ಯರಗಟ್ಟಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪೂರ್ವಭಾವಿ ಶಾಂತಿ ಪಾಲನೆ ಸಭೆ ನಡೆಯಿತು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳು, ಮೆರವಣಿಗೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಿಪಿಐ ಐ ಎಂ ಮಠಪತಿ ಯಾವುದೇ ಹಬ್ಬ-ಹರಿದಿನಗಳಲ್ಲಿ ಡಿಜೆ ಸೌಂ???ಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಜೆ ಸೌಂ???ನಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಮುಂಬರುವ ಯಾವುದೇ ಹಬ್ಬಗಳಲ್ಲಿಯೂ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದರು.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಶಾಂತಿ ಸಭೆಗಳನ್ನು ನಡೆಸುತ್ತಿದೆ. ಎಲ್ಲ ಸಮುದಾಯಗಳ ಮುಖಂಡರ ಸಹಕಾರದೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆ ಸದಾ ಸಿದ್ಧವಾಗಿದೆ.
ಪೊಲೀಸ್ ಇಲಾಖೆ ೨೪೭ ಕಾರ್ಯನಿರ್ವಹಿಸುವ ಜನಸ್ನೇಹಿ ಇಲಾಖೆಯಾಗಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪಿಎ??? ಎಲ್ ಬಿ ಮಾಳಿ ಮಾತನಾಡಿದ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಶಾಂತಿ, ಸಾಮರಸ್ಯ, ಸಹೋದರತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರಿದ್ದಾರೆ. ನೆರೆಹೊರೆಯವರೊಂದಿಗೆ ಸಹೋದರತೆಯಿಂದ ಬದುಕಬೇಕು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಮಾನವೀಯ ಸಂದೇಶವನ್ನು ನೀಡಿದ್ದಾರೆ.
ಅವರ ಜನ್ಮದಿನವನ್ನು ಯಾವುದೇ ಕಳಂಕ ಬಾರದಂತೆ ಶಾಂತಿಯುತವಾಗಿ ಹಾಗೂ ಗೌರವಪೂರ್ವಕವಾಗಿ ಆಚರಿಸಬೇಕು ಎಂದರು.
ಯರಗಟ್ಟಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಹೆಸರಾದ ಪ್ರದೇಶವಾಗಿದ್ದು, ಎಲ್ಲ ಧರ್ಮಗಳ ಹಬ್ಬಗಳನ್ನು ವೈಶಿಷ್ಟ್ಯಪೂರ್ಣವಾಗಿ ಹಾಗೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಚರಿಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಮೇಲಿದೆ. ಎಲ್ಲರ ಸಹಕಾರದೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಹೇಳಿದರು.
ಈ ವೇಳೆ ಪ್ರೊಬೇಷನರಿ ಪಿಎ??? ಮಾರುತಿ ಲಮಾಣಿ, ಎಎ??? ಬಿ. ಕೆ. ರಂಗಣ್ಣವರ, ಎಂ.ಬಿ. ಸಣ್ಣನಾಯ್ಕ, ಎಂ. ಎ. ಮುಲ್ತಾನಿ, ಆರ್. ಎಸ್. ತೇಲಿ, ಮುಸ್ಲಿಂ ಸಮಾಜದ ಹಿರಿಯರಾದ ಇಮಾಮಸಾಬ ಹುಸೇನನಾಯ್ಕರ, ಸಲೀಂಬೇಗ ಜಮಾದಾರ, ಭಾಸ್ಕರ ಹಿರೇಮೆತ್ರಿ, ಹನಮಂತ ಹಳ್ಳಂಡಿ, ಕಾಶೀಮಸಾಬ ಹೊರಟ್ಟಿ, ರಫೀಕ ಡಿ.ಕೆ, ಇಮಾಮಸಾಬ ಮನಿಯಾರ, ರಫೀಕ ಜಮಾದಾರ, ಹುಸೇನ ದಿಲಾವರನಾಯ್ಕ, ಮದಾರಸಾಬ ಚಾಂಖಾನ್ನವರ, ಶಬ್ಬೀರ್ ಬಿಳಗಿ, ಮಹ್ಮದ್ ನಟಗಟ್ಟಿ, ಫೀರೋಜ ಖಾದ್ರಿ, ಕೆ. ಎಫ್. ನದಾಫ, ಮಕ್ತುಂ ದಳವಾಯಿ ಸೇರಿದಂತೆ ಅನೇಕ ಇದ್ದರು.