ರನ್ನ ಬೆಳಗಲಿ:ಅ.೨೬., ಸ್ಥಳೀಯ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಯು ಇಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ವಿನೋದ ಲ.ಹತ್ತಳ್ಳಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಕಾರ್ಯಾಲಯದ ಸಭಾಭವನದಲ್ಲಿ ಈ ದಿನ ೨೭/೦೮/೨೦೨೪ರ ಮಂಗಳವಾರ ದಂದು ಬೆಳಗ್ಗೆ ೧೦ ರಿಂದ ೧೧ರ ವರೆಗೆ ನಾಮಪತ್ರವನ್ನು ಸಲ್ಲಿಸಿದ ನಂತರ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು. ೩೯;ಅಧ್ಯಕ್ಷ ಸ್ಥಾನ ೩೯;ಹಿಂದುಳಿದ ವರ್ಗ ಅ೩೯; ಹಾಗೂ ಉಪಾಧ್ಯಕ್ಷ ಸ್ಥಾನ ೩೯;ಹಿಂದುಳಿದ ವರ್ಗದ ಬ ಮಹಿಳೆ೩೯;ಗೆ ಮೀಸಲಿಸಿರಲಾಗಿದೆ. ಬೆಳಿಗ್ಗೆ ೧೧ ರಿಂದ ೧೧: ೩೦ರ ವರೆಗೆ ನಾಮಪತ್ರ ಪರಿಶೀಲನೆ, ೧೧:೩೦ ರಿಂದ ಮಧ್ಯಾಹ್ನ ೧೨ರ ವರೆಗೆ ನಾಮಪತ್ರ
ಹಿಂಪಡೆಯುವುದು, ಮಧ್ಯಾಹ್ನ ೦೧ಕ್ಕೆ ಅಧ್ಯಕ್ಷರ ಆಯ್ಕೆ,ಉಪಾಧ್ಯಕ್ಷರ ಆಯ್ಕೆ ಚುನಾವಣೆ ಜರಗಲಿದೆ೩೯; ಎಂದು ಅವರು ತಿಳಿಸಿದ್ದಾರೆ.