Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಕಸಿತ ಕೃಷಿ ಸಂಕಲ್ಪ ಅಭಿಯಾನ; ರೈತರಿಗೆ ಮುಂಗಾರು ಬೇಸಾಯ ಕ್ರಮಗಳು ಕೃಷಿ ಯೋಜನೆಗಳ ಸಂಪೂರ್ಣ ಮಾಹಿತಿ



ಬೆಳಗಾವಿ: ೧೩ ನೆಯ ದಿನದ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ದಿನಾಂಕ ೧೦.೦೬.೨೦೨೫ ರಂದು ಖಾನಾಪುರ ತಾಲೂಕಿನ ಚಿಕ್ಕಅಂಗರೊಳ್ಳಿ, ಹಿಂಡಲಗಿ  ಬೀಡಿ, ಕೊಡಚವಾಡ, ಅವರೊಳ್ಳಿ, ಚಾಪಗಾಂವ ಗ್ರಾಮಗಳಲ್ಲಿನ ರೈತರಿಗೆ ಮುಂಗಾರು ಬೇಸಾಯ ಕ್ರಮಗಳು, ರಾಸುಗಳಿಗೆ ಪೋ?ಣೆ ಹಾಗೂ ಕೇಂದ್ರ ಸರಕಾರದ ಕೃಷಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ರೈತರಿಗೆ ಐಸಿಎಆರ್-ಕೆಎಲಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಎಸ್. ಎಮ್. ವಾರದ ತಿಳಿಸಿದರು. ಖಾನಾಪುರ ತಾಲೂಕಿನ ಕೃಷಿ ಭೂಮಿಯು ಅರೆಮಲೆನಾಡು, ಮಲೆನಾಡು ಪ್ರದೇಶದ ವಲಯವನ್ನು ಹೊಂದಿದ್ದು ಆಮ್ಲೀಯ ಮಣ್ಣು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗೂ ಈ ಮಣ್ಣಿನಲ್ಲಿ ಪೊಟ್ಯಾ? ಪ್ರಮಾಣವು ಕಡಿಮೆ ಇದ್ದು ಇದಕ್ಕೆ ಠಿಊ ಮಟ್ಟವನ್ನು ಹೆಚ್ಚಿಸುವ ಮೂಲಕ ಆಮ್ಲೀಯ ಮಣ್ಣನ್ನು ಸುಧಾರಿಸಬೇಕು. ಇದನ್ನು ಮಾಡಲು ರೈತರು ಮಣ್ಣಿಗೆ ಡೊಲೊಮೈಟ್ ಸುಣ್ಣದ ಅಂಶವನ್ನು ಹೊಂದಿದ ಗೊಬ್ಬರಗಳನ್ನು ಉಪಯೋಗಿಸಬೇಕು.   ಆದ್ದರಿಂದ ರೈತರು ತಮ್ಮ ಮಣ್ಣನ್ನು ಪರೀಕ್ಷಿಸಿ ಮಣ್ಣಿನ ಸುಧಾರಣೆಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಪೊಟ್ಯಾಸಿಯಮ್ ಕೊರತೆಯನ್ನು ಸರಿಪಡಿಸಲು ಮತ್ತು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸಲು ಸಾಕ? ಪ್ರಮಾಣದ ಪೊಟ್ಯಾಸಿಯಮ್ ಗೊಬ್ಬರಗಳನ್ನು ಒದಗಿಸಲು ಸಹ ಸಲಹೆ ನೀಡಲಾಯಿತು. ಭತ್ತದಲ್ಲಿ ಜಾಫಿ ಬೀಜಗಳನ್ನು ನಿಲ್ಲಿಸಲು, ಮಣ್ಣಿಗೆ ಬೊರನ್ ಅಂಶದ ಗೊಬ್ಬರಗಳನ್ನು ಹಾಗೂ ಎಲೆಗಳ ಸಿಂಪಡಣೆಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮತ್ತೊರ್ವ ವಿಜ್ಞಾನಿಗಳಾದ ಶ್ರೀ ಪ್ರವೀಣ ಯಡಹಳ್ಳಿ ಅವರು ಎಎಮ್‌ಸಿ ಗೊಬ್ಬರವನ್ನು ಬಳಸಿಕೊಂಡು ಮೆಣಸಿನಕಾಯಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ತಿಳಿಸಿಕೊಟ್ಟರು.  ಡಾ. ಎಸ್. ಎಸ್. ಹಿರೇಮಠ, ವಿಜ್ಞಾನಿ ಸಸ್ಯ ಸಂರಕ್ಷಣೆ ಭತ್ತದ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಬಗ್ಗೆ ಮಾಹಿತಿ ನೀಡಿದರು.   ಜಿ. ಬಿ. ವಿಶ್ವನಾಥ, ವಿಜ್ಞಾನಿ ಬೇಸಾಯ ಶಾಸ್ತ್ರ ಭತ್ತ ಬೆಳೆಯ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ರೈತರೊಂದಿಗೆ ಚಚ್ಸಿದರು.  ಭಾರತೀಯ ಕೃಷಿ ಅನುಸಂಧಾನ ಪರಿ?ತ್, ಬೆಂಗಳೂರು ವಿಜ್ಞಾನಿಗಳಾದ ಡಾ. ಆನಂದಕುಮಾರ ಮತ್ತು ಡಾ. ಅತುಲ್ ಕೊಲ್ಟೆ ಇವರು ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡರು.  ಒಟ್ಟು ೧೨೦೦ ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

       ಡಾ. ಮಂಜುನಾಥ ಚೌರಡ್ಡಿ

         ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ