ಹನಗುಂದ,ಜೂ,೧೫ : ತಾಲೂಕಿನ ಇದ್ದಲಗಿ ಗ್ರಾಮದ ಯೋಜನಾ ಭಾದಿತ ಮುಳಗಡೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಶೆಡ್ ಪುನರ ನಿರ್ಮಾಣ ಹಾಗೂ ೪ ಗುಂಟೆ ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ೩೯ನೆ ದಿನ ಕೆಂಗಲ್ಲ-ಖಜಗಲ್ಲ ಗ್ರಾಮಗಳ ಸಂತ್ರಸ್ತರು ಭಾಗವಹಿಸಿ ಧರಣಿ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
ಸಂತ್ರಸ್ಥ ಹನಮಗೌಡ ಪಾಟೀಲ ಮಾತನಾಡಿ ೧೦ ಮುಳಗಡೆ ಗ್ರಾಮಗಳ ಸಂತ್ರಸ್ತರ ಸಂಕಷ್ಟ ಹೇಳತೀರದಾಗಿದೆ. ಎಲ್ಲ ಮುಳುಗಡೆ ಗ್ರಾಮಗಳಿಗೂ ಪುನರ್ವಸತಿ ಕೇಂದ್ರಗಳು ಇದ್ದರೂ ಯಾವುದೆ ಮೂಲಭೂತ ಸೌಲಭ್ಯಗಳು ಕಲ್ಪಿಸಿಲ್ಲ. ಅಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಸಧ್ಯ ಸರ್ಕಾರ ಒಂದು ಗುಂಟೆ ನಿವೇಶನ ನೀಡಿದೆ. ಆ ಒಂದು ಗುಂಟೆ ಜಾಗೆ ರೈತಾಪಿ ಕುಟುಂಬಗಳಿಗೆ ಸಾಕಾಗುತ್ತಿಲ್ಲ ಮನೆ ಮಂದಿ, ದನಕರು, ಆಡು, ಕುರಿಗಳನ್ನು ಕಟ್ಟಿಕೊಂಡು ಸರ್ಕಾರ ಕೊಟ್ಟ ಜಾಗೆಯಲ್ಲಿ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಲ್ಲ. ನಮಗೆ ನಾಲ್ಕು ಗುಂಟೆ ನಿವೇಶನ ನೀಡುವರಿಗೂ ಮತ್ತು ಸೌಲಭ್ಯಗಳನ್ನು ಒದಗಿಸುವವರೆಗೂ ನಮ್ಮಗಳ ಹೋರಾಟ ನಿರಂತರವಾಗಿರುತ್ತದೆ. ಮುಳಗಡೆ ಸಂಸ್ರಸ್ತರ ನ್ಯಾಯಯುತವಾದ ಬೇಡಿಕೆ ಈಡೇರಿವರಿಗೂ ಹೋರಾಟ ನಿರಂತರವಾಗಿರಲಿ ಅದಕ್ಕೆ ನಮ್ಮ ಗ್ರಾಮಸ್ಥರ ಬೆಂಬಲ ಸದಾ ಬೆಂಬಲ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಬಿ. ಬಿ. ಕೊಪ್ಪದ, ಯಮನಪ್ಪ ವಾಲಿಕಾರ, ಬಿ. ಎಸ್, ಕಳ್ಳಿಗುಡ್ಡ, ಹನಮಂತನ ನಂದಿಕೇಶ್ವರ, ಮಂಜುನಾಥ್ ಲಗಮ್ಮಣ್ಣವರ, ಬಸಪ್ಪ ಜುಮ್ಮಣ್ಣವರ, ಗಂಧಪ್ಪ ಜುಮಣ್ಣವರ, ಬಸವರಾಜ ಮುಳ್ಳೂರ, ಕಲ್ಲಪ್ಪ ಆನೇಹೊಸೂರ, ಶೇಖಪ್ಪ ಕಾಳಗಿ, ಸಿದ್ದಪ್ಪ ಲಗಮ್ಮಣ್ಣವರ, ಯಮನಪ್ಪ ಕೊಪ್ಪದ, ಹನುಮಂತ ಮಂಕಣಿ, ಮುತ್ತಪ್ಪ ಮಾಗಿ, ರಾಮಣ್ಣ ಕೊಪ್ಪದ ಸೇರಿದಂತೆ ಇತರರು ಇದ್ದರು.