Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆದುಕೊಳ್ಳಿ :ಸಿದ್ದನಗೌಡರ 





ಬೈಲಹೊಂಗಲ: ಸಮಾಜದ ಸ್ವಾಸ್ಥ್ಯ ಸ್ವಚ್ಚವಾಗಿರಲು ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಜ್ಞಾನ ಹೊಂದಿದಾಗ ಶಿಷ್ಟರನ್ನು  ರಕ್ಷಣೆಮಾಡುವದರೊಂದಿಗೆ ದುಷ್ಟರನ್ನು ಶಿಕ್ಷಿಸಿಬಹುದಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

    ಸಮೀಪದ ಆನಿಗೊಳ ಗ್ರಾಮದ ಶ್ರೀರಾಮಲಿಂಗೆಶ್ವರ ಸಭಾಭವನದಲ್ಲಿ ಕೆ,ಅರ್.ಸಿ.ಎಸ್. ಶಿಕ್ಷಣ ಸಂಸ್ಥೆಯ ಎ.ಬಿ.ಪಾಟೀಲ ಬಿ.ಈಡಿ ಪ್ರಶಿಕ್ಷಣಾರ್ಥಿಗಳ  ಎನ್.ಎಸ್.ಎಸ್.ವಿಶೇಷ ಶಿಬಿರದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಷರಸ್ಥರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆದರೆ ಸಮಾಜದಲ್ಲಿ ಅದರ ದ್ವೀಗುಣದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವದು ನಾಗರಿಕ ಸಮಾಜದಲ್ಲಿ ಕಳವಳಕಾರಿಯಾಗಿದೆ. ಬಿ.ಈಡಿ ವಿದ್ಯಾರ್ಥಿಗಳು ವೈದ್ಯಕೀಯ ಕಾನೂನು, ಬಾಲ ಕಾರ್ಮಿಕ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಮತ್ತು ಮಹಿಳಾ ಕಾನೂನು, ಕಂದಾಯ, ಆಸ್ತಿಗಳ ಕಾಯ್ದೆ, ವೈಯಕ್ತಿಕ ಕಾನೂನುಗಳು ಹಾಗೂ ಮೊಟರ ವಾಹನ ಕಾಯ್ದೆಗಳ ಬಗ್ಗೆ ಸಾಮನ್ಯ ಜ್ಞಾನ ಹೊಂದಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಅಪರಾಧಗಳು ಹೆಚ್ಷುತ್ತಾ ಸಮಾಜದ ಸ್ವಾಸ್ಥ್ಯಕ್ಕೆ ದಕ್ಕೆ  ಬರುತ್ತದೆ ಎಂದರು.

   ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ‌ಪ್ರಾಚಾರ್ಯೆ ಡಾ.ಎಂ.ಬಿ.ತಲ್ಲೂರ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕಾನೂನಿನ ಜ್ಞಾನ ಹೊಂದುವದರೊಂದಿಗೆ ಅವುಗಳ ಅನುಷ್ಠಾನಕ್ಕೆ ಯುವಕರು ಮುಂದಾಗಬೇಕು. ವಾಹನ ಸವಾರರಿಗೆ ಹೆಲ್ಮೇಟ್ ಇಲ್ಲದೆ ಪ್ರಯಾಣ ಬೆಳೆಸುವದು ಅಪರಾಧ ಎಂದು ಗೊತ್ತಿದ್ದರು ಹಾಗೇ ಹೊಗುವದು,  ಗಲ್ಲಿ, ರಸ್ತೆಗಳಲ್ಲಿ ಗುಂಡಾಗರದಿ ಮಾಡಿ ತಮ್ಮ ಜೀವನದಲ್ಲಿ ಅಪರಾಧಿಗಳು ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಸಮಾಜಘಾತುಗಳ ದುಷ್ಟಶಕ್ತಿಯಾಗುತ್ತಾರೆ. ಆದ್ದರಿಂದ‌ ಪ್ರತಿಯೊಬ್ಬರು ಕಾನುನಿನ ಜ್ಞಾನ ಪಡೆದು ಜನಸಮಾನ್ಯರಿಗೂ ಅದರ ಅರಿವು ಮೂಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕರಾದ‌ ಡಾ.ಎಂ.ಎಸ್.ಗಡೆಣ್ಣವರ, ಸಹಸಂಯೊಜಕರಾದ ಎಸ್.ಎನ್.ತೋಟಗಿ ಶಿಬಿರದ ಸದಸ್ಯರಾದ ಶ್ರೀಶೈಲ‌ ಪರಂಡೆ, ವಿದ್ಯಾರ್ಥಿ ಪ್ರತಿನಿಧಿ ರಾಮಲಿಂಗಯ್ಯ ಸಾಲಿಮಠ ಹಾಗೂ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಸಂಸ್ಥೆಯ ಸಿಬ್ಬಂದಿ ಇದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ