ರಾಯಬಾಗ,
ಎರಡನೇ ಮಹಾಯುದ್ಧದ ವೇಳೆ ಗಾಯಗೊಂಡ ಸೈನಿಕರ ಶೂಶ್ರೂಷಾ ಸೇವೆಯಲ್ಲಿ ತೊಡಗಿದ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವನ್ನು ಮೇ.೧೨ ರಂದು ಅಂತರರಾಷ್ಟ್ರೀಯ ಶೂಶ್ರೂಷಾಧಿಕಾರಿಗಳ (ದಾದಿಯರ್) ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶೂಶ್ರೂಷಕ ಶ್ರೀಶೈಲ ಹೊಸೂರ ಹೇಳಿದರು.
ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ದಾದಿಯರ (ನರ್ಸ್) ದಿನ ನಿಮಿತ್ಯ ಫ್ಲೋರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೇಕ್ ಕತ್ತರಿಸಿ ಮಾತನಾಡಿದ ಅವರು, ಮಾನವರ ಆರೋಗ್ಯ ಬದುಕಿನ ಅಮೂಲ್ಯ ಸಮಯವಾಗಿದ್ದು, ತಮ್ಮ ಇಡೀ ಜೀವನವನ್ನು ರೋಗಿಗಳ ಸೇವೆಗೆ ಮುಡುಪಾಗಿಟ್ಟವರು ಫ್ಲೋರೆನ್ಸ್ ನೈಟಿಂಗೇಲ್ ಅವರ ನೆನಪು ಸದಾ ಸ್ಮರಣೀಯ. ದೇಶ, ಭಾಷೆ, ಗಡಿ, ಹೆಣ್ಣು, ಗಂಡು ಎಂಬ ತಾರತಮ್ಯ ಮಾಡದೇ, ಎಲ್ಲರನ್ನು ಸಮಾನವಾಗಿ ಕಂಡು, ಸಕಲರ ಆರೋಗ್ಯ ಸೇವೆಯಲ್ಲಿ ನಿರತರಾದವರು ಶೂಶ್ರೂಷಕರು ಮಾತ್ರ ಎಂದರು.
ಹಿರಿಯ ಶೂಶ್ರೂಷಾಧಿಕಾರಿ ಶೋಭಾ ಸಂಕನ್ನವರ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿನೋದ ಘಸ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಶ್ರೀಹರಿ ಪೋಳ, ಡಾ. ಸತೀಶ ಕಲ್ಲಟ್ಟಿ. ಡಾ. ಸಿದ್ದಾರ್ಥ ಮಗದುಮ್ಮ, ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ. ಸದಾಶಿವ ಖನದಾಳೆ, ಶೀತಲ ಚೌಗಲಾ, ವೀರೂಪಾಕ್ಷಿ ಕರಣಿ, ನಂದಕುಮಾರ ಪಾಟೀಲ, ಕೃಷ್ಣಾ ಚವ್ಹಾಣ, ನಾಜೀಯಾ ಜಿನಾಬಡೆ, ವಿಜಯಲಕ್ಷ್ಮೀ ಎನ್, ವಿ.ವಿ.ಮುರನಾಳ, ರೇಣುಕಾ ಶಾಪೂರ, ಅನಿತಾ ರಾಠೋಡ, ಸತೀಶ ರೂಗಿ, ವಿಠಲ ಗೆನ್ನೂರ, ಆದಂ ಅಗಸನಾಳ, ಚಂದ್ರು ಗಾಯಕವಾಡ, ಸವಿತಾ ಕಟ್ಟಿಮನಿ ಹಾಗೂ ಇತರರು ಇದ್ದರು.
