Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ : ಕಲಾವಿದೆ ಡಾ.ಪಂಕಜಾ 



ಅಥಣಿ: ರಾಜ್ಯದಲ್ಲಿ ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಲು ಆಶ್ರಮ ಕಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೊಸ ತಂತ್ರಜ್ಞಾನಗಳಿಂದ  ದಾರಿ ತಪ್ಪುತ್ತಿರುವ  ಇಂದಿನ ಯುವ ಪೀಳಿಗೆಗೆ ಸರಿಯಾದ ಮಾರ್ಗ ತೋರಿಸುವುದು  ಅಗತ್ಯವಾಗಿದೆ ಎಂದು  ಖ್ಯಾತ ರಂಗಭೂಮಿ ಕಲಾವಿದೆ ಡಾ. ಪಂಕಜ  ಹೇಳಿದರು.

  ಅವರು ಅಥಣಿ ಪಟ್ಟಣದಲ್ಲಿ  ಮಾತ್ರಶ್ರೀ ಕಲಾಸಂಘ, ಸಾಯಿ ಸೇವಾ ಕಲ್ಚರಲ್  ಟ್ರಸ್ಟ್ ವತಿಯಿಂದ ಕಲಾವಿದರ, ಅನಾಥ ಮಕ್ಕಳ ಸಂರಕ್ಷಣಾ ಸಹಾಯಾರ್ಥ  ಅಥಣಿ ಪಟ್ಟಣದಲ್ಲಿ ಶನಿವಾರ ದಿ. 14 ರಂದು  ಪ್ರದರ್ಶಿಸಲಿರುವ  "ಗೌಡರ ಗದ್ಲ " ಹಾಸ್ಯಭರಿತ ನಾಟಕದ  ಬಿತ್ತಿ ಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

 ಭಾರತೀಯ ಸಂಸ್ಕೃತಿಯ ಮೂಲ ಕಲೆ ರಂಗಭೂಮಿ ನಾಟಕ ಪ್ರದರ್ಶನಗಳು  ಇತ್ತೀಚಿಗೆ ಅಶ್ಲೀಲ, ಡಬಲ್ ಮೀನಿಂಗ್ ಸಂಭಾಷಣೆಗಳು, ನಂಗಾನಾಚ ಪ್ರದರ್ಶನ  ಇಂದಿನ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿವೆ. ರಂಗಭೂಮಿ ಕಲೆಯ ಮೂಲಕ ಸಮಾಜವನ್ನು  ತಿದ್ದುವ ಕೆಲಸ ಕಲಾವಿದರಿಂದ ಆಗಬೇಕಾಗಿದೆ. ತಂತ್ರಜ್ಞಾನ ಬೆಳೆದಂತೆ  ಕಲಾವಿದರಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ  ಸಾಕಷ್ಟು ಕಲಾವಿದರಿದ್ದು,  ಪ್ರೋತ್ಸಾಹದ ಕೊರತೆಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸಮಾಜವು ಕಲಾವಿದರ ಬದುಕಿಗೆ ಶಕ್ತಿಯನ್ನು ತುಂಬಿದಲ್ಲಿ ನಮ್ಮಂತ ಕಲಾವಿದರು ರಂಗಭೂಮಿಯನ್ನು ಉತ್ತುಂಗಕ್ಕೆ ಒಯ್ಯಲು ಸಂಪೂರ್ಣ ಶ್ರಮವಹಿಸುತ್ತಾರೆ.  ಉತ್ತರ ಕರ್ನಾಟಕದಲ್ಲಿ ಕಲಾವಿದರ ಬಗ್ಗೆ ಅತ್ಯಂತ ಗೌರವ ಅಭಿಮಾನವಿದ್ದು, ಯಾವುದೇ ಸ್ಥಳಗಳಲ್ಲಿ ಸಹಾಯಾರ್ಥವಾಗಿ ಪ್ರದರ್ಶನಗಳನ್ನು ಏರ್ಪಡಿಸಿದಲ್ಲಿ ಕಲಾವಿದರಿಗೆ  ಕಲಾ ಅಭಿಮಾನಿಗಳು, ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು  ಬೆನ್ನೆಲುಬಾಗಿ ನಿಂತು ಸಹಕಾರ ತೋರುತ್ತಿದ್ದಾರೆ ಎಂದು ಹೇಳಿದರು.

#######

 ಅಥಣಿಯಲ್ಲಿ " ಗೌಡರ ಗದ್ಲ "

ಅಥಣಿಯ  ಸುಕ್ಷೇತ್ರ ಗಚ್ಚಿನಮಠದ ಸಭಾಂಗಣದಲ್ಲಿ  ಶನಿವಾರ ದಿ. 14 ರಂದು ಮಧ್ಯಾಹ್ನ 3:30ಕ್ಕೆ ಮತ್ತು ಸಾಯಂಕಾಲ 6 15ಕ್ಕೆ  ಪ್ರದರ್ಶನಗೊಳ್ಳಲಿರುವ  ಗೌಡರ ಗದ್ಲ ಎಂಬ ನಾಟಕದಲ್ಲಿ ನಾನು ಸಿನಿಮಾ ಮತ್ತು ರಂಗಭೂಮಿಯ ಮಹಿಳಾ ಕಲಾವಿದೆಯಾಗಿ   ಗೌಡನ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಅಥಣಿ  ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಕಲಾವಿದರು, ಕಲಾಭಿಮಾನಿಗಳು ಆಗಮಿಸಿ ಈ ನಾಟಕವನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಂಗಭೂಮಿ ಕಲೆಯನ್ನ ಉಳಿಸಿ ಬೆಳೆಸಬೇಕೆಂದು  ಕಲಾವಿದೆ ಪಂಕಜಾ  ವಿನಂತಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ