Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬುದ್ಧಿಮಾಂದ್ಯ ಮಕ್ಕಳ ಜೊತೆ ಫ್ರೆಂಡ್‌ಶಿಪ್ ಡೇ

ಮಹಾಲಿಂಗಪುರ : ವಿಶೇಷ ದಿನದಂದು ಪ್ರೇಕ್ಷಣೀಯ ಸ್ಥಳ ಅಥವಾ ದೇವಸ್ಥಾನಗಳಿಗೆ ಭೇಟಿಯಾಗುವುದು ವಾಡಿಕೆ. ಆದರೆ ಪಟ್ಟಣದ ಕೆಎಲ್‌ಇ ಸಂಸ್ಥೆಯ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಕಾಲೇಜಿನ ಶೈಕ್ಷಣಿಕ ವರ್ಷ ಆರಂಭದ ವಿಶೇಷ ದಿನದಂದು ಎಂಬ ವಿಶೇಷ ದಿನದಂದು ವಿಶೇಷ ವ್ಯಕ್ತಿಗಳಿರುವ, ದೇವರ ಸ್ವರೂಪದಂತಿರುವ ಬುದ್ದಿಮಾಂದ್ಯ ಮಕ್ಕಳಶಾಲೆಗೆ ಭೇಟಿ ನೀಡಿ ಕಳಕಳಿ ಮೆರೆದಿದ್ದಾರೆ.
ಮುಧೋಳದ ಬಳ್ಳೂರ ಪ್ಲಾಟ್‌ನಲ್ಲಿರುವ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಫ್ರೆಂಡ್‌ಶಿಪ್ ಡೇ ಆಚರಿಸಿ ಅವರಿಗೆ ಸಿಹಿ ಮತ್ತು ಖಾರಾ ತಿಂಡಿ ತಿನ್ನಿಸಿ ವಿಶೇಷವಾಗಿ ಹೊತ್ತುಗಳೆದರು. ಅವರಿಗೆ ಕಲಿಸುವುದಕ್ಕಿಂತ ಅವರಿಂದ ಕಲಿಯುವುದು ತುಂಬಾ ಇದೆ ಎಂಬುದನ್ನು ಮನಗಂಡರು.

ಶಾಲೆಯವರು ಮಕ್ಕಳಿಗಾಗಿ ಒಂದು ದಿನಕ್ಕಾಗುವಷ್ಟು ರೇಷನ್ ಸಾಮಾನು ಕೊಡಿಸಿ, ಇಲ್ಲವೇ ನೆನಪುಳಿಯುವಂಥ ಕಾಣಿಕೆ ನೀಡಿರಿ ಎಂದು ಬೇಡಿಕೆ ಇಟ್ಟಾಗ ಸಂತೋಷದಿಂದ ಒಪ್ಪಿಕೊಂಡ ಡಿಪ್ಲೋಮಾ ಕಾಲೇಜ್ ಸಿಬ್ಬಂದಿ ಅದರ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಾಚಾರ್ಯ ಎಸ್‌ಐ.ಕುಂದಗೋಳ, ಉಪನ್ಯಾಸಕರಾದ ವಿಶಾಲ ಮೆಟಗುಡ್ಡ, ಅಮೀತ ಜಾಧವ, ಮಂಜುನಾಥ ಅರಕೇರಿ, ಮಿನಾಜ ಅತ್ತಾರ ಇದ್ದರು.
ಮಕ್ಕಳ ಮುಗ್ಧತೆ, ನಗುವಿನ ಸ್ನಿಗ್ಧತೆ, ನಿಷ್ಕಪಟತೆ ಮುಕ್ತತೆಯ ನಡೆ ಕಂಡು ಕರುಳು ಕಿವುಚಿದಂತಾಯಿತು. ದುರ್ಬುದ್ದಿಯ ಜನರಿಗೆ ಹೋಲಿಸಿದರೆ ಈ ಮಕ್ಕಳೇನೂ ಬುದ್ದಿಮಾಂದ್ಯರಲ್ಲ, ನಿಜವಾಗ್ಲೂ ಇವರೇ ಶುದ್ದಬುದ್ದಿಯವರು ಅಂತ ಅನ್ನಿಸಿತು. ಫ್ರೆಂಡ್‌ಶಿಪ್ ಡೇ ನಿಮಿತ್ತ ಒಂದಿಷ್ಟು ಕಾಲ ಇವರೊಂದಿಗೆ ಕಳೆದಿದ್ದು ನಮಗೂ ಖುಷಿ ತಂದಿತು. ಅವರ ಬೇಡಿಕೆಗೆ ಸ್ಪಂದಿಸುತ್ತೇವೆ.
- ಎಸ್.ಐ.ಕುಂದಗೋಳ ಪ್ರಾಚಾರ್ಯ ಕೆಎಲ್‌ಇ ಪಾಲಿಟೆಕ್ನಿಕ್ ಮಹಾಲಿಂಗಪುರ
ಫೋಟೋ: ೫ ಎಂಎಲ್‌ಪಿ ೨
ಮಹಾಲಿಂಗಪುರದ ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಸಿಬ್ಬಂದಿ ಮುಧೋಳದ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಅವರ ಬೇಡಿಕೆಗೆ ಸ್ಪಂದಿಸಿದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ