Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಿ - ವಿಜಯ ವಿಠಲ

ಜ್ನಾನಶ್ರೀ ಪ್ರತಿಷ್ಠಾನ, ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ

ಬಳ್ಳಾರಿ:22 ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು, ವರ್ಷಪೂರ್ತಿ ಶಾಲೆಗೆ ತೆರಳಿರುವ ಮಕ್ಕಳು ಬೇಸಿಗೆ ವೇಳೆ ಮನೋರಂಜನೆ, ಕ್ರೀಡೆಗಳ ಕಡೆ ಹೆಚ್ಚು ಗಮನಹರಿಸುತ್ತಾರೆ  ಎಂದು ಕರಾಟೆ ಪಟು, ಜ್ಞಾನಶ್ರೀ ಪ್ರತಿಷ್ಠಾನದ ಅಧ್ಯಕ್ಷ ವಿಜಯ ವಿಠಲ ಅವರು ಹೇಳಿದರು.  ನಗರದ ಎಸ್.ಎನ್.ಪೇಟೆ, ಗಣೇಶ ಕಾಲೋನಿಯಲ್ಲಿ ಜ್ನಾನಶ್ರೀ ಪ್ರತಿಷ್ಠಾನ, ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಕಳೆದ17 ವರ್ಷಗಳಿಂದ ಮಕ್ಕಳಿಗಾಗಿ ಆಯೋಜಿಸಲಾಗುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು, ಆದರೆ, ಅದರ ಜೊತೆಗೆ  ಕ್ರೀಡೆ, ಯೋಗ, ಸಂಗೀತ ಸೇರಿದಂತೆ ಇತರೆ ಚಟುವಟಿಕೆಗಳ ಕಡೆಗೆ ಕೊಂಡೊಯ್ಯಬೇಕು, ಇದರಿಂದ ಮಕ್ಕಳ ಜ್ಞಾನ, ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಸದೃಢವಾಗಿರಲಿದೆ. ಕರಾಟೆ ಪುರುಷರು, ಮಹಿಳೆಯರಿಗೆ ತಮ್ಮ ರಕ್ಷಣೆಗೆ ರಾಮಬಾಣವಿದ್ದಂತೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕರಾಟೆ ತರಬೇತಿ ಪಡೆಯಬೇಕು, ಕರಾಟೆ ಮಹಿಳೆಯರಿಗೆ ರಕ್ಷಾ ಕವಚವಿದ್ದಂತೆ ಎಂದರು.
1ನೇ ತರಗತಿಯಿಂದ ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಶಿಬಿರದಲ್ಲಿ ಉಚಿತ ಕರಾಟೆ ಕಲಿಸಲಾಗುವುದು. ಎಲ್ಲ ಸಹಕಾರದಿಂದ   ಕಳೆದ 17 ವರ್ಷಗಳಿಂದ ಉಚಿತ ಬೇಸಿಗೆ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ.   ಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬಹುದು, ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದರು.  ಸಂದರ್ಭದಲ್ಲಿ ಮಕ್ಕಳ ಪಾಲಕರು, ವಿವಿಧ ಗಣ್ಯರು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST