Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಯೊಂದು ಜೀವ ಸಂಕುಲ ಪರಿಸರವನ್ನು ಅವಲಂಬಿಸಿದೆ : ಜೈವರ್ಧನ

ಹುನಗುಂದ; ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವ? ಜೂನ್ ೫ರಂದು ’ವಿಶ್ವ ಪರಿಸರ’ ದಿನವನ್ನು ಆಚರಿಸಲಾಗುತ್ತಿದೆ.ಇದು ಹಸಿರನ್ನು ಉಳಿಸಿ, ಬೆಳೆಸುವ ಮೂಲಕ ಹೆಚ್ಚು ಸಮರ್ಥನೀಯ ಭವಿ?ವನ್ನು ಸೃಷ್ಟಿಸುವ ಗುರಿ ಹೊಂದಿದೆ. ಈ ಮಹತ್ವದ ದಿನದಂದು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಗೆ ಉತ್ತೇಜನ ನೀಡಲು ದೃಢವಾದ ಮತ್ತೊಂದು ಹೆಜ್ಜೆಗೆ ಸಿದ್ದರಾಗೋಣ ಎಂದು ವಲಯ ಅರಣ್ಯಾಧಿಕಾರಿ ಜೈವರ್ಧನ ತಳವಾರ ಹೇಳಿದರು. 

ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೆರಿ ಮತ್ತು ಕಾನೂನು ಅಅರಿವು ನೆರವು ಹಾಗೂ ವಕೀಲರ ಸಂಘ ಸಹಯೋಗದಲ್ಲಿ ನಡೆಸಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡುತ್ತ ವನ್ಯ ಜೀವಿಗಳ ಪೋ?ಣೆಯಲ್ಲಿ ಪರಿಸರವೂ ಅತಿ ಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿಯೇ ಈ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ ಎಂಬುದನ್ನು ನಾವಿಂದು ಮನಗಾಣಬೇಕಾಗಿದೆ. ಮಾನವ ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳೂ ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ ,ನೀರು ಮತ್ತು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನು ಅವಲಂಬಿಸಿದ್ದೇವೆ.ಆದರೆ ಅದರ ಜತೆಗೆ ಇತ್ತಿಚಿನ ದಿನಗಳಲ್ಲಿ ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂಬುದನ್ನು ನಾವು ನಿತ್ಯ ನೋಡುತ್ತೇವೆ ಎಂದು ತಳವಾರ ತಿಳಿಸಿದರು. 

ನ್ಯಾಯವಾದಿ ಉಮಾ ಬಳ್ಳೋಳ್ಳಿ ಮಾತನಾಡುತ್ತ ಮಣ್ಣು, ಗಾಳಿ ,ನೀರು ಸೇರಿದಂತೆ ಎಲ್ಲವೂ ಕಲುಷಿತಗೊಂಡು ಇಡೀ ಪರಿಸರವೇ ಹಾಳಾಗುತ್ತದೆ. ಇದರಿಂದಾಗಿಯೇ ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆಗಳು ಹೆಚ್ಚಿ ಜನಜೀವನ ದುಸ್ತರವಾಗಿ ಮನು ಕುಲದ ಸರ್ವನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಹೀಗಾಗಿ ಪರಿಸರ ಉಳಿಸುವಂತೆ ಜನರಿಗೆ ತಿಳಿಸಿ ಹೇಳುವುದರ ಮೂಲಕ ಅದರ ಉಳಿವಿಗೂ ಸಂಕಲ್ಪ ಮಾಡುವುದು ಇಂದಿನ ಕರ್ತವ್ಯವಾಗಿದೆ. ಆ ದಿಸೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ ನಾಡು ಉಳಿಸಲು ಮುಂದೆ ಸಾಗೋಣ ಎಂದರು. ಉಪ ವಲಯ ಅರಣ್ಯಾಧಿಕಾರ ಎಸ್.ಎನ್. ಕಂಬಿಮಠ, ವಿಜಯಕುಮಾರ ನಾಯಕ, ಜಗಧೀಶ ಚಿಂಚೋಳ್ಳಿ, ಗಿರೀಶ ಮೆಕ್ಕೇದ, ಅರಣ್ಯ ವೀಕ್ಷಕ ಯಲ್ಲಪ್ಪ ಅಂಬಿಗೇರ ಮತ್ತು ಸಿಬ್ಬಂದಿ, ಶ್ರೀಮತಿ ದೀಪಾ, ದೇವರಾಜ ಅರಸು ವಸತಿ ನಿಲಯದ ವಿಧ್ಯಾರ್ಥಿನಿಯರು ಇದ್ದರು.

೫;ಎಚ್‌ಎನ್‌ಡಿ;೧; ಹುನಗುಂದ ವಲಯ ಅರಣ್ಯ ಇಲಾಖೆ ಮತ್ತು ಕಾನೂನು ಅರಿವುನೆರವು ಮತ್ತು ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಜೈವರ್ಧನ ತಳವಾರ ಸಸಿ ನೆಟ್ಟು ನೀರುಣಿಸಿದರು.  

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ