ಬಳ್ಳಾರಿ June.01 : ನೀರಾವರಿ ಇಲಾಖೆಯಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸಿ ಇಂದು ವಯೋ ನಿವೃತ್ತಿ ಹೊಂದಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ ಅವರನ್ನು ಕಚೇರಿ ಸಿಬ್ಬಂದಿ ಮತ್ತು ಅವರ ಸ್ನೇಹಿತರು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರ್ ಪುರುಷೋತ್ತಮ್ ಗೌಡ ಮಾತನಾಡಿ, ಇಂಜಿನಿಯರ್ ಸುರೇಶ ಅವರು ಕೇವಲ ನೀರಾವರಿ ಇಲಾಖೆಯ ನೌಕರರಾಗಿರದೆ ರೈತರ ಸ್ನೇಹಿಯಾಗಿದ್ದರೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಲಿ ಬೆಳೆಗಳಿಗೆ ನೀರನ್ನು ಪೂರೈಸುವುದಾಗಲಿ ಹಗಲು ರಾತ್ರಿ ಎನ್ನದೆ ಸಕಾಲಕ್ಕೆ ಕೈಗೊಳ್ಳುತ್ತಾ ಎಲ್ಲಾ ರೈತರಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು ಅವರು ಕಾರ್ಯನಿರ್ವಹಿಸುತ್ತಿದ್ದ ಆರನೇ ಡಿಸ್ಟ್ರಿಬ್ಯೂಟರ್ ನ ರೈತರು ಇಂದು ಅವರ ಸೇವೆಯನ್ನು ಕಳೆದುಕೊಳ್ಳುತ್ತಿದ್ದಾರೆ ಇದು ನನಗೆ ಸೇರಿದಂತೆ ಹಲವಾರು ರೈತರಿಗೆ ಬೇಸರದ ಸಂಗತಿಯಾಗಿದೆ ಎಂದರು.
ಮತ್ತೊಬ್ಬ ರೈತ ನಾಯಕ ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷರಾದ ಕರೂರ್ ಮಾಧವ ರೆಡ್ಡಿ ಮಾತನಾಡಿ, ಸುರೇಶ್ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವ ರೈತರಿಗೂ ಸಹ ತೊಂದರೆ ಮಾಡದೆ ತಮಗೆ ಸಂಬಂಧಿಸಿದ ಕೆಲಸವನ್ನು ಸಕಾಲಕ್ಕೆ ಮಾಡಿಕೊಟ್ಟು ರೈತರಿಗೆ ಅತ್ಯಂತ ಅನುಕೂಲಕರ ಅಧಿಕಾರಿಯಾಗಿದ್ದರು ಅವರ ನಿವೃತ್ತಿಯಿಂದ ಆರನೇ ತೂಭಿನ ರೈತರು ಅವರ ಅನನ್ಯ ಸೇವೆಯನ್ನು ಕಳೆದುಕೊಂಡಿದ್ದಾರೆ ಇಂತಹ ಅಧಿಕಾರಿ ಸರ್ಕಾರಿ ಇಲಾಖೆಗಳಲ್ಲಿ ಅತಿ ಅಪರೂಪದ ಕೆಲಸಗಾರರಾಗಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ಈ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಇಂಜಿನಿಯರ್ ಸುರೇಶ್ ಅವರ ಕುಟುಂಬಸ್ಥರು ಸಂಬಂಧಿಕರು ಹಾಗೂ ನೂರಾರು ಜನ ಬಳ್ಳಾರಿ ತಾಲೂಕಿನ ರೈತರು ಅವರ ಸ್ನೇಹಿತರು ಭಾಗವಹಿಸಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಸುರೇಶ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
