Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾವುಗಳ ಪ್ರದರ್ಶನ & ಮಾರಾಟಕ್ಕೆ ನಿರಾಣಿ ಚಾಲನೆ

ತೋವಿವಿಯ ಉದ್ಯಾನಗಿರಿಯಲ್ಲಿ ೩ ದಿನಗಳ ಕಾಲ ಮಾವು ಮೇಳ

ಬಾಗಲಕೋಟೆ : ಮೇ ೧೬ : ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಮೇಳಕ್ಕೆ ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ ಶನಿವಾರ ಚಾಲನೆ ನೀಡಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಸಿಬಿಬಿಓ ಜೇನು ರೈತ ಉತ್ಪಾದಕರ ಸಂಘ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಡಾ.ದಂಡಿನ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಟಾನದ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಮೇಳಕ್ಕೆ ಚಾಲನೆ ನೀಡಿ, ವಿವಿಧ ಮಾವು ತಳಿಗಳನ್ನು ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಹಾಗೂ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಾವು ಬೆಳೆಗೆ ಉತ್ತಮ ಅವಕಾಶಗಳಿದ್ದು, ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ತೋವಿವಿಯು ಮುಂದಿನ ದಿನಮಾನಗಳಲ್ಲಿ ಮಾವು ನಿಗಮವನ್ನು ಸ್ಥಾಪಿಸುವ ಕೆಲಸ ಮಾಡಬೇಕಿದೆ. ವಿಶ್ವವಿದ್ಯಾಲಯದಲ್ಲಿ ಮಾವಿನ ತಳಿಗಳ ತಂತ್ರಜ್ಞಾವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ವಿವಿಧ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜನೆ ಮಾಡಿದೆ. ಇದರ ಜೊತೆಗೆ ಚಿಕ್ಕಲಗುಂಡಿಯಲ್ಲಿ ರೈತರು ಬೆಳೆದ ಮಾವಿನ ತಳಿಯ ಬಗ್ಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.
ಭಾರತ ದೇಶ ಸೇರಿದಂತೆ ಇಂದು ೮೪ ದೇಶಗಳಲ್ಲಿ ಮಾವು ಬೆಳೆಯುತ್ತಿದ್ದಾರೆ. ಬೆಳೆದಿರುವ ಮಾವನ್ನು ಕಾರ್ಬನ್ ಮುಕ್ತವಾಗಿ ಮಾಡುವ ವ್ಯವಸ್ಥೆಯಿಂದ ೫೦೦ ವಿಧದ ತಳಿಗಳು ಬಂದಿವೆ. ೨೨ ಮಾವು ಬೆಳೆಯ ಹೊಸ ತಳಿಗಳನ್ನು ಕಂಡುಹಿಡಿದ್ದಾರೆ. ಅವುಗಳು ಯಶಸ್ವಿಯಾಗಿವೆ. ಹೆಚ್ಚು ಹೆಚ್ಚು ಮಾವು ಬೆಳೆಯುವ ಮೂಲಕ ಉತ್ತರ ಕರ್ನಾಟಕ ರೈತರು ಮುಂದೆ ಬರಬೇಕು ಎಂದರು.  ತೋವಿವಿಯ ಮೂಲಕ ಮಾವು ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಈ ಮೂರು ದಿನಗಳ ಕಾಲ ನಡೆಯುವ ಮಾವು ಮೇಳಕ್ಕೆ ಆಗಮಿಸಿ ರೈತರು ಬೆಳೆದ ಮಾವನ್ನು ಖರಿದೀಸಲು ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿವಿಯ ಕುಲಪತಿ ಡಾ.ತಮ್ಮಯ್ಯ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ಕಲಾದಗಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ.ಪಾಟೀಲ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು, ಪ್ರಗತಿಪರ ರೈತ ಮೋಹನ ದೇಸಾಯಿ, ಮಾಜಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎಂ.ದೇಸಾಯಿ, ತೋವಿವಿಯ ಸಹ ಸಂಶೋಧನಾ & ವಿಸ್ತರಣಾ ನಿರ್ದೇಶಕ ಡಾ.ವಸಂತ ಗಾಣಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾವು ಮೇಳದಲ್ಲಿ ೧೦೦ಕ್ಕೂ ಹೆಚ್ಚು ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರತ್ನಗಿರಿ, ದೇವಗಡ, ಧಾರವಾಡ ಅಪೂಸ್, ಮಲ್ಲಿಕಾ, ಆರ್ಕಾ ನೀಲಕಿರಣ, ಆರ್ಕಾ ಉದಯ, ಅಮ್ರಪಲ್ಲಿ, ಸಿಂಧು, ನೀಲಮ್, ರತ್ನಾ, ದಾಶೇಕರಿ, ಟಾಮ್ಮಿ ಆಟಕಿನ್ಸ್, ಖದರ್, ಪೈರಿ, ತೋತಾಪುರಿ, ಸುಂದರಶಾ ಸೇರಿದಂತೆ ಇತರೆ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತು. ಅಲ್ಲದೇ ಮಾವಿನಿಂದ ತಯಾರಿಸಲಾದ ಮೌಲ್ಯವರ್ಧಿತ ಉತ್ಪನ್ನಗಳಾದ ಮಾವಿನ ಜ್ಯಾಂ, ಜ್ಯೂಸ್, ಉಪ್ಪಿನಕಾಯಿ, ಫಲ್ಫ್, ಒಣಮಾವು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಮಾವು ನಮ್ಮ ದೇಶದ ಹಣ್ಣುಗಳ ರಾಜ ಹಾಗೂ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕದಲ್ಲಿ ತುಂಬಾ ಪ್ರಚಲಿತವಿರುವ ಹಣ್ಣುಗಳಲ್ಲಿ ೧೫೦೦ಕ್ಕೂ ಹೆಚ್ಚಿನ ತಳಿಗಳು ನಮ್ಮ ಭಾರತ ದೇಶದಲ್ಲಿವೆ. ಉತ್ತರ ಕರ್ನಾಟಕದಲ್ಲಿ ಸಹ ಬಹಳಷ್ಟು ವೈವಿದ್ಯಮಯ ತಳಿಗಳನ್ನು ನೋಡಬಹುದಾಗಿದೆ. ವೈವಿದ್ಯಮಯ ಮಾವು ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಮಾವು ಮೇಳ ಸಂಘಟಿಸಲಾಗಿದೆ. ನಮ್ಮ ಪೂರ್ವಿಕರು ಅನೇಕ ತಳಿಗಳು ಬೆಳೆದಿದ್ದು, ಅವುಗಳೆಲ್ಲವೂ ಇಂದು ಕಣ್ಮರೆಯಾಗುವ ಹಂತದಲ್ಲಿವೆ. ಅವುಗಳನ್ನು ಸಹ ಈ ಮೇಳದಲ್ಲಿ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST