Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಮಾರುಕಟ್ಟೆ ಸಮೀತಿಯ ಸಾಮಾನ್ಯ ಸಭೆ


ಮಹಾಲಿಂಗಪುರ,ಮೇ,೧೫ : ಗುರುವಾರ ಮದ್ಯಾಹ್ನ ನಡೆದ ಕೃಷಿ ಮಾರುಕಟ್ಟೆ ಸಮೀತಿಯ ಆಡಳಿತ ಕಚೇರಿಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯು ಅಧ್ಯಕ್ಷ ದೇವಲ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಸದಸ್ಯರ ಸಮ್ಮುಖದಲ್ಲಿ ಜರುಗಿತು.
  ಈ ಸಂದರ್ಭದಲ್ಲಿ ದಿ. ೨೫-೨-೨೦೨೬ ರಂದು ನಡೆದ ಸಮೀತಿಯ ಸಭೆಯ ನಡುವಳಿಕೆಗಳನ್ನು ಓದಿ ದೃಡಿಕರಿಸಲಾಯಿತು. ಈ ಸಮೀತಿಯ ಫೆ. ೨೦೨೬ ಹಾಗೂ ಮಾರ್ಚ ೨೦೨೬ ನೇ ಮಾಹೆಯ ಆದಾಯ ಹಾಗೂ ವೆಚ್ಚದ ವಿವರಗಳನ್ನು ಪರೀಶಿಲಿಸ ಒಪ್ಪಿಗೆ ಪಡೆಯಲಾಯಿತು. ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಾ.ಅ.ಯೋ ವಿಜಯಪುರ ಇವರು ೨೦೨೫-೨೬ ಸಾಲೀನ ಭದ್ರತಾ ಸಿಬ್ಬಂದಿಗಳ ಸೇವೆ ಪಡೆಯಲು ಸಲ್ಲಿಸಿದ ದರಪಟ್ಟಿ ಕುರಿತು ಚರ್ಚಿಸಿದರು. ವಿವಿಧ ಕಟ್ಟಡಗಳ ಹಂಚಿಕೆ ಅವದಿ ಮುಕ್ತಾಯವಾಗಿರುವುದರಿಂದ ಲೀವ ಮತ್ತು ಲೈಸೇನ್ಸ ದರಗಳನ್ನು ತಾಂತ್ರಿಕ ಶಾಖೆಯಿಂದ ಪರಿಷ್ಕ್ರತಗೋಳಿಸಿಕೊಳ್ಳುವ ಕುರಿತು. ೨೦೨೬-೨೭ ಸಾಲೀಗಾಗಿ ಹಮಾಲಿ ಲೈಸೆನ್ಸ ನವೀಕರಣಕ್ಕಾಗಿ ಬಂದ ಅರ್ಜಿಗಳ ಕುರಿತು ಚರ್ಚಿಸಿದರು. ವಿಜಯಪುರದ ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಹಾಲಿಂಗಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯಿಂದ ೮೦ ಎಂ.ಟಿ ಸಾಮರ್ಥ್ಯದ ವಿದ್ಯುನ್ಮಾನ ತೂಕದ ಯಂತ್ರ ನಿರ್ಮಿಸಲು ಲೀಸ ಮೇಲೆ ೧೫ ಗುಂಟೆ ಜಮೀನಿಗೆ ಮಾಸಿಕ ದರ ನಿಗದಿ ಪಡಿಸಲು.ಮತ್ತು ಮಹಾಲಿಂಗಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಇಪ್ರಾಸುಫೊರ್ಟ ೩ನೇ ಪಕ್ಷದ ಸಲಹೆಗಾರ ಸಮೀತಿಯ ವಿವಿಧ ಕಟ್ಟಡಗಳನ್ನು ತೆರವುಗೋಳಿಸಲು ನೀಡಿರುವ ವರದಿಯನ್ನು ಆದರಿಸಿ ಬೆಳಗಾವಿ   ಕಾರ್ಯನಿರ್ವಾಹಕ ಅಭಿಯಂತರರ ಪರೀಶಿಲನಾ ವರದಿ ಕುರಿತು ಹಾಗೂ ಮಹಾಲಿಂಗಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದ ಟೋಟಲ್ ಸ್ಟೇಷನ ಉಪಕರಣದಿಂದ ಸರ್ವೆ ಮಾಡಿ ನೀಲನಕ್ಷೆಯನ್ನು ತಯಾರಿಸಲು ದರ ಸೂಚಿ ಒಪ್ಪಿ ಬಜೆಟ ಮಂಜೂರಾತಿ ಪಡೆದರು. 
   ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಪ್ರಾಂಗಣದಲ್ಲಿ ನಿವೇಶನ ಸಂಖ್ಯೆ ೬೬ ನ್ನು ಲೀಸ ಕಮ್ ಸೇಲ್ ಆದಾರದಿಂದ ಹಂಚಿಕೆ ಪಡೆದ ವರ್ತಕರು ನಿಧನಹೊಂದಿದ ಪ್ರಯುಕ್ತ ಅವರ ವಾರಸುದಾರರಿಗೆ ಖಾತೆ ಬದಲಾಯಿಸುವ ಕುರಿತು ಹಾಗೂ ಇನ್ನು ಹಲವಾರು ವಿಷಯಗಳ ಕುರಿತು ಅಧ್ಯಕ್ಷರ ಅಪ್ಪಣೆಯ ಮೇರಿಗೆ ಚರ್ಚಿಸಿ ಅನುಮೋದನೆ ಪಡೆಯಲಾಯಿತು. 
  ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಉಪಾದ್ಯಕ್ಷ ಸಿದ್ದನಗೌಡ ಪಾಟೀಲ, ಸದಸ್ಯರಾದ ಮಹೇಶ ಚಿಂಚಖಂಡಿ, ದುಂಡಪ್ಪ ಜಾಧವ, ರಾಮಪ್ಪ ಉಳ್ಳಾಗಡ್ಡಿ, ಭರತೇಶ ಶಿರಹಟ್ಟಿ, ಲಕ್ಷ್ಮೀಭಾಯಿ ಹುಂಡರಗಿ, ಹೊಳಬಸಪ್ಪ ತಳವಾರ, ಗುರುನಾಥ ಕಾಂಬಳೆ, ಸಿದ್ದಪ್ಪ ಸೋರಗಾಂವಿ, ಸಿದ್ದಪ್ಪ ಜಳಕಿ, ವಿನಯಕುಮಾರ ಚಮಕೇರಿ ಮತ್ತು  ಕಾರ್ಯದರ್ಶಿ ಧನರಾಜ ಪಟ್ಟಣಶೆಟ್ಟಿ ಇದ್ದರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಣ್ಣೂರಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ7 ಗಂಭೀರ ವಿಷಯ:  ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ*ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಇಲಾಖೆಯಿಂದ ಅಭಿನಂದನೆ* ೧೮ ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ-೨ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು: ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರಮೇ 16 ಕ್ಕೆ ರಾಷ್ಟ್ರೀಯ  ಡೆಂಗ್ಯೂ ದಿನಾಚರಣೆ: ಭಿತ್ತಿ ಪತ್ರ ಬಿಡುಗಡೆತಾಯಿ ಮತ್ತು ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ: ಡಾ.ಸುರೇಶ ಬಿ.ಇಟ್ನಾಳ್ಕೊಪ್ಪಳವನ್ನು ಗೆಲ್ಲಿಸಿ: ಸಿವಿಸಿ ಕರೆಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಕಾರ್ಮಿಕರ  ರಕ್ಷಣೆಜಿಪಂ ಸಿಇಒ ರಿಷಿ ಆನಂದ ಸಿಬ್ಬಂದಿಗೆ ಕಿವಿಮಾತು