Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಪ್ರಧಾನ ಫೀನಿಕ್ಸ್ ಚಿತ್ರೀಕರಣ ಪೂರ್ಣ 



     ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ 'ಫೀನಿಕ್ಸ್'. ಆರ್ ವಾಸುದೇವ ರೆಡ್ಡಿ ಅರ್ಪಿಸುವ, ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

     ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ 'ಫೀನಿಕ್ಸ್' ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ.

      ಬಹಳ ದಿನಗಳ ನಂತರ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಫೀನಿಕ್ಸ್' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಓಂಪ್ರಕಾಶ್ ರಾವ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ದೀಪು ಪಿ.ಆರ್ ಬರೆದಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿರುವ 'ಫೀನಿಕ್ಸ್' ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ಹೆಸರಾಂತ ಸಾಹಸ ನಿರ್ದೇಶಕರು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

      ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ, ಕೃತಿಕ ಲೋಗೊ, ಎಸ್ತರ್ ನರೋನ, ರಂಗಾಯಣ ರಘು, ಅವಿನಾಶ್, ಚಿತ್ರಾ ಶೆಣೈ, ಶ್ರೀಧರ್(ಈ ಟಿವಿ), ಪ್ರಸನ್ನ, ವಿನೋದ್ ಕಿನ್ನಿ, ಮೇಘನಾ ಎಸ್ ಕೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*