Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಎಸ್. ಎಸ್. ಕಬಾಡೆ




ಅಂತರಾಷ್ಟಿçÃಯ ಸಹಕಾರ ವರ್ಷಾಚರಣೆ-2025 ರ ಅಂಗವಾಗಿ


ಗದಗ (ಕರ್ನಾಟಕ ವಾರ್ತೆ) ಜೂನ್ 26: ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಅರಣ್ಯ ಇಲಾಖೆ ಗದಗ, ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ, ಕೆ.ಎಂ.ಎಫ್. ಧಾರವಾಡ ಹಾಗೂ ಗದಗ ಜಿಲ್ಲೆಯ ಎಲ್ಲಾ ಸಹಕಾರ ಸಂಘ/ಬ್ಯಾAಕುಗಳ ಸಂಯುಕ್ತ ಆಶ್ರಯದಲ್ಲಿ “ಅಂತರಾಷ್ಟಿçÃಯ ಸಹಕಾರ ವರ್ಷಾಚರಣೆ – 2025” ರ ಅಂಗವಾಗಿ “ವಿಶ್ವ ಪರಿಸರ ದಿನಾಚರಣೆ” ಪ್ರಯುಕ್ತ “ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ (ಏಕ ಪೇಡ್ ಮಾ ಕಿ ನಾಮ್)” ಕಾರ್ಯಕ್ರಮ ಗುರುವಾರ ಗದಗನ ಸಿ.ಎಸ್. ಪಾಟೀಲ ಪ್ರೌಢಶಾಲೆಯ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್. ಎಸ್. ಕಬಾಡೆ ಯವರು ಸಹಕಾರ ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ದಿನಮಾನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಜರುಗಬೇಕಾಗಿದೆ. ಅನೇಕ ಮಾಲಿನ್ಯಗಳಿಂದ ಹೊಸ-ಹೊಸ ಸಮಸ್ಯೆಗಳಾದ ಅನಾರೋಗ್ಯ, ಕಲಬೆರಕೆ, ವಿಷಯುಕ್ತ ಆಹಾರ ಸೇವನೆಯಿಂದಾಗುವ ತೊಂದರೆಗಳು ಇವುಗಳಿಂದ ದೇಶದ ಪ್ರಗತಿ ಸಾಮಾಜಿಕವಾಗಿ ಆರ್ಥಿಕ ವ್ಯವಸ್ಥೆಗಳಿಗೆ ಕುಂದುAಟುಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರದ “ಏಕ ಪೇಡ ಮಾ ಕಿ ನಾಮ್” ಎಂಬ ಯೋಜನೆಗಳ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ನಾವು ಹಾಗೂ ಮುಂಬರುವ ಪೀಳಿಗೆಗಳಿಗೆÀ ಉತ್ತಮ ವಾತಾವರಣ ಒದಗಿಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ನಿರ್ದೇಶಕರಾದ ಎಸ್. ಕೆ. ಕುರಡಗಿ, ದೇಶ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಮ್ಮ ಹಳ್ಳಿಗಳಿಂದ ಸಸಿನೆಡುವ ಕಾರ್ಯಕ್ರಮ ಪ್ರಾರಂಭವಾಗಬೇಕು. ಆರೋಗ್ಯವೇ ಭಾಗ್ಯ ವೆಂಬ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಉಸಿರಾಡುವ ಗಾಳಿ, ಸೇವಿಸುವ ಆಹಾರ, ನೈರ್ಮಲ್ಯ ಮುಕ್ತ ನೀರು ತುಂಬಾ ಪ್ರಮುಖವಾದವುಗಳಾಗಿವೆ ಇದನ್ನು ಇಂದಿನ ವಿಶ್ವ ಪರಿಸರ ದಿನದಂದು ಉತ್ತಮವಾಗಿ ಪ್ರಾರಂಭಿಸೋಣ ಎಂದು ಹೇಳಿದರು.


ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ ಗದಗ ಉಪನಿರ್ದೇಶಕರಾದ ಅರವಿಂದ ಎನ್. ನಾಗಜ್ಜನವರ ಮಾತನಾಡುತ್ತ ಪ್ರಕೃತಿ ಮನುಷ್ಯನ ಆಸೆ ಈಡೇರಿಸಬಲ್ಲದು, ಆದರೆ ದುರಾಶೆ ಈಡೇರಿಸಲಾರದು ಎಂಬುದನ್ನು ಅರಿತುಕೊಂಡು ರಸಾಯನಿಕ ಬಳಕೆಯು ಬದುಕನ್ನು ಕಷ್ಟಕರವಾಗಿಸುತ್ತದೆ. ಇವುಗಳ ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ, ಹೊಲಗಳಲ್ಲಿ ಮಣ್ಣಿನ ಸವಕಳಿಯನ್ನು ತಡೆಯಲು ಹೆಚ್ಚಿನ ಗಿಡಗಳನ್ನು ನೆಡುವುದರಿಂದ ನಮ್ಮ ಸಮಾಜ ಹಾಗೂ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷರಾದ ಸಿ. ಎಂ. ಪಾಟೀಲ ರವರು ವಹಿಸಿ ಮಾತನಾಡುತ್ತಾ ಅಂತರಾಷ್ಟಿçÃಯ ಸಹಕಾರ ವರ್ಷ 2025 ರ ಪ್ರಯುಕ್ತ ಗದಗ ಜಿಲ್ಲೆಯಲ್ಲಿ ಮಹಾಮಂಡಳದ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಇಂದ “ಏಕ್ ಪೇಡ ಮಾ ಕಿ ನಾಮ್” ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇಂದಿನ ಈ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಘಗಳು ತಮ್ಮ ಸಂಸ್ಥೆಗಳು ಹಾಗೂ ಸರ್ಕಾರಿ ರಸ್ತೆ, ಆಟದ ಮೈದಾನ, ಉದ್ಯಾನವನ ಹಾಗೂ ಗ್ರಾಮ ಪಂಚಾಯತ ಈ ರೀತಿ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಸಸಿಗಳನ್ನು ನೆಡುವುದರ ಮೂಲಕ ನಾವು ನಮಗೆ ಬೇಕಾದ ಆರೋಗ್ಯವನ್ನು ಪಡೆಯುವದರೊಂದಿಗೆ ಪರಿಸರ ಸಂರಕ್ಷಣೆ ಪ್ರತಿಯೋಬ್ಬರ ಕರ್ತವ್ಯವಾಗಿದೆ ಎಂಬುದನ್ನು ಎಲ್ಲರಲ್ಲಿ ಅರಿವು ಮೂಡಿಸೋಣ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ಉಪಾಧ್ಯಕ್ಷರಾದ ವಾಯ್. ಎಫ್.ಪಾಟೀಲ, ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕ್ ಲಿ., ಗದಗ ಇದರ ಅಧ್ಯಕ್ಷರಾದ ಮೋಹನ ಟಿ. ಕೋಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿಯರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳ, ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಎಸ್. ವ್ಹಿ. ಚಳಗೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ವಿಸ್ತರಣಾಧಿಕಾರಿಗಳು ಸಿ.ಎಸ್.ಪಾಟೀಲ ಬಾಲಕರ ಪ್ರೌಢಶಾಲೆ, ಗದಗ ಮುಖ್ಯೋಪಾಧ್ಯಯರಾದ ಡಾ. ಎಂ. ಆರ್. ನಾಯಕ, ಸಿ.ಎಸ್.ಪಾಟೀಲ ಬಾಲಕಿಯರ ಪ್ರೌಢಶಾಲೆ, ಗದಗ ಮುಖ್ಯೋಪಾಧ್ಯಯರಾದ ಡಾ. ಎಸ್. ಜಿ. ಕೊಲಮಿ ಗದಗ, ಶ್ರೀ ಸಿ.ಎಸ್.ಪಾಟೀಲ ಬಾಲಕಿಯರ ಪ್ರಾಥಮಿಕ ಶಾಲೆ, ಗದಗ ಮುಖ್ಯೋಪಾಧ್ಯಯರಾದ ಡಾ. ಆರ್. ಎನ್. ಹಂಸನೂರ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕೆ.ಎಚ್.ಪಾಟಿಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇದರ ಹಿರಿಯ ವಿಜ್ಞಾನಿಗಳು & ಮುಖ್ಯಸ್ಥಾರಾದ ಡಾ. ಸುಧಾ ವಿ. ಮಂಕಣಿ ಇವರು ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಸ್ವಚ್ಚತೆ, ನೈರ್ಮಲ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಭೂ ಮಾಲಿನ್ಯ, ಉಸಿರಾಡಿಸುವ ಶುದ್ಧ ಗಾಳಿ, ಪರಿಸರ ಕಾಪಾಡುವಲ್ಲಿ ಪ್ರಜೆಗಳ ಪಾತ್ರ, ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯಗಳು, ಆರೋಗ್ಯದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಸಿ.ಎಸ್.ಪಾಟೀಲ ಬಾಲಕೀಯರ ಪ್ರೌಢಶಾಲೆ, ಗದಗ ಇದರ ವಿದ್ಯಾರ್ಥಿನಿಯರಾದ ಕುಮಾರಿ ನಿರ್ಮಲಾ ಲಮಾಣಿ & ಖುಷಿ ಲಮಾಣಿ ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿಯರಾದ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ಇವರು ವಂದಿಸಿದರು.








Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ