಮವು ಸಾರ್ವಜನಿಕರಿಗೆ ಪ್ರೇರಣೆಯಾಗಿದೆ ಎಂದರು.


ನಂತರ ಸಂಸ್ಥೆಗಳ ವತಿಯಿಂದ ದೇವಸ್ಥಾನದ ಅವರಣದಲ್ಲಿ ಮತ್ತು ಜಗದ್ಗುರು ಶ್ರೀ ಮೌನೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.


ಈ ಸಂದರ್ಭದಲ್ಲಿ ಉಭಯ ಸಂಸ್ಥೆಗಳ ಅಧ್ಯಕ್ಷರುಗಳಾದ ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಮತ್ತು ಮಹೇಶ ಎಸ್. ವಾರದ, ಸಗರ ಗ್ರಾಮದ ಹಿರಿಯರಾದ ನಾಗಪ್ಪ ಬಡಿಗೇರ, ಬಲವಂತಪ್ಪ ವಠಾರ, ಗ್ರಾಮಸ್ಥರಾದ ವಿನೋದ ದೇವರಗುಡಿ, ದೇವಿಂದ್ರ ದೇವರಗುಡಿ, ಪ್ರಕಾಶ ಯಡ್ರಾಮಿ, ಮಹೇಶ ಬಿ. ವಠಾರ, ಮೌನೇಶ ಸಂದಿಮನಿ, ವಿರುಪಾಕ್ಷ ವಿಶ್ವಕರ್ಮ, ಕಾಳಪ್ಪ ಸಿದ್ದಣ್ಣೋರ, ಈರಣ್ಣ ಎನ್. ಬಡಿಗೇರ, ಡಾ|| ಪ್ರಶಾಂತ ಪ್ರತಿಹಸ್ತ, ಮಾನಪ್ಪ ಎಂ. ಕಂಬಾರ, ಮಾನಪ್ಪ ಎಂ. ವಿಶ್ವಕರ್ಮ, ವಿಶ್ವನಾಥ ಪ್ರತಿಹಸ್ತ, ನಿಂಗರೆಡ್ಡಿ ಕೆ. ದೇವಿಕೇರಿ, ಭೀಮಣ್ಣ ಡಿ. ವಿಶ್ವಕರ್ಮ, ಮಲ್ಲಿಕಾರ್ಜುನ ಎಂ. ಬಿರಾದಾರ, ನಿಂಗು ಎಂ. ವಿಶ್ವಕರ್ಮ, ನಿಂಗರಾಜ ಹಯ್ಯಾಳ, ಬಾಲರಾಜ ಎಂ. ವಿಶ್ವಕರ್ಮ ಅರಳಗುಂಡಗಿ, ಸಮೃದ್ಧ ಎಸ್. ಆಚಾರ್ಯ ಇತರರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ