Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಿದು ಬಂದ ಭಕ್ತಸಾಗರ : ಸಂಭ್ರಮದಿಂದ ಜರುಗಿದ ಕೋಟೆ ಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ



ಬಳ್ಳಾರಿ. ಫೇ. 02 : ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮ  ರಥೋತ್ಸವವ ಇಂದು ಸಂಜೆ ಸಾವಿರಾರು ಭಕ್ತರ ಶ್ರದ್ಧೆ ಮತ್ತು ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು, ನಗರದ ತೇರು ಬಜಾರು ರಸ್ತೆಯಲ್ಲಿರುವ ಸಣ್ಣ ಮಲ್ಲೇಶ್ವರ ಗುಡಿ ಮುಂದೆ ಬೆಳಿಗ್ಗೆಯಿಂದಲೇ ರಥಕ್ಕೆ ವಿಶೇಷ ಪೂಜೆ ನಡೆಯಿತು.

 ಇಂದು ಬೆಳಗಿನದಲ್ಲಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ  ಮುಂಜಾನೆ 10.15ರ ಕ್ಕೆ ನೂರಾರು ಭಕ್ತರು ಸೇರಿಕೊಂಡು ಮಡಿ ತೇರನ್ನು ಎಳೆದರು.  ಸಂಜೆ 4.15ಕ್ಕೆ  ತೆರಿಗೆ ವಿವಿಧ ಪುಷ್ಪ ಅಲಂಕಾರಗಳೊಂದಿಗೆ ಮತ್ತು ಬಾಳೆ ದಿಂಡು ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ  ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಗರದ ಭಕ್ತರೊಂದಿಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರ ಸಂಭ್ರಮದ ನಡುವೆ ತೇರು ಸಾಗಿತು.

ಬ್ರೂಸ್‌ಪೇಟೆ ಠಾಣೆ ಮುಂಭಾಗ ದಿಂದ ಮುಂದುವರಿದ ತೇರು ದೊಡ್ಡ ಮಾರುಕಟ್ಟೆ, ನೀಲಕಂಠೇಶ್ವರ ಗುಡಿ ಮೂಲಕ ಕಣೇಕಲ್ಲು ಬಸ್‌ ನಿಲ್ದಾಣ ಸಮೀಪದವರೆಗೂ ಸಾಗಿ ಹಿಂದಿರುಗಿತು. ಬಜಾರು ರಸ್ತೆಯ ಅಕ್ಕ ಪಕ್ಕದಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಭಕ್ತರು ತೇರಿಗೆ ಹೂವು ಹಣ್ಣು  ಅರ್ಪಿಸಿ ಹರಕೆ ತೀರಿಸಿದರು.

 ರಥವನ್ನು ಎಳೆಯಲು ಭಕ್ತರು ನಾ ಮುಂದು ತಾ ಮುಂದು ಎಂದು ನೂಕು ನುಗ್ಗಲಿನಲ್ಲಿ ರಥದ ಸಮೀಪಕ್ಕೆ ಹೋಗಲು ಪ್ರಯತ್ನಿಸಿದಾಗ ಒಬ್ಬರಿಗೊಬ್ಬರು ತಳ್ಳಾಡಿದ ಪ್ರಸಂಗ ಜರುಗಿತು. ಪರಿಣಾಮವಾಗಿ ತಳ್ಳಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು ಕಂಡು ಬಂತು . ತೇರಿಗೆ ಎಸೆದ ಬಾಳೆಹಣ್ಣುಗಳ ಮೇಲೆ ಕಾಲಿಟ್ಟ ಭಕ್ತರು ಜಾರಿ ಬಿದ್ದ ಪ್ರಸಂಗವೂ ನಡೆಯಿತು.

ತೇರು ಬಜಾರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಲಕ್ಷಾಂತರ ಭಕ್ತರು  ಮತ್ತು ವಾಹನ ದಟ್ಟಣೆ ಅತಿಹೆಚ್ಚಿನಲ್ಲಿ ಸೇರಿತ್ತು.

 ಈ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮೇಯರ್ ಪಿ ಗಾದೆಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ವಿಕ್ಕಿ, ರಾಮಾಂಜಿನಿ, ಬಿ ಆರ್ ಎಲ್ ಸೀನಾ  ಮುಖಂಡರಾದ ವಿಷ್ಣು ಭಯ ಪಾರ್ಟಿ ಚಾನಾಳ್ ಶೇಖರ್ ಸೇರಿದಂತೆ ಇತರ ಮುಖಂಡರುಗಳಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ