Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರು ವೈಜ್ಞಾನಿಕ ಕೃಷಿ ಮಾಡುವ ಕಡೆಗೆ ಗಮನ ಹರಿಸಬೇಕು : ಸಚಿವ ಶಿವಾನಂದ ಪಾಟೀಲ

ಇಂಡಿ: ರಾಜ್ಯದಲ್ಲಿ ಕೆಲವೇ-ಕೆಲವು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘಗಳು ಉತ್ಯಂಗದಲ್ಲಿವೆ. ಬಹಳಷ್ಟು ಸಂಘಗಳು ನಷ್ಟ ಅಣುಭವಿಸಿವೆ. ಅದರಂತೆ ಜಿಲ್ಲೆಯಲ್ಲಿ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘ ಅತ್ಯುತ್ತಮವಾಗಿ ಬೆಳೆಯುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನವೇ ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರೈತರಿಗೆ ಉಪಯುಕ್ತ ಬೀಜ ಗೊಬ್ಬರಗಳನ್ನು ವಿತರಿಸುತ್ತ ರೈತರಿಂದ ದವಸ ಧಾನ್ಯಗಳನ್ನು ಉತ್ತಮ ಬೆಲೆಗೆ ಖರೀದಿಸುವ ಮೂಲಕ ರೈತರಿಗೆ ಈ ಸಂಸ್ಥೆ ಆಸರೆಯಾಗಿದೆ ಎಂದ ಅವರು ರೈತರು ವೈಜ್ಞಾನಿಕ ಕೃಷಿ ಮಾಡುವ ಕಡೆಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಶಿರಸಿ ಹಾಗೂ ಕುಮಟಾ ಗಳಲ್ಲಿ ಇಂತಹ ಸಂಘ ಸಂಸ್ಥೆಗಳು ೫೦೦ ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿವೆ. ನಾವೂ ಸಹ ಅವರಂತೆ ಮುಂದುವರೆಯಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ರೈತ ಬೆಳೆದ ಬೆಳೆಗೆ ಉತ್ತಮ ದರ ಸಿಗದಿದ್ದಕ್ಕಾಗಿ ರೈತರ ಸ್ಥಿತಿ ಅದೋ ಗತಿಗೆ ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಬೆಳೆಗಳಿಗೆ ಉತ್ತಮ ದರ ಲಭಿಸುವಂತೆ ಮಾಡಬೇಕಿದೆ ಎಂದರು. ಜಿಲ್ಲೆಯಲ್ಲಿ ವಿಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರ ಬೆನ್ನಿಗೆ ವಿಡಿಸಿಸಿ ಬ್ಯಾಂಕ್ ಸದಾ ಇದೆ. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಿದೆ ಎಂದರು. ರಾಜ್ಯದಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಬೆಳೆಯಲಾಗುತ್ತದೆ. ಆದರೆ ಕೇಂದ್ರ ಸರಕಾರ ಬೇರೆ ದೇಶದಿಂದ ತೊಗರಿ ಆಮದು ಮಾಡಿಕೊಂಡರೆ ನಮ್ಮ ರೈತರ ತೊಗರಿ ಬೆಲೆಗೆ ಉತ್ತಮ ಬೆಲೆ ಬರಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಕೃಷ್ಣಾ ನದಿಯಿಂದ ಅವಳಿ ಜಿಲ್ಲೆಗೆ ೮೩ ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಅಣೆಕಟ್ಟಿನ ಎತ್ತರವನ್ನು ೫೨೪ ಕ್ಕೆ ಏರಿಸಿದಾಗ ಮಾತ್ರ ಸಂಪೂರ್ಣ ಜಿಲ್ಲೆ ನೀರಾವರಿಗೆ ಒಳಪಡಲಿದೆ. ಆ ಯೋಜನೆ ಜಾರಿಯಾದರೆ ಈ ಬರಡು ಭೂಮಿಯಿಂದ ಬಂಗಾರ ತೆಗೆಯಲು ಸಾಧ್ಯವಾಗುತ್ತದೆ.
-ಶಿವಾನಂದ ಪಾಟೀಲ, ಸಚಿವರು,

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ದೇಶದಲ್ಲಿನ ಮಹಾರಾಷ್ಟ ಹಾಗೂ ಮಧ್ಯಪ್ರದೇಶ ಸರಕಾರಗಳು ಮಾತ್ರ ರೈತರಿಗಾಗಿ ದೊಡ್ಡ-ದೊಡ್ಡ ಯೋಜನೆಗಳನ್ನು ಜಾರಿ ಮಾಡಿವೆ. ನೀರಾವರಿ ವಿದ್ಯುತ್ ಸೇರಿದಂತೆ ರೈತರಿಗೆ ಅವಶ್ಯವಿರುವ ಯೋಜನೆಗಳಿಗೆ ಆ ಸರಕಾರಗಳು ಆಧ್ಯತೆ ನೀಡುತ್ತವೆ. ನಮ್ಮಲ್ಲಿಯೂ ಸಹ ಸರಕಾರಗಳು ರೈತರಿಗೆ ಆಧ್ಯತೆ ನೀಡಬೇಕು. ನಾನು ಈ ಭಾಗದ ನೀರಾವರಿ ಯೋಜನೆಗಾಗಿ ಸರ್ವ ತ್ಯಾಗಕ್ಕೂ ಸಿಧ್ಧ. ವಿಧಾನಸೌಧ ಒಳಗೆ, ಹೊರಗೆ ನಮ್ಮ ಭಾಗದ ಜನರ ಪರವಾಗಿ ಮಾತನಾಡುತ್ತೇನೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಬಿ. ಗುಡ್ಡದ, ಕಾರ್ಯದರ್ಶಿ ಆರ್.ಜಿ. ಕಾವಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ವಿವರಿಸಿದರು.
ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಬಿ.ಎಂ.ಕೋರೆ, ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಭಾಗ್ಯಶ್ರೀ ಕುಂಬಾರ ತಹಸೀಲ್ದಾರ ಬಿ.ಎಸ್. ಕಡಕಭಾವಿ, ಬಾಬುಸಾಹುಕಾರ ಮೇತ್ರಿ, ಎಂ.ಸಿ. ಮುಲ್ಲಾ, ಕೆ.ಹೆಚ್. ವಡ್ಡರ, ಸಂಸ್ಥೆಯ ಉಪಾಧ್ಯಕ್ಷ ಎ.ಬಿ. ಪಾಟೀಲ, ನಿರ್ದೇಶಕರಾದ ಗುರುನಾಥ ಮೈತ್ರಿ, ಶಿವನಗೌಡ ಪಾಟೀಲ, ರಾಜುಗೌಡ ಪಾಟೀಲ, ವಿಜಯಕುಮಾರ ನಿಡಗುಂದಿ, ಬಸವರಾಜ ಲವಗಿ, ಮಲ್ಲು ಗುಡ್ಲ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ.ಜಿ. ಕಾವಿ, ಜಿ.ಎಸ್. ಹೊಸಮನಿ, ಕೆ.ಡಿ. ಕುಲಕರ್ಣಿ, ಆನಂದ ರತ್ನಾಕರ, ಶ್ರೀಮಂತ ಇಂಡಿ, ಪ್ರಶಾಂತ ಕಾಳೆ, ಜಾವೀದ್ ಮೋಮಿನ್, ಮಹಾದೇವ ಗಡ್ಡದ, ರಜನಿ ಆಳಂದಿಕರ ಸೇರಿದಂತೆ ಇನ್ನಿತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ