Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಪಂ ಸಿಇಒ ರಿಷಿ ಆನಂದ ಸಿಬ್ಬಂದಿಗೆ ಕಿವಿಮಾತು

ಗ್ರಾಮೀಣ ಜನತೆಗೆ ತ್ವರಿತವಾಗಿ ಸ್ಪಂದಿಸಿ

ವಿಜಯಪುರ, ಮೇ.೧೪: ಸಮಸ್ಯೆ ಹೊತ್ತು ಬರುವ ಗ್ರಾಮೀಣ ಜನತೆಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಕಾಧಿರಿ ರಿಷಿ ಆನಂದ ಹೇಳಿದರು.
ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯದ ನವೀಕರಣಗೊಂಡ ಪಿಠೋಪಕರಣ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಲಯವು ಎಷ್ಟು ನಿಟ್ಟಾಗಿ ಅಚ್ಚುಕಟ್ಟಾಗಿ ಹಾಗೂ ಸ್ವಚ್ಚತೆಯಿಂದ ಇರುತ್ತದೇಯೋ ಅಷ್ಟು ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಪ್ರೇರಣೆ ಸಿಗುತ್ತದೆ. ಇಂತಹ ಒಂದು ಉತ್ತಮ ಯೋಜನೆಯನ್ನು ಹಾಕಿಕೊಂಡು ಹಳೆಯ ಕಟ್ಟಡದಲ್ಲಿಯೇ ಸಿಬ್ಬಂದಿಗೆ ಅವಶ್ಯಕವಾಗಿ ಬೇಕಾಗಿರುವ ಟೇಬಲ್, ಕುರ್ಚಿ, ಗಣಕಯಂತ್ರ, ಪ್ರಿಂಟರ್ಸ್, ಶೌಚಾಲಯ, ಕುಡಿಯುವ ನೀರು ಮತ್ತು ಉತ್ತಮ ಪರಿಸರ ಓದಗಿಸಿರುವ ತಾಲೂಕು ಪಂಚಾಯತಿಯ ಕಾರ್ಯವನ್ನು ಸಿಇಒ ಪ್ರಶಂಸಿಸಿದರು.
ಮುಂದಿನ ದಿನಮಾನದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ನಿರ್ವಹಿಸಿ ತಿಕೋಟಾ ತಾಲೂಕನ್ನು ಮಾದರಿ ತಾಲೂಕನ್ನಾಗಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಒದಗಿಸಿರುವ ಸಲಕರಣೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಸಮಸ್ಯೆ ಹೊತ್ತು ಬರುವ ಗ್ರಾಮೀಣ ಜನರಿಗೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು. ಜೊತೆಗೆ ಅವರೊಡನೆ ಅತ್ಯಂತ ಗೌರವಯುತವಾಗಿ ವರ್ತಿಸಬೇಕು ಎಂದರು.
ನಮ್ಮ ಕಾರ್ಯಾಲಯದ ಬಗ್ಗೆ ನಮಗೆಲ್ಲಾ ಹೆಮ್ಮೆಯಿರಬೇಕು. ಜೊತೆಗೆ ಕಾರ್ಯಾಲಯದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು. ಇದೇ ರೀತಿ ಎಲ್ಲಾ ಗ್ರಾಮ ಪಂಚಾಯತಿಗಳೂ ಸಹ ಜನಸ್ನೇಹಿ ಹಾಗೂ ಸಿಬ್ಬಂದಿಗಳ ಸ್ನೇಹಿಯಾಗಿ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ತಾಲೂಕು ಪಂಚಾಯತಿಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ, ಸಹಾಯಕ ಲೆಕ್ಕಾಧಿಕಾರಿಗಳಾದ ಅನ್ವರಹುಸೇನ ನದಾಫ್, ತಾಲೂಕು ಯೋಜನಾಧಿಕಾರಿಗಳಾದ ಮಹಾಂತೇಶ ಬಾಗೇವಾಡಿ, ಸಹಾಯಕ ನಿರ್ದೇಶಕರುಗಳಾದ ಶೋಭಕ್ಕ ಶಿಳೀನ, ಬಸವರಾಜ ಸಂಕಗೊಂಡ ಸೇರಿದಂತೆ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ ನಿರೂಪಿಸಿದರು. ಪಿಡಿಓ ಶ್ರೀಶೈಲ ಹಡಪದ ಸ್ವಾಗತಿಸಿದರು. ಸರ್ವಮಂಗಲಾ ಮುಪ್ಪಯ್ಯನಮಠ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮಹಾದೇವ ವಾಜಂತ್ರಿ ಅವರನ್ನು ಸನ್ಮಾನಿಸಲಾಯಿತು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಣ್ಣೂರಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ7 ಗಂಭೀರ ವಿಷಯ:  ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ*ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಇಲಾಖೆಯಿಂದ ಅಭಿನಂದನೆ* ೧೮ ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ-೨ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು: ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರಮೇ 16 ಕ್ಕೆ ರಾಷ್ಟ್ರೀಯ  ಡೆಂಗ್ಯೂ ದಿನಾಚರಣೆ: ಭಿತ್ತಿ ಪತ್ರ ಬಿಡುಗಡೆತಾಯಿ ಮತ್ತು ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ: ಡಾ.ಸುರೇಶ ಬಿ.ಇಟ್ನಾಳ್ಕೊಪ್ಪಳವನ್ನು ಗೆಲ್ಲಿಸಿ: ಸಿವಿಸಿ ಕರೆಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರ  ರಕ್ಷಣೆಜಿಪಂ ಸಿಇಒ ರಿಷಿ ಆನಂದ ಸಿಬ್ಬಂದಿಗೆ ಕಿವಿಮಾತು