Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬುಡ್ಗಜಂಗಮ ಕಾಲೋನಿಗೆ ಮಾಜಿ ಸಚಿವ ಎಚ್.ಆಂಜನೇಯ ಭೇಟಿ



 ವಿಜಯನಗರ ( ಹೊಸಪೇಟೆ ). ಜೂ. 09. ರಾಜ್ಯ  ಸರ್ಕಾರ ಪರಿಶಿಷ್ಟ ಜಾತಿಯ ಜನಗಣತಿಯನ್ನು ನಡೆಸುತ್ತಿದ್ದು ಇದರ ಜಾಗೃತಿಗಾಗಿ ಮಾಜಿ ಸಚಿವ ಎಚ್ ಆಂಜನೇಯ ಹೊಸಪೇಟೆ ನಗರದ ಬುಡ್ಗ  ಜಂಗಮ ಕಾಲೋನಿಗೆ ಭೇಟಿ ನೀಡಿ  ಸಮುದಾಯದ ಜನರನ್ನು ಉದ್ದೇಶಿಸಿ   ಮಾತನಾಡಿ,  ಬೇಡ ಅಥವಾ ಬುಡ್ಗಜಂಗಮ ಜಾತಿ ಸಮಾಜದಲ್ಲಿ ತೀರಾ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದೆ, ಇವರಿಗಾಗಿ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿರುತ್ತದೆ. ಈ ಮೀಸಲಾತಿಯನ್ನು ವೀರಶೈವ ಜಂಗಮ ಜನಾಂಗವು ನಾವು ಬೇಡ ಜಂಗಮ ಎಂದು ಗಣತಿದಾರರಿಗೆ  ತಪ್ಪು ಮಾಹಿತಿಯನ್ನು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ, ಬೇಡ ಜಂಗಮ ಎಂದರೆ ಬೇಡಿ ತಿನ್ನುವುದಲ್ಲ, ಬೇಟೆಯಾಡಿ ತಿನ್ನುವುದು ಬೇಟೆಯಾಡಿ ತಿನ್ನುವವರನ್ನು ಬೇಡ ಎಂದು ಕರೆಯಲಾಗುತ್ತದೆ, ಆದರೆ ಜಂಗಮರು ಬೇಡಿ ತಿನ್ನುವ ಜಂಗಮರಾಗಿದ್ದಾರೆ,  ಬೇಡ ಜಂಗಮ ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದ ಜನಾಂಗವಾಗಿರುತ್ತದೆ. ಇವರ  ಆಹಾರ ಪದ್ದತಿ ಬೇರೆ ಇವರು ನರಿ, ಬೆಕ್ಕು, ಇಲಿ ಇತ್ಯಾದಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದರು, ಅವರು ಆಹಾರ ಮತ್ತು ಉಳಿದ ಮಾಂಸಗಳಿಗೆ ಗ್ರಾಮದಲ್ಲಿನ ಮಾದಿಗರ ಮನೆಗೆ ಬಂದು ಬೇಡಿಕೊಂಡು ಮಾಂಸವನ್ನು ಬೇಡಿ ತಿನ್ನುತ್ತಿದ್ದರು. ಈ ಬೇಡ ಜಂಗಮ ಜೊತೆಗೆ ಬುಡ್ಗ ಜಂಗಮ ಎಂದು ಬಂದಿತ್ತು, ಈಗ ಬೇಡ ಜಂಗಮ ಎನ್ನುವವರು ನಶಿಸಿ ಹೋದ ಜನಾಂಗವಾಗಿರುತ್ತದೆ. ಆಗ ಅವರು ಮಾಡುತ್ತಿದ್ದಂತ ಕಸುಬು ಏನು ಮಾದಿಗರ ಮನೆಯಲ್ಲಿ ಬೇಡಿ ತಿನ್ನುವುದು, ಕಾಡು ಮೇಡುಗಳಲ್ಲಿ, ಬೇರೆ ಊರಿಗೆ ಹೋದಾಗ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು.  ಬಟ್ಟಿ ಸಾರಾಯಿಯನ್ನು ಮಾಡುವುದು ಇವರ ಕಸಬಾಗಿತ್ತು ಇದು ಯಾವುದು ಇಲ್ಲದೆ ವೀರಶೈವ  ಬೇಡಿ ಜಂಗಮರು ಸುಖ ಸುಮ್ಮನೆ ನಾವು ಸಹ ಬೇಡ ಜಂಗಮರು ಎಂದು ಹೇಳಿ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ,  ಬೇಡ ಎನ್ನುವ ಜಾತಿಯನ್ನು ಇಟ್ಟುಕೊಂಡು ನಕಲಿ ಜಾತಿ ಪ್ರಮಾಣವನ್ನು ಪಡೆದುಕೊಳ್ಳುವುದು ಹಾಗೂ ಇವರ ಹಕ್ಕನ್ನು ಕಸಿದುಕೊಳ್ಳುವಂತದ್ದು ಇವರು ಮಾಡುತ್ತಿದ್ದಾರೆ. ಈ ಬೇಡ ಜಂಗಮರು ಎನ್ನುವವರು ಇಲ್ಲ. ಈಗ ಬೇಡ ಜಂಗಮರು ಹಾಗೂ ಬುಡ್ಗ ಜಂಗಮರು ಎನ್ನುವುದು ಸಮಾನ ಪದವಾಗಿದೆ. ಈ ಪ್ರಾಂತ್ಯದಲ್ಲಿ ಬುಡ್ಗ ಜಂಗಮ ಎನ್ನುವವರು ಇದ್ದಾರೆ. ಇವರು ಆಂಧ್ರಪ್ರದೇಶದಿಂದ ಒಲಿಸಿ ಬಂದವರಾಗಿರುತ್ತಾರೆ.  ಈ ಸಮುದಾಯ ಹಾಗೂ ವೀರಶೈವ ಸಮುದಾಯಕ್ಕೆ ಯಾವುದೇ ಸಂಬಂಧ ಇರುವುದಿಲ್ಲ . ಒಂದು ಷೆಡ್ಯೂಲ್ ಕ್ಯಾಸ್ಟ್ ಪಟ್ಟಿಯಲ್ಲಿರುವಂತ ಒಂದೇ ಕಾರಣಕ್ಕೆ ಅದನ್ನು ಬೇಡಿ ಜಂಗಮನ್ನು ಬಿಟ್ಟು ಬೇಡನ ಸೇರಿಸಿಕೊಂಡು ನಕಲಿ ಪ್ರಮಾಣ ಪತ್ರವನ್ನು ಪಡೆದು ನೌಕರಿಯನ್ನು ಪಡೆಯುತ್ತಾರೆ. ಅದು ಕಾನೂನು ಬಾಹಿರ, ಇದು ಬೇರೆಯವರ ತಟ್ಟೆಗೆ ಖನ್ನಹಾಕಿದಂತೆ. ವೀರಶೈವ ಬೇಡಿ ಜಂಗಮರು  ನಕಲಿ ಜಾತಿ ಪ್ರಮಾಣ ಪತ್ರವನ್ನು ಯಾವ ರೀತಿಯಾಗಿ ಪಡೆದರು ಹಾಗೂ ಪ್ರಮಾಣ ಪತ್ರ ಕೊಟ್ಟಿರುವಂತಹ ತಹಶೀಲ್ದಾರರು ಇವರನ್ನು ಜೈಲಿಗೆ ಹಾಕಬೇಕು. ಇನ್ನೂ ಯಾರಾರರು ನೌಕರಿ ಪಡೆದುಕೊಂಡಿದ್ದಾರೋ ಅವರುಗಳ ಬಗ್ಗೆ ಸಮಗ್ರ ಹೋರಾಟ ನಡೆಯಬೇಕು. ಇದಕ್ಕೆ ಸರ್ಕಾರ, ರಾಜಕೀಯ, ಇಚ್ಛಾಶಕ್ತಿಯಿಂದ ಪ್ರದರ್ಶಿಸುವುದು ಮುಖ್ಯವಾಗಿರುತ್ತದೆ. ನಮ್ಮ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಶೋಷಿತ ಅಧಿಕಾರವನ್ನು, ಶೋಷಿತ ಸಮುದಾಯಗಳ ಹಕ್ಕುನ್ನು ಕಾಪಾಡುವಂತ ಒಂದು ಸಾಮಾಜಿಕ ನ್ಯಾಯಾದ ಅಧಿಕಾರವಾಗಿದೆ. ಸರ್ಕಾರ ಇದನ್ನು ಕೂಡಲೇ ತಡೆಹಿಡಿಯಬೇಕು. ಕರ್ನಾಟಕದಲ್ಲಿ ಬೇಡ ಜಂಗಮ ಎನ್ನುವವರು ಬ್ರಿಟಿಷರ ಕಾಲದಲ್ಲಿ ಬಂದಿದ್ದರು ಈಗ ಅವರು ನಶೀಸಿಹೋಗಿದ್ದಾರೆ. ಅವರ ಜಾತಿಯನ್ನು ಹೇಳಿಕೊಂಡು ವೀರಶೈವ ಬೇಡಿ ಜಂಗಮರು ಸೌಲಭ್ಯಗಳನ್ನು ಪಡೆಯಲು ಎತ್ತುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬೇಡ/ ಬುಡ್ಗ ಜಂಗಮರು ಇದ್ದಾರೆ. ಇವರ ಮೂಲ ಲಕ್ಷಣ, ಬೇಟಿ ಮಾಡುವುದು, ಬರ‍್ರಕಥ, ಹಗಲುವೇಷ, ಗಂಗೆ ಗೌರಿ ಕಾವ್ಯ, ವೇಷ-ಭೂಷಣ, ಇವರ ಆಹಾರ ಪದ್ಧತಿ, ವಾಸ ಹಾಗೂ ಇವರು ಯಾವುದೇ ಪ್ರತ್ಯೇಕ ಬಡಾವಣೆಯಲ್ಲಿ ಇಲ್ಲ. ಇವರು ಪ್ರತ್ಯೇಕವಾಗಿ ವಾಸವಾಗಿದ್ದಾರೆ, ಈಗಲೂ ಕೂಡ ಜೋಪಡಿ, ಗುಡಿಸಲು ಇವುಗಳಲ್ಲಿ ಇರುತ್ತಾರೆ.  ವಿದ್ಯಾ ಇಲ್ಲ, ಹಣ ಇಲ್ಲ ಬೇಡಿಕೊಂಡು ತಿನ್ನುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಭೀಕ್ಷಾಟನೆ ಮಾಡಿದ್ದರು ಜೈಲಿಗೆ ಹಾಕುತ್ತಾರೆ ಎಂದು ಹೇಳಿ ಬಟ್ಟೆ ವ್ಯಾಪಾರ ಮಾಡುವುದು, ಹೆಣ್ಣು ಮಕ್ಕಳಿಗೆ ಬೇಕಾಗಿರುವ ವಸ್ತುಗಳನ್ನು ಮಾರಾಟ ಮಾಡಿ ಜೀವನ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ ಎಂದರು.



ಈ ಸಂದರ್ಭದಲ್ಲಿ ಕರ್ನಾಟಕ ಅಲೆಮಾರಿ ಬುಡ್ಗಜಂಗಮ್ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ಸಣ್ಣ ಮಾರೆಪ್ಪ,  ಎರ‍್ರಿಸ್ವಾಮಿ, ನಿಂಬಗಲ್ ರಾಮಕೃಷ್ಣ, ಸಿ.ಆರ್.ಭರತ್, ಶೇಶು, ಬಸವರಾಜ, ಕರಿಯಪ್ಪ, ಸಂತೋಷ್ ಕೂಡ್ಲಿಗಿ, ಮಾರೆಪ್ಪ, ಜಂಬಣ್ಣ, ಜಂಬಕ್ಕ, ಯಲ್ಲಮ್ಮ, ಲಕ್ಷ್ಮಮ್ಮ ಸೇರಿದಂತೆ ಸಮುದಾಯದ ಹಲವಾರು ಜನರು  ಉಪಸ್ಥಿತಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ