Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಇಲಾಖೆಯ ಕಟ್ಟಡದ ಉದ್ಘಾಟನೆಕಾರ್ಯಕ್ರಮದಲ್ಲಿ ಗೊಂದಲ; ಹಾಲಿ-ಮಾಜಿ ಶಾಸಕರ ಜಟಾಪಟಿ

ಜಮಖಂಡಿ; ನಗರದ ಕೃಷಿ ಇಲಾಖೆಯ ಆವರಣದಲ್ಲಿ ನೂತನವಾಗಿ 2.50ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೃಷಿ ಇಲಾಖೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ಸೋಮವಾರ ನಡೆದಿದೆ. ಕಾರ್ಯಕರ್ತರು ಮತ್ತು ಮುಖಂಡರ ಮಾತಿನ ಚಕಮಕಿ ನಡೆಸಿ ಕಟ್ಟಡದ ಉದ್ಘಾಟನೆನಡೆಯದೇ ಕಾರ್ಯಕ್ರಮ ಅರ್ಧಕ್ಕೆ ನಿಂತ ಘಟನೆ ನಡೆಯಿತು. ಪ್ರೊಟೊಕಾಲ್‌ ಪ್ರಕಾರ ಮಾಜಿ ಶಾಸಕ ಆನಂದ ನ್ಯಾಮಗೌಡ ಕಾರ್ಯಕ್ರಮದ ವೇದಿಕೆಯಲ್ಲಿರಬಾರದು ಎಂದು ಹಾಲಿ ಶಾಸಕ ಜಗದೀಶ ಗುಡಗುಂಟಿ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಆಕ್ಷೇಪ ವ್ಯಕ್ತ ಪಡಿದರು, ಅವರು ವೇದಿಕೆಗೆ ಬಂದರೇ ಪ್ರೋಟೋಕಾಲ್‌ನ ಮಹತ್ವವೇನು ಉಳಿಯುತ್ತದೆ. ಅಧಿಕಾರಿಗಳನ್ನು ಅಮಾನತ್ತು ಗೊಳಿಸುತ್ತೇವೆ ಎಂದು ಎಚ್ಚರಿಸಿರು. ಅಲ್ಲದೇ ಮೊದಲಿಗೆ ವೇದಿಕೆಗೆ ಅಳವಡಿಸಿದ್ದ ಫಕ್ಸಬೋಲ್ಡ ತೆಗೆಯಿಸಿ, ಶಾಸಕ ಮತ್ತು ಸಚಿವರ ಭಾವಚಿತ್ರವಿರುವ ಫಕ್ಸಬೋಲ್ಡನ್ನು ಅಳವಡಿಸಿ ಕಾರ್ಯಕ್ರಮ ನಡೆಸಲು ಮುಂದಾದರು. ಇದರಿಂದ ಗೊಂದಲದ ಸ್ಥಿತಿ ನಿರ್ಮಾಣವಾಯಿತು, ಸ್ಥಳದಲ್ಲಿದ್ದ ನಗರಸಭೆಯ ಅಧ್ಯಕ್ಷ ಪರಮಾನಂದ ಗೌರೋಜಿ ಆಕ್ಷೇಪ ವ್ಯಕ್ತ ಪಡಿಸಿದರು. ಕಟ್ಟಡಕ್ಕೆ ಅಳವಡಿಸಿದ್ದ ಕಲ್ಲಿನ ನಾಮಫಲಕದಲ್ಲಿ ನಗರದ ಪ್ರಥಮ ಪ್ರಜೆಯ ಹೆಸರಿಲ್ಲ. ಅದನ್ನು ಬದಲಿಸಿರಿ, ವೇದಿಕೆಯ ಫಕ್ಸ ಬದಲಿಸಿದಂತೆ ಕಲ್ಲಿನ ಫಲಕವನ್ನು ಬದಲಿಸುವಂತೆ ಆಗ್ರಹಿಸಿದರು. ಇದರಿಂದ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಘಟನಾ ಸ್ಥಳಕ್ಕೆ ಆಗಮಿಸಿದ ಸಚಿವ ತಿಮ್ಮಾಪೂರ ಇಬ್ಬರೂ ಶಾಸಕರ ಮನ ಒಲಿಸಲು ಪ್ರಯತ್ನಿಸಿ ವಿಫಲರಾದರು. ಗೊಂದಲ ತಿಳಿಗೊಳ್ಳದ ಕಾರಣ ಉದ್ಘಾಟನಾ ಕಾರ್ಯಕ್ರಮ ನಿಂತು ಹೋಯಿತು. ಸಚಿವರು ಸಮಸ್ಯೆ ಬಗೆ ಹರಿದ ನಂತರ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ತಿಳಿಸಿ ಹೊರಟು ಹೋದ ಘಟನೆ ನಡೆಯಿತು.

ಮಾಜಿ ಶಾಸಕ ಆನಂದ ನ್ಯಾಮಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಪಿಟೀಷನ್‌ ಮಾಡಬೇಕಾದರೇ ನಿವು ಯಾವ ಅನುದಾನ ತಂದು ಅಭಿವೃದ್ಧಿ ಕಾರ್ಯಮಾಡಿದ್ದೀರಿ ತಿಳಿಸಿರಿ ಎಂದು ಸವಾಲು ಹಾಕಿದರು, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪಿಡಬ್ಲುಡಿ ಸಚಿವ ಸತೀಶ ಜಾರಜಿಹೊಳಿ ಅವರ ಇಲಾಖೆಯಿಂದ ಬೈಪಾಸ್ ರಸ್ತೆ ನಿರ್ಮಾಣಕ್ಕೆ 65 ಕೋಟಿರೂ. ಅನುದಾನ ಮಂಜೂರು ಮಾಡಿಸಿದ್ದೇನೆ, ಅಲ್ಪ ಸಂಖ್ಯಾತರ ಇಲಾಖೆಯಿಂದ ವಸತಿ ಶಾಲೆಯ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದೇನೆ. ಅಧಿಕಾರ ವಿಲ್ಲದಿದ್ದರೂ ಸಹ ಜಮಖಂಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು. ನಮ್ಮ ಜೊತೆಗೆ ಕೈಜೋಡಿಸಿರಿ, ಸಣ್ಣ ವಿಚಾರಕ್ಕೆ ರಾಜಕೀಯ ಮಾಡಬಾರದು ಎಲ್ಲರೂ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು. ಇಂಥಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿರಿ ಎಂದು ಒತ್ತಾಯಿಸಿದರು. ಹಿಂದಿನ ಅವಧಿಯಲ್ಲಿ ತಾವು ಶಾಸಕರಾಗಿದ್ದಾಗ ಕೃಷಿ ಸಚಿವರಿಗೆ ಒತ್ತಾಯಿಸಿ 2.5 ಕೋಟಿ ಅನುದಾನದಲ್ಲಿ ಸುಸಜ್ಜಿತ ಕಟ್ಟಡದ ನಿರ್ಮಾಣವಾಗಿತ್ತು. ಸರ್ಕಾರ ಅನುದಾನ ನೀಡಿದೆ. ಶಾಸಕರ ಅನುದಾನ ಬೇರೆ ಅಂಗನವಾಡಿ, ದೇವಸ್ಥಾನ, ಸಣ್ಣಪುಟ್ಟ ರಸ್ತೆ ಅಭಿವೃದ್ಧಿಗೆ 2 ಕೋಟಿ ವರ್ಷಕ್ಕೆ ಇರುತ್ತದೆ. ಶಾಸಕರ ಇಚ್ಛಾಶಕ್ತಿಯಿಂದ ಉಳಿದ ಅಭಿವೃದ್ಧಿ ಮಾಡಬೇಕಾಗುತ್ತದೆ. ಜಮಖಂಡಿಯಲ್ಲಿ ಪ್ರೋಟೋಕಾಲ್‌ ನೋಡಿಲ್ಲ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಹಾಗೂ ತಾವು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಯಾವುದೇ ದ್ವೇಶದ ರಾಜಕಾರಣ ಇರಲಿಲ್ಲ ಈಗ ಪ್ರಾರಂಭವಾಗಿದ್ದು ನೋವಾಗಿದೆ ಎಂದು ಹೇಳಿದರು. ಜನಪರ ಕೆಲಸ ಮಾಡಬೇಕೆ ವಿನಹ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ ಎಂದು ಹೇಳಿದರು. ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಅಬುಬಕರ ಕುಡಚಿ, ಬಸವರಾಜ ಹರಕಂಗಿ, ಮೀರಾ ವಂಟಮುರಿ, ಸಿದ್ದು ಮೀಸಿ, ಶಶಿಧರ ಮೀಸಿ, ನಿಂಗಪ್ಪ ಕಡಪಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಟ್ಟಿಹಾಳ, ತಹಸೀಲ್ದಾರ ಸದಾಶಿವ ಮಕ್ಕೊಜಿ ಸೇರಿದಂತೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಖು ಸಿಬ್ಬಂದಿ ಮುಂತಾದವರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ