Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಉಚಿತ ಕಾಲು ಬಾಯಿ ರೋಗಕ್ಕೆ ಲಸಿಕಾ ಅಭಿಯಾನ

ಪೂರ್ವ ಸಿದ್ದತಾ ಸಭೆ | ಎಪ್ರೀಲ್ ೨೩ ರಿಂದ ಮೇ ೨೨ ವರೆಗೆ ಲಸಿಕೆ

ಬಾಗಲಕೋಟೆ, ಎಪ್ರೀಲ್ ೨೨ : ಜಿಲ್ಲೆಯ ಜಾನುವಾರುಗಳಿಗೆ ಎಪ್ರೀಲ್ ೨೩ ರಿಂದ ಮೇ ೨೨ ವರೆಗೆ ೯ನೇ ಸುತ್ತಿನ ಜಾನುವಾರುಗಳ ಕಾಲು ಬಾಯಿ ರೋಗಕ್ಕೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ತಿಳಿಸಿದರು.  
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ೯ನೇ ಸುತ್ತಿನ ಜಾನುವಾರುಗಳ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಪೂರ್ವಭಾವಿ ಸಿದ್ಧತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಸಿಕಾ ಕಾರ್ಯಕ್ರಮದ ಜೊತೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆ ಮತ್ತು ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಎಚ್.ಕರಡಿಗುಡ್ಡ, ಲಸಿಕಾ ಕಾರ್ಯಕ್ರಮದ ಸಿದ್ದತೆ ಕುರಿತು ವಿವರಣೆ ನೀಡಿದರು. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ೬ ತಿಂಗಳಿಗೊಮ್ಮೆ ಕಾಲು ಬಾಯಿ ರೋಗದ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಜಾನುವಾರುಗಳಿಗೆ ಈ ರೋಗ ಬಂದ ನಂತರ ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸದರಿ ಲಸಿಕೆ ಹಾಕಿಸಿ ರೋಗ ನಿಯಂತ್ರಿಸಲು ಮತ್ತು ಕಾಲು ಬಾಯಿ ರೋಗ ಮುಕ್ತ ಜಿಲ್ಲೆ ಹಾಗೂ ರಾಜ್ಯವನ್ನಾಗಿ ಮಾಡಲು ಇದೊಂದು ಉತ್ತಮ ಮಾರ್ಗ ಎಂದು ತಿಳಿಸಿದರು.   
     ೨೦ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೧೫,೨೮,೧೫೮ ಜಾನುವಾರುಗಳಿದ್ದು, ಸದ್ಯ ೧೧೭೫೦ ಡೋಜ್ ಲಸಿಕೆ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಒಟ್ಟು ೩೯೩೮ ಬ್ಲಾಕ್‌ಗಳನ್ನು ಮಾಡಲಾಗಿದೆ. ಇಲಾಖೆಯ ಹಾಗೂ ಇಲಾಖೇತರ ಸೇರಿ ಒಟ್ಟು ೫೨೪ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಲಸಿಕೆದಾರರು ಮನೆ ಬಾಗಿಲಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ರೈತ-ಬಾಂಧವರು ಲಸಿಕಾ ಸಿಬ್ಬಂದಿಗಳಿಗೆ ಸಹಕರಿಸಿ, ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ತಿಳಿಸಿದರು. 
ಈ ಸಂದರ್ಭದಲ್ಲಿ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಕೆ.ಎಂ.ಎಫ್‌ನ ಅಧಿಕಾರಿಗಳು, ಜಿಲ್ಲಾ ನಿರ್ವಹಣಾ ಸಮಿತಿ ಸದಸ್ಯ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆ – ಅಥಣಿ-ಪುಣೆ ಹಾಗೂ ಅಥಣಿ-ಕೊಲ್ಲಾಪುರ ಬಸ್ ಸೇವೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆಪ್ರಥಮ ವರ್ಷದ ಪಿಯುಸಿಕಾಲೇಜಿಗೆ ಪ್ರವೇಶ ಪ್ರಾರಂಭವಾಗಿರುವುದು ಸಂತಸ ತಂದಿದೆ : ಪಾಸೋಡಿಬಳ್ಳಾರಿ: ರಾಷ್ಟಿçÃಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆಮೋಳೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ; ಕಾಂಗ್ರೆಸ್ ಮುಖಂಡರಿAದ ಶಾಸಕ ರಾಜು ಕಾಗೆಯವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ..!! ರನ್ನ ಬೆಳಗಲಿ ಪಟ್ಟಣದ ಪಿಕೆಪಿಎಸ್ ಅಧ್ಯಕ್ಷರಾಗಿ ನಿಂಗಪ್ಪ ಆರೇನಾಡ, ಉಪಾಧ್ಯಕ್ಷರಾಗಿ ಯಮನಪ್ಪ ಚಂದಪ್ಪನವರ ಆಯ್ಕೆ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಬ್ರೇಕ್ ಹಾಕಿ, ಅಗತ್ಯ ಪ್ರಮಾಣದ ಯೂರಿಯಾ ಒದಗಿಸಿ: ರೈತ ಸಂಘದಿಂದ ತಹಶೀಲ್ದಾರ್, ಕೃಷಿ ಅಧಿಕಾರಿಗೆ ಮನವಿ.ಕುಂಟೋಜಿ ಗ್ರಾಮದಲ್ಲಿ ನೀರಿನ ಬರೆ; ಗ್ರಾಪಂ ಮುಂದೆ ಅರೆಬೆತ್ತಲೆ ಪ್ರತಿಭಟನೆ!ಕ್ರಮ ಮರಳು ಅಡ್ಡೆಗಳ ಮೇಲೆ ಮತ್ತೆ ಲೋಕಾಯುಕ್ತರ ದಾಳಿ - ಅವಳಿ ತಾಲೂಕಿನ ೮ ಕಡೆಗಳಲ್ಲಿ ೮ ತಂಡಗಳಿಂದ ದಾಳಿ : ಧಂದೆಗೆ ಬಯಸುತ್ತಿದ್ದ ಟಿಪ್ಪರ್, ಹಿಟಾಚಿ ವಶ ಸಂತ್ರಸ್ತರ ಧರಣಿ ೨೦ನೆಯ ದಿನಕ್ಕೆಸಂಸ್ಕಾರಯುತ ವಿಚಾರಗಳನ್ನು ಅಳವಡಿಸಿಕೊಂಡಾಗ ಬದುಕು ಸುಂದರ : ಅಭಿನವ ಯಚ್ಚರ ಸ್ವಾಮೀಜಿ