ಕೋಳಲು ವಾದನದಲ್ಲಿ ಸಾಧನೆ: ಸಿದ್ದಾರ್ಥ ಹಬೀಬಗೆ ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಸನ್ಮಾನ
ಹುಬ್ಬಳ್ಳಿ: ವಿಶ್ವ ಸಂಗೀತ ದಿನ ಅಂಗವಾಗಿ ಕೋಳಲು ವಾದನದಲ್ಲಿ ಸಾಧನೆ ಮಾಡುತ್ತಿರುವ ಬಾಲಕ ಸಿದ್ದಾರ್ಥ ಹಬೀಬ ಅವರಿಗೆ ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ವತಿಯಿಂದ ಪುಷ್ಪ ನೀಡಿ, ಮಾಲಾರ್ಪಣೆ ಮಾಡಿ ಹೃದಯ ಸ್ಪರ್ಶಿಯಾಗಿ, ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ, ಕೋಳಲು ನುಡಿಸುವುದರಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಕೋರಿದರು. ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಅಧ್ಯಕ್ಷ ರೇಖಾ ಚಿನಿವಾಲ, ಹಿಂದಿನ ಅಧ್ಯಕ್ಷ ಭಾರತಿ ವಾಲಿ, ಸುರೇಖಾ ಪಾರಗಾಂವಕರ, ಹೇಮಾ ದೇಶಪಾಂಡೆ, ವೇಂಕಟೇಶ ಭಂಡಾರಿ, ದೀಪಿಕಾ ಹಬೀಬ, ಓಂಕಾರ ಹಬೀಬ, ಮುಂತಾದವರು ಭಾಗವಹಿಸಿದ್ದರು.
ಓಂಕಾರ
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.