Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಜೀವರಾಯನಕೋಟೆಯಲ್ಲಿ ಅದ್ದೂರಿಯಾಗಿ ಗಣೇಶ್ ಉತ್ಸವ

ಬಳ್ಳಾರಿ30./ : ತಾಲ್ಲೂಕಿನ ಸಂಜೀವರಾಯನಕೋಟೆ ಗ್ರಾಮದ ಮೀಂಚೇರಿ ಕುರುಬರ ಓಣಿಯಲ್ಲಿ  ಸಮೃದ್ಧಿಯ ಸಂಕೇತವಾಗಿ ಸ್ವರ್ಣ ಗೌರಿ ಮತ್ತು ವಿಘ್ನ ನಿವಾರಕ ಗಣಪತಿಯನ್ನು ಪ್ರತಿಷ್ಟಾಪಿಸಿ ತಳಿರು ತೋರಣಗಳಿಂದ ಅಲಂಕೃತ ಮಂಟಪಗಳಲ್ಲಿ ಅಲಂಕರಿಸಿ ಪೂಜಿಸಲಾಯಿತು.


ಪೆಂಡಾಲ್‌ ಆವರಣದ ಶಾಶ್ವತ ಮಂಟಪವನ್ನು ಕೊಂಡಪ್ಪನವರ ವಿಜಯನವರ  ಕುಟುಂಬದವರು ನಿರ್ಮಿಸಿದ್ದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಯಿತು.


ಸರ್ವರಿಗೂ ಪ್ರಸಾದ ಮಾಡಿಸಿ ಬಡಿಸುವ ಕಾರ್ಯ ವನ್ನು ಗ್ರಾಮದ ಮೇಘರಾಜ್ ರವರ ಪತ್ನಿ ಅನಂತಮ್ಮ ಎಂಬುವರು ನೇರವೇರಿಸಿದರು. ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ಕೆ ಅಗಮಿಸಿದ   ಬಿಜೆಪಿ ಜಿಲ್ಲಾ ಪ್ರಧಾನಕಾರ್ಯರ್ಶಿ ಆರ್ . ಸೋಮಶೇಖರ ಗೌಡ ಮಾತನಾಡುತ್ತ  ಗ್ರಾಮದ ಮೀಂಚೇರಿ ಕುರುಬರ ಓಣಿಯ ಯುವಕರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಳೆದ 5 ವರ್ಷಗಳಿಂದ ವಿಶೇಷವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಸೌರ್ಹಾದಯುತವಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.


ಗ್ರಾಮ ಪಂಚಾಯತಿ ಸದಸ್ಯ  ಹಾಗೂ ಯುವ ಕಾಂಗ್ರೆಸ್ ಸಮಿತಿಯ ಮೋಕಾ ಮತ್ತ ರೂಪನಗುಡಿ ಬ್ಲಾಕ್ ಅಧ್ಯಕ್ಷ ಉಮೇಶ್ ಗೌಡ ಮಾತನಾಡಿ, ಮಿಂಚೇರಿ ಕುರುಬರ ಓಣಿ ಯುವಕರು ಸಮಿತಿಯು 5 ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು. ವಿಶೇಷವಾಗಿ ಮಹೋತ್ಸವಕ್ಕೆ ಎಲ್ಲಾ ವರ್ಗದ ಭಕ್ತರು ಕೈ ಜೋಡಿಸುವುದು ಹೆಗ್ಗಳಿಕೆಯಾಗಿದೆ, ಈ ಮೂಲಕ ಶಾಂತಿ ಸೌರ್ಹಾದತೆಗೆ ಹೆಸರಾಗಿರುವ ಈ ಗಣಪತಿಯಿಂದಾಗಿ ಗ್ರಾಮದ ಕೀರ್ತಿ ಹೆಚ್ಚಿದೆ ಎಂದರು.


ಗ್ರಾಮದ ಯುವ ಮುಖಂಡ ಹಾಗೂ ಜಿಲ್ಲಾ ವರದಿಗಾರ ಹೊನ್ನುರಸ್ವಾಮಿ ಕೆ ಟಿ ಮಾತನಾಡಿ ಮೀಂಚೇರಿ ಕುರುಬರ ಓಣಿ ನಾಗಪ್ಪ ಕಟ್ಟೆ ಬಳಿ  ಗ್ರಾಮದ ಹಿರಿಯ ಮುಖಂಡರಾದ ಸೋಮನಗೌಡ, ಉಮೇಶ್ ಗೌಡ, ಹಾಗೂ ಗ್ರಾಮಕ್ಕೆ ನೆರಳಂತಿರುವ ಅಲ್ಲಂ ಪ್ರಶಾಂತ್ ಮೈನಿಂಗ್ ಮಾಲಿಕ ಮಾಜಿ ಸಚಿವರಾದ ಅಲ್ಲಂ ವಿರಭದ್ರಪ್ಪನವರ ಪುತ್ರ ಅಲ್ಲಂ ಪ್ರಶಾಂತ್ , ಗ್ರಾಮ ಪಂಚಾಯತಿ ಸದಸ್ಯರುಗಳಾದ ತಳ್ಳೆಪ್ಪ ಹೊನ್ನುರಪ್ಪ,  ಯುವ ಪ್ರೀಯ ತಿಮ್ಮಿ ತಿಮ್ಮಪ್ಪ ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಸುಮಲತ ಮತ್ತು ಅಟೋ ಹೊನ್ನುರಪ್ಪ ಇವರುಗಳ ಸಹಕಾರದಿಂದ  ಇಲ್ಲಿಗೆ 5 ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದೆವೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಸಂಭ್ರಮದಿಂದ ಹಬ್ಬ ಆಚರಿಸಿ ಗ್ರಾಮದ ಜನತೆಯ ಮೆಚ್ಚುಗೆ ಪಡೆದಿದ್ದೆವೆ ಎಂದರು.


 ನಂತರ ವಿಘ್ನ ನಿವಾರಕನನ್ನು ಅದ್ಧೂರಿ ಮೆರವಣಿಗೆಯಲ್ಲಿ ಕೊಂಡೊಯ್ದು ನಿಮಜ್ಜನ ಮಾಡಲಾಯಿತು ಗ್ರಾಮದ ಜನರೆಲ್ಲಾ  ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆ ಜೈಕಾರ ಹಾಕಿದರು.

ಮೆರವಣಿಗೆಯುದ್ದಕ್ಕೂ ಎಲ್ಲೆಡೆ ಭಗವಾದ್ವಜಗಳು ರಾರಾಜಿಸಿದವು. ಡಿಜೆ ವಾದ್ಯಗಳಿಗೆ ಯುವರು ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.ಗಣೇಶನ ಮೆರವಣಿಗೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ನಾಗಪ್ಪ ಕಟ್ಟೆಯಿಂದ ಆರಂಭವಾದ ಗಣೇಶ ನಿಮಜ್ಜನ ಮೆರವಣಿಗೆ ನಂದವರಪ್ಪ ದೇವಸ್ಥಾನ ದಿಂದ ಕಲ್ಲಪನವರ ಅಂಗಡಿ ಸರ್ಕಲ್ ಮಾರ್ಗವಾಗಿ ಪಾಂಡುರಂಗ ದೇವಸ್ಥಾನ, ಊರ ಮುಂದಿನ ಬಸವಣ್ಣನ ದೇವಸ್ಥಾನ ದಿಂದ ಹೆಚ್ ಎಲ್ ಸಿ ಕಾಲುವೆಗೆ  ತೆರಳಿತು. ಅದ್ಧೂರಿಯಾಗಿ ನಡೆದ ಮೀಂಚೇರಿ ಕುರುಬರ ಓಣಿ ಬಾಯ್ಸ್ ನ ಗಣೇಶೋತ್ಸವ ಶಾಂತ ರೀತಿಯಲ್ಲಿ ಮುಕ್ತಾಯವಾಯಿತು.


ಈ ಕಾರ್ಯದಲ್ಲಿ ಯುವಕರುಗಳಾದ ವಿಠಲ, ರಘ, ಡಿಶ್ ಸುದಿಪ್, ಮನೋಜ್, ವಂಶಿ, ನಿಲಮ್ಮನವರ ಸುದಿಪ್, ಪಂಪಾಪತಿಯವರ ಸುದಿಪ್, ಮಾರಿ ಶಂಕರ್ , ಶಿವಶಂಕರ್, ಕಿರಣ, ಸಂದಿಪ್ , ಕಾರ್ತಿಕ್, ನಂದಿಶ್, ತರುಣ್ ಕುಮಾರ್ ಕೆ.ಹೆಚ್, ಪ್ರಜವಲ್, ಗಾದಿಲಿಂಗ, ಶಂಕರ್, ಶಶಿ, ಸೇಖರಿ, ಅಟೋ ಪೊಂಡು ನಾಗ, ನಾಗದೇವ, ವರುಣ್ , ಪಿಟರಿ ಪಾಂಡು, ವಂಶಿ ಇನ್ನಿತರ ಯುವಕರು ಭಾಗಿಯಾಗಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ