Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಾಸ ಟ್ರೋಪಿ-2026ಗೆ ಅದ್ಧೂರಿ ಚಾಲನೆ : ಅಶ್ವತ್ ವೈದ್ಯರಿಂದ ಉದ್ಘಾಟನೆ

ಯರಗಟ್ಟಿ : ವಿಶ್ವಾಸಣ್ಣಾ ಅಭಿಮಾನಿ ಬಳಗದ ವತಿಯಿಂದ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗಿರುವ ವಿಶ್ವಾಸ ಟ್ರೋಪಿ-2026 ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಅವರ ಸಹೋದರ ಅಶ್ವತ್ ವೈದ್ಯ ಅವರು ಚಾಲನೆ ನೀಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕ್ರೀಡಾಭಿಮಾನಿಗಳ ಹರ್ಷೋದ್ಗಾರದ ನಡುವೆ ನಡೆದ ಕಾರ್ಯಕ್ರಮ ಯುವಕರಲ್ಲಿ ಹೊಸ ಉತ್ಸಾಹ ಮೂಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ ವೈದ್ಯ ಅವರು, “ಕ್ರೀಡೆ ಯುವಕರ ಜೀವನದಲ್ಲಿ ಶಿಸ್ತು, ಏಕತೆ ಹಾಗೂ ಆರೋಗ್ಯಕರ ಮನೋಭಾವ ಬೆಳೆಸುವ ಪ್ರಮುಖ ಸಾಧನವಾಗಿದೆ. ವಿಶ್ವಾಸಣ್ಣಾ ಅಭಿಮಾನಿ ಬಳಗವು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿಯೂ ಐಪಿಎಲ್ ಮಾದರಿಯ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಸಂಸ್ಕೃತಿ ಬೆಳೆಸುತ್ತಿರುವುದು ಸಂತಸದ ವಿಷಯ” ಎಂದು ಹೇಳಿದರು.
ಪ್ರಕಾಶ ವಾಲಿ ಮಾತನಾಡಿ “ಯುವಕರು ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಗಳಲ್ಲಿಯೂ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಕರವೇ ಅಧ್ಯಕ್ಷ ರಫೀಕ್ ಡಿಕೆ, ಮಲಿಕಸಾಬ್ ಬಾಗವಾನ್, ರಮೇಶ ದೇವರಡ್ಡಿ, ನಿಖಿಲ ಪಾಟೀಲ, ಹಣಮಂತ ಹಾರುಗೊಪ್ಪ, ಸಲೀಂ ಜಮಾದಾರ, ಸುರೇಶ ಭಜಂತ್ರಿ, ರಾಜು ಬಿರ್ಜಿ, ಸಮೀರ ನದಾಫ್, ರಫೀಕ್ ದಿಲಾವರನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
" ದೇಶದ ಉನ್ನತ ಹುದ್ದೆಗಳನ್ನು ಏರಲು ಶಿಸ್ತುಬದ್ಧ ಅಧ್ಯಯನ ಹಾಗೂ ದೃಢ ಸಂಕಲ್ಪ ಅಗತ್ಯ" ಮೇ.೨೪ ರಂದು ಕನಕ ಶ್ರೀ ಪ್ರತಿಭಾ ಪುರಸ್ಕಾರ ಸಮಾರಂಭ ವಿಶ್ವಾಸ ಟ್ರೋಪಿ-2026ಗೆ ಅದ್ಧೂರಿ ಚಾಲನೆ : ಅಶ್ವತ್ ವೈದ್ಯರಿಂದ ಉದ್ಘಾಟನೆಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ’ಯಿಂದ ಎರಡನೇ ಹಂತದ ತೀವ್ರ ಹೋರಾಟ ಆರಂಭಶಿವಾನಂದ ನೀಲಣ್ಣವರ ಈತನ ಶಿವಂ ಅಸೋಸಿಯೇಷನ ಕಛೇರಿಗಳು ಸೀಜ್. ಬಿಜೆಪಿಯಿಂದ ಎರಡು ದಿನಗಳ ಜಿಲ್ಲಾ ಮಟ್ಟದ ಪ್ರಶಿಕ್ಷಣವರ್ಗ ಆಯೋಜನೆಟ್ಯಾಂಕರ್​​ ಗುದ್ದಿದ ಪರಿಣಾಮ ಸೇತುವೆಯಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್​​ಕನಾ೯ಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ಸುಧಾರಿತ ವಸ್ತುಗಳ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ಅನಾವರಣಗೊಳಿಸಿದ ಏಕಸ್ ಮತ್ತು ಧಾರವಾಡ ಐಐಟಿಹುಬ್ಬಳ್ಳಿ-ಧಾರವಾಡ ಪಾಲಿಕೆ ನಿವೇಶನಗಳು ಅಕ್ರಮ ಮಾರಾಟ