Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಅಭಿವೃದ್ಧಿಡಿಸಿಸಿ  ಬ್ಯಾಂಕ್‌ ಉನ್ನತಿಕರಣಕ್ಕೆ ಮೊದಲ ಪ್ರಾಶಸ್ತ್ಯ : ಬಾಲಚಂದ್ರ ಜಾರಕಿಹೊಳಿ 

ನೇಸರಗಿ. ರೈತರ ಅಭಿವೃದ್ಧಿಗೆ ಬೆಳಗಾವಿ ಡಿ ಸಿ ಸಿ ಬ್ಯಾಂಕು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ಶೂನ್ಯ ಬಡ್ಡಿ  ದರದಲ್ಲಿ ಸಾಲ, ಟ್ರಾಕ್ಟರ್ ಮತ್ತು ರೈತ ಸಲಕರನೆಗಳಿಗೆ ಸಾಲ, ವಾಣಿಜ್ಯ ಸಾಲ, ಕೈಗಾರಿಕೆ ಸಾಲ, ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುತ್ತಿದ್ದು ಅದರಲ್ಲಿ ಹೆಚ್ಚಿನ ಮಟ್ಟದಲ್ಲಿ  ರೈತರಿಗೆ ಡಿ ಸಿ ಸಿ ಬ್ಯಾಂಕ ಸಾಲ ನೀಡಿದೆ.


ಮುಂದಿನ ದಿನಗಳಲ್ಲಿ ಬ್ಯಾಂಕ ಅಭಿವೃದ್ಧಿಗೆ ಹೆಚ್ಚಿನ ಒಟ್ಟು ನೀಡಲಾಗುವದವು. ಕಳೆದ 30 ವರ್ಷಗಳ ಕಾಲ ಮಹಾಂತೇಶ ದೊಡ್ಡಗೌಡರ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾಗಿ, ಬ್ಯಾಂಕಿನ ಉಪಾಧ್ಯಕ್ಷರಾಗಿ ಈ ಕ್ಷೇತ್ರದ ಶಾಸಕರಾಗಿ ರೈತ ಮತ್ತು ಜನಪರ ಕೆಲಸ ಮಾಡಿದ್ದಾರೆ ಅವರ ಸರಳ ವ್ಯಕ್ತಿತ್ವಕ್ಕೆ ಈ ಭಾಗದ ಸಹಕಾರಿಗಳು ಅವರನ್ನು ಬೆಂಬಲಿಸಿದ್ದಾರೆ ಹಾಗೂ ಮುಂದೆಯೂ ಬೆಂಬಲಿಸುತ್ತಾರೆ,ಧಣಿ ದಿ.  ಡಿ ಬಿ ಇನಾಮದಾರ ಅವರ ಪುತ್ರ ವಿಕ್ರಂ ಇನಾಮದಾರ ಕಿತ್ತೂರು ತಾಲೂಕಾ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ ನಿರ್ದೇಶಕರ ಚುನಾವಣೆಗೆ ಸ್ಪರ್ದಿಸುತ್ತಿದ್ದು ಅವರನ್ನು ಬೆಂಬಲಿಸಬೇಕು ಎಂದರು.


    ಅವರು ಸಮೀಪದ ಗದ್ದಿಕರವಿನಕೊಪ್ಪ ಕ್ರಾಸ್ ಹತ್ತಿರ  ಶ್ರೀ ಬಿ ಎಸ್ ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರ, ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯನ್ನು ಉದ್ದೇಸಿಸಿ ಮಾತನಾಡಿದರು.


   ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ  ಒಳ್ಳೆಯ ಹಿತದೃಷ್ಟಿಯಿಂದ  20 ವರ್ಷ ನಂಬಿ ಆಡಳಿತ ಚುಕಾಣಿ ಒಬ್ಬರಿಗೆ  ಕೊಟ್ಟಿದ್ದು ಈಗ ಅವರಿಗೆ ನಮ್ಮ ಉಪಕಾರದ ವಿರುದ್ಧ ಹೋಗಿದ್ದಾರೆ ಎಂದರು.ಡಿಸಿಸಿ  ಬ್ಯಾಂಕ ಮುಖಾಂತರ ಪಿ ಕೆ ಪಿ ಎಸ್ ಸಹಕಾರ ಸಂಘಗಳಿಗೆ ರಾಷ್ಟ್ರೀಯ ಬ್ಯಾಂಕುಗಳ  ರೀತಿಯಲ್ಲಿ ರೈತರ ಹಾಗೂ ಗ್ರಾಮಸ್ಥರ ಎಲ್ಲ ಕೆಲಸ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದರು.


ಮಾಜಿ ಶಾಸಕ ಹಾಗೂ ಡಿ ಸಿ ಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಪ್ರಸಕ್ತ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳಲ್ಲಿ  ಸಹಕಾರಿ ಸಂಘಗಳನ್ನು ದುಪ್ಪಟ್ಟು ಮಾಡಿದ್ದು, ಕಳೆದ 30 ವರ್ಷಗಳಿಂದ ನನ್ನನ್ನು ನೀವೆಲ್ಲರೂ ನಮ್ಮ ತಂದೆ ದಿ. ಬಸವಂತರಾಯ ದೊಡ್ಡಗೌಡರು  ತೀರಿದ ನಂತರ ನನ್ನನ್ನು  ಇಪ್ಪತ್ತು ವರ್ಷಕ್ಕೆ ನಿರ್ದೇಶಕರನ್ನಾಗಿ ಮಾಡಿ ಬೆಳೆಸಿದ್ದೀರಿ ಮುಂದೆಯೂ ನನ್ನನ್ನು ಬೆಳೆಸುತ್ತಿರಿ ಎಂಬ ಪರಿಪೂರ್ಣ ವಿಶ್ವಾಸ ಇದೆ. ಕಿತ್ತೂರು ತಾಲೂಕಿನಲ್ಲಿ 33 ಪಿ ಕೆ ಪಿ ಎಸ್ ಸಂಘಗಳು ಚುನಾವಣೆಗೆ ಅರ್ಹವಾಗಿವೆ, ಅದರಲ್ಲಿ 18 ರಲ್ಲಿ ನಾವು ಜಯಗಳಿಸಬೇಕು. ಹಿಂದೆ ನನಗೆ ನೀಡಿದ ಸಹಕಾರ  ವಿಕ್ರಮ ಇನಾಮದಾರ ಅವರಿಗೆ ನೀಡಬೇಕೆಂದು ಮತ್ತು ಬೈಲಹೊಂಗಲ ತಾಲೂಕಿನಲ್ಲಿ 68  ಪಿ ಕೆ ಪಿ ಎಸ್ ಗಳು ಅರ್ಹವಾಗಿವೆ. ಬೈಲಹೊಂಗಲ, ಕಿತ್ತೂರು ಸಹಕಾರಿ ಸಂಘಗಳ ಅಭಿವೃದ್ಧಿಗೆ ಸದಾ ನಾನು ಸಿದ್ದನಿದ್ದೇನೆ ಎಂದರು.


ಈ ಸಭೆಯಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್,ಯುವ ಮುಖಂಡ  ಚಿದಾನಂದ ಸವದಿ,ಕಿತ್ತೂರು ಡಿಸಿಸಿ ಬ್ಯಾಂಕ್ ಅಭ್ಯರ್ಥಿ ವಿಕ್ರಂ ಇನಾಮದಾರ, ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಸಾಹೇಬ ಕುಲಗೋಡ ಮಾತನಾಡಿದರು.ವೇದಿಕೆಯಲ್ಲಿ  ಮಾಜಿ ಶಾಸಕ ಅರವಿಂದ ಪಾಟೀಲ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ,ಬಸವರಾಜ ಪರವಣ್ಣವರ, ರಾಜು ಅಂಕಲಗಿ, ಅನೇಕ ಪಕ್ಷಗಳ ರಾಜಕೀಯ ಮುಖಂಡರು, ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಹಕಾರಿ ಬಂದುಗಳು ಭಾಗವಹಿಸಿದ್ದರು.



Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ