ರಾಯಬಾಗ: ಪಟ್ಟಣದ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯ ಬಾಗಿ ಸೋಶಿಯಲ್ ಕ್ಲಬ್, ರಾಯಬಾಗ ಸೈಕ್ಲಿಂಗ್ ಕ್ಲಬ್ ಹಾಗೂ ಜಾತ್ರಾ ಕಮಿಟಿ ಸಹಯೋಗದೊಂದಿಗೆ ಇತ್ತೀಚಗೆ ಯೋಜಿಸಲಾಗಿದ್ದ ಸೈಕಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಬಸವರಾಜ್ ತೇರದಾಳ ರವರಿಗೆ ಬಾಗಿ ಸೋಶಿಯಲ್ ಕ್ಲಬ್ ವತಿಯಿಂದ ಪ್ರಶಸ್ತಿ ಫಲಕದೊಂದಿಗೆ ರೂ.25000 ನಗದು ಬಹುಮಾನವನ್ನು ವಿತರಿಸಲಾಯಿತು. ಬಾಗಿ ಸೋಶಿಯಲ್ ಕ್ಲಬ್ ಅಧ್ಯಕ್ಷ ರಾಜು ಅಳಾಜ, ರಾಯಬಾಗ್ ಸೈಕ್ಲಿಂಗ್ ಕ್ಲಬ್ ಸದಸ್ಯರಾದ ಮಹದೇವ ಧರ್ಮಟ್ಟಿ, ತುಕಾರಾಮ ವಾಲಿಕರ, ಬಾಳು ಮಾಂಗ, ಪ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಮೇತ್ರಿ, ಲಕ್ಷ್ಮಣ ಪೂಜೇರಿ, ನಂದು ದೇಸಾಯಿ ಹಾಗೂ ಲಕ್ಷ್ಮೀದೇವಿ ಜಾತ್ರಾ ಕಮಿಟಿ ಸದಸ್ಯರುಗಳು ಇದ್ದರು.
