Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉದಯ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸನ್ಮಾನ  

ಗದಗ ೦೬:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೇಯಸ್ ರಕ್ತ ತಪಸಣಾ ಕೇಂದ್ರದ ಸಹಯೋಗದಲ್ಲಿ ಉದಯ ಕೇಶವನಗರ ಗಣೇಶೋತ್ಸವ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ರಕ್ತ ತಪಾಸಣೆ ಮಧುಮೇಹ ತಪಾಸಣೆ ಜೊತೆಗೆ ರಕ್ತದಾನ, ನೇತ್ರದಾನ, ಅಂಗಾಂಗದಾನಗಳ ಜಾಗೃತಿ ಶಿಬಿರ ನಡೆಯಿತು. ೧೦೦ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾದಿಕಾರಿ ಡಾ.ಎಸ್.ಕೆ.ನೀಲಗುಂದ   ಮನುಷ್ಯರಲ್ಲಿ ರೋಗ ಉಂಟಾಗಲು ಆಹಾರ, ಆಹಾರಕ್ರಮ, ಸಮುಚಿತ ಆಹಾರ ವಿಹಾರಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹದಲ್ಲಿ ಹೊಸರಕ್ತ ಉತ್ಪತ್ತಿಯಯಾಗಲು ವೈದ್ಯರ ಸಲಹೆಯ ಮೇರೆಗೆ ರಕ್ತದಾನ ಮಾಡಬೇಕು. ಇದರಿಂದ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳಿಂದ ದೂರವಿರಬಹುದು. ಅಂಗಾಂಗದಾನ ಶ್ರೇಷ್ಠದಾನ ಇದರಿಂದ ಹಲವಾರು ಜೀವಗಳನ್ನು ಉಳಿಸಬಹುದು ಎಂದು ಸಲಹೆ ನೀಡಿದರು. ಶ್ರೀಮತಿ ರೇಖಾ ದೀಪಕ ಕಲ್ಲಣ್ಣವರ ಎಲ್ಲ ತಜ್ಞ ವೈದ್ಯರ ಪರಿಚಯ ಮಾಡುತ್ತ ಅವರ ವೈದ್ಯಕೀಯ ಸೇವೆಗಳ ಮಾಹಿತಿ ನೀಡಿದರು. ಪ್ರಭು ಬುರಬುರೆಯವರು ಶಿಬಿರದ ಕಾರ್ಯಕ್ರಮಗಳನ್ನು ಮೆಚ್ಚಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.


ಸಾನಿಧ್ಯ ವಹಿಸಿದ್ದ ಮಹೇಶ್ವರ ಸ್ವಾಮಿಗಳು, ಪ್ರಭು ಬುರಬುರೆ ಜಿಲ್ಲಾ ಆರೋಗ್ಯಾದಿಕಾರಿ ಡಾ.ಎಸ್.ಎಸ್.ನೀಲಗುಂದ, ಡಾ.ಪ್ರಕಾಶ ಗುಂಡೂರ, ಡಾ.ಅರ್ಪಿತಾ ಬಿರಾದಾರ, ಡಾ.ದೇವೇಂದ್ರ ಶ್ರೀಮತಿ ರೇಖಾ ಕಲ್ಲಣ್ಣವರ, ಜಿ.ಎಮ್.ಯಾನಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಬಿ.ಪಿ.ಹುಚ್ಚಣ್ಣವರ ಸಂದರ್ಭೋಚಿತವಾಗಿ ಮಾತನಾಡುತ್ತ ದೇವೇಂದ್ರ ಕಳಸಾಪೂ ಹಾಗೂ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದರು. ಪ್ರಮೋದ ರಾಯಕರ, ದೀಪಕ ಕಲ್ಲಣ್ಣವರ ವಿಶಾಲ ಬಾಕಳೆ, ಮಲ್ಲಿಕಾರ್ಜುನ ತೊಂಡಿಹಾಳ, ಬಸವರಾಜ ನುಗ್ಗಿಕಾರಿ, ಮಾಲಿಪಾಟೀಲ, ಅಮೃತರಾವ್, ವಿರಕ್ತಮಠ, ಹಾಗೂ ಇನ್ನಿತರರು ಶಿಬಿರದಲ್ಲಿ ಉಪಸ್ಥಿತರಿದ್ದರು. ಮನಸ್ವಿ ಹಾಗರಕಿ ಪ್ರಾರ್ಥಿಸಿದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು, ಜಿ.ಎಂ.ಯಾನಮಶೆಟ್ಟಿ ನಿರೂಪಿಸಿದರು, ಸಜ್ಜನಅವರು ವಂದಿಸಿದರು ಎಂದು ಸಂತೋಷ ಕುರ್ಡೆಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ