ಬಳ್ಳಾರಿ,ಜೂ.11: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಭ್ರಷ್ಟಾಚಾರಿಗಳ ತವರು ಮನೆಯಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ ನಂತರವೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಹಣ ಪಡೆದು, ಅವರನ್ನು ಉತ್ತೀರ್ಣಗೊಳಿಸುತ್ತಿರುವುದು ಕಂಡುಬAದಿರುತ್ತದೆ ಎಂದು ಎಬಿವಿಪಿ ಆಗ್ರಹಿಸಿದೆ.
ಈ ಹಗರಣದಲ್ಲಿ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಹಾಗೂ ಇತರರು ಒಳಗೊಂಡAತೆ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡುವ ಸಮಯದಲ್ಲಿ ಪಿ.ಜಿ. ಅಥವಾ ಡಿಗ್ರಿ ವಿದ್ಯಾರ್ಥಿಗಳ ಕೋಡಿಂಗ್-ಡಿಕೋಡಿAಗ್ ಅಂಕಗಳನ್ನು ಅಂಕಗಳನ್ನು ನಮೂದಿಸುವುದು ಇವರೇ ನೋಡಿಕೊಳ್ಳುತ್ತಾರೆ. ಈ ಅವ್ಯವಹಾರವು ತುಂಬಾ ದಿನಗಳಿಂದ ನಡೆಯುತ್ತಿದ್ದು, ಈಗ ಸಾಕ್ಷಾö್ಯಧಾರಗಳ ಸಮೇತ ಬೆಳಕಿಗೆ ಬಂದಿದೆ. ವೆಂಕಟೇಶ ವನದುರ್ಗ, ರಿಯಾಜ್ ಇವರನ್ನೊಳಗೊಂಡAತೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣಗೊಳಿಸಿದ್ದಾರೆ. ಆದರೆ ಇವರು ಮಾಡುತ್ತಿರುವ ಈ ಅವ್ಯವಹಾರದಿಂದ ಬುದ್ಧಿವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗೆ ಹಣದಿಂದ ಪದವಿಯನ್ನು ಪಡೆದುಕೊಳ್ಳುವುದಾದರೆ ದಿನವಿಡೀ ಕಾಲೇಜುಗಳಿಗೆ ಬಂದು ಪಾಠ ಕೇಳಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಗತಿ ಏನು?
ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಅಧಿಕಾರಿಗಳು ಈವರೆಗೂ ಪರೀಕ್ಷಾ ಕಾರ್ಯಗಳಿಗೆ ಇವರುಗಳನ್ನೇ ನೇಮಿಸಿರುತ್ತಾರೆ. ಹಾಗಾಗಿ ಈ ವ್ಯವಹಾರದಲ್ಲಿ ಭಾಗಿಗಳಾದ ಎಲ್ಲಾ ಭ್ರಷ್ಟಾಚಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಕುಲಪತಿಗಳು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರಿಗೆ ಮನವಿ ಸಲಿಸಿ ಅಭಾವಿಪ ಬಳ್ಳಾರಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಬಳ್ಳಾರಿ ಜಿಲ್ಲಾ ಸಂಚಾಲಕರು ಕೆ.ದಿಲೀಪ್, ವಿಜಯನಗರ ಜಿಲ್ಲಾ ಸಂಚಾಲಕರು ಧನುಷ್ ಕುಮಾರ್, ಕೊಪ್ಪಳ ಜಿಲ್ಲಾ ಸಂಚಾಲಕರು ಹಮ್ಮಿಗೇಶ ಹಾಗೂ ದರ್ಶನ್, ಮಾರುತಿ, ಶ್ರೀಕಾಂತ್, ಕೃಷ್ಣ, ಶರತ್, ಇ.ಟಿ. ವಿನಾಯಕ್, ಕಿರಣ್ ಮುಂಡರಗಿ, ಅನುಶ್ರೀ, ಮಹೇಶ, ಸುರೇಶ, ರಘು ಸಂತೋಷ, ಸಪ್ತಗಿರಿ, ಕಾರ್ತಿಕ ಹಾಗೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.