Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಯುವಜನತೆಯ ಸಬಲೀಕರಣ ಪ್ರಮುಖವಾದುದು"



ಬಳ್ಳಾರಿ ಜುಲೈ 11.  ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಮತ್ತು ನಂದಿ ಸಿಟಿ ಪದವಿ ಪೂರ್ವ ಕಾಲೇಜು ಒಟ್ಟುಗೂಡಿ ಜುಲೈ 11 2025 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಂದಿ ಸಿಟಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪೋಸ್ಟರ್ ಡ್ರಾಯಿಂಗ್ ಮತ್ತು ಅರಿವು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು .



ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಟಿ.ಜಿ. ವಿಠ್ಠಲ್ ಅದ್ಯಕ್ಷರು ಬಳ್ಳಾರಿ ಶಾಖೆ ಇವರು ನೆರದಂಥ ವಿದ್ಯಾರ್ಥಿಗಳಿಗೆ ಜನಸಂಖ್ಯಾ ಭಾರತಕ್ಕೆ ವರವೋ ಶಾಪವೋ ಎಂದು ಪ್ರಶ್ನೆ ಮಾಡುತ್ತಾ, ಯುವಜನರು ಹೇಗೆ ವ್ಯತ್ಯಾಸವನ್ನು ತರಬಹುದು ಅಂದರೆ  ಶಿಕ್ಷಣವನ್ನು ಕಲಿಯಬೇಕು ಇತರರಿಗೂ ಕಲಿಸಬೇಕು ಮುಖ್ಯವಾಗಿ      ಸಂತಾನೋತ್ಪತ್ತಿ ಆರೋಗ್ಯ, ಲಿಂಗ ಸಮಾನತೆ , ಸುಸ್ಥಿರ ಜೀವನ ಹಾಗೂ ಜನಸಂಖ್ಯಾ ಚಲನ ಶಾಸ್ತ್ರ ದ ಬಗ್ಗೆ ತಿಳಿದುಕೊಳ್ಳಿ  ಹಾಗೂ ತಿಳಿಸಿ ಹಾಗಿದ್ದಾಗ ಮಾತ್ರ ಪ್ರತಿಯೊಬ್ಬ ಯುವಕರು ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಅವರು ಬಯಸಿದ ಕುಟುಂಬವನ್ನು ನಿರ್ಮಿಸಬಹುದಾದ ಜಗತ್ತನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಅನಿತಾ ಪ್ರಾಂಶುಪಾಲರು ಎನ್ಸಿಪಿಯು  ಇವರು ಯುವಕರೇ ಗಣ್ಯರು ಹೇಳಿದ ಮಾತುಗಳನ್ನು ಅಳವಡಿಸಿಕೊಂಡು ಬದುಕಿ ಹಾಗೂ ಕೇವಲ ಪುಸ್ತಕದ ಜ್ಞಾನಕ್ಕೆ ಮೀಸಲಾಗದೆ ಸಮಾಜದ ಅಭಿವೃದ್ಧಿ ಚಟುವಟಿಕೆಗಳ ಕಡೆ ಗಮನಹರಿಸಿ ಆಗಿದ್ದಾಗ ಮಾತ್ರ ನೀವು ನಿಮ್ಮ ಕುಟುಂಬ ಮತ್ತು ನಿಮ್ಮ ಕಮ್ಯೂನಿಟಿ ಕೂಡ ಅಭಿವೃದ್ಧಿಯಾಗುತ್ತೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ  ವಿಜಯಲಕ್ಷ್ಮಿ ಶಾಖಾ ವ್ಯವಸ್ಥಾಪಕರು ಎಫ್ಪಿಎಐ ಇವರು ಪ್ರಾಸ್ತಾವಿಕ ನುಡಿಗಳನ್ನು ನುಡಿಯುತ್ತ ವಿಶ್ವ ಜನಸಂಖ್ಯಾ ದಿನಾಚರಣೆ ಕೇವಲ  ಆಚರಣೆ ಆಗಬಾರದು ಈ ವರ್ಷದ ಜನಸಂಖ್ಯಾ ದಿನಾಚರಣೆ ಗೋಷಣೆ ಅನ್ವಯ ಯುವಕರೇ ನೀವು ಕೇವಲ ಸಂಖ್ಯೆಗಳಲ್ಲ ನೀವು ಬದಲಾವಣೆ ತರುವ ಚಿಂತಕರು ಹಾಗೂ ನವೀನಕಾರರು ಮತ್ತು ನಾಳಿನ ನಾಯಕರು ನೀವೇ ಆದರೆ ನಿಮ್ಮ  ಶಕ್ತಿಯೊಂದಿಗೆ ಜವಾಬ್ದಾರಿಯು ಮುಖ್ಯ. ಎಂದು ಹೇಳಿದರು.


ಪೋಸ್ಟರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಒಟ್ಟಾರೆ 23 ವಿದ್ಯಾರ್ಥಿಗಳು ಭಾಗವಹಿಸಿದ್ದು ಈ ಪೈಕಿ ಎಂವಿ ಗಾಯತ್ರಿ, ಮೊದಲನೇ ಸ್ಥಾನ, ತನಿಶ್ ಕೆಪಿ ಎರಡನೇ ಸ್ಥಾನ, ಸಂತೋಷ್ ಬಾಬು ಮೂರನೇ ಸ್ಥಾನ ಪಡೆದರು, ವಿಜೇತರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು ಹಾಗೂ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ