ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶಪಾಲ ಪ್ರೊ. ಎಸ್. ಎಲ್. ಗುಳೇದಗುಡ್ಡ ಅವರ ಸೇವಾ ನಿವೃತ್ತಿ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನ ಸಭಾಂಗಣದಲ್ಲಿ ಮೇ. ೩೦ ರಂದು ಬೆಳಿಗ್ಗೆ ೧೧ ಗಂಟೆಗೆ ಆಯೋಜನೆ ಮಾಡಲಾಗಿದೆ. ಇದೇ ವೇಳೆ ನೂತನ ಪ್ರಾಂಶುಪಾಲರಾಗಿ ಹಿರಿಯ ಪ್ರಾಧ್ಯಾಪಕಿ ಜಯಶ್ರೀ ಮುತಗಾರ ಅಧಿಕಾರ ವಹಿಸಲಿದ್ದಾರೆ. ಕಾಲೇಜಿನ ವಿವಿಧ ವಿಭಾಗದ ಎಚ್‌ಒಡಿಗಳು, ಸಹದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
--
