ಅಥಣಿ: ಹೊಸ ತಂತ್ರಜ್ಞಾನದ ಇಂದಿನ ಕಾಲದಲ್ಲಿ ನಮ್ಮ ಶಿಕ್ಷಣ ಪದ್ಧತಿ ಕೇವಲ ಮಾಹಿತಿಯನ್ನು ಕೊಡುತ್ತಿದ್ದು, ಇದರ ಜೊತೆಗೆ ನಮ್ಮ ವಿದ್ಯಾರ್ಥಿಗಳ ಮೆದುಳಿಗೆ ತರಬೇತಿ ನೀಡುವ ಶಿಕ್ಷಣ ಅಗತ್ಯ, ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ನಿರ್ಭಯಾನಂದ ಸ್ವಾಮೀಜಿ ನುಡಿದರು.
ಅವರು ಇಲ್ಲಿನ ಜಾದವಜಿ ಶಿಕ್ಷಣ ಸಂಸ್ಥೆಯ ಕೆ. ಎ. ಲೋಕಾಪುರ ಪದವಿ ಮಹಾವಿದ್ಯಾಲಯದ ಹಿಂದಿನ ವಿದ್ಯಾರ್ಥಿಗಳ ಸಮ್ಮಿಲನ " ಸ್ಮೃತಿ ಸುಮನ -೨೦೨೬" ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನ ಕೆಲವು ಮುಂದುವರಿದ ದೇಶಗಳಿಗೆ ಹೋಲಿಸಿ ನೋಡಿದಾಗ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಳನ್ನ ಇಂತಹ ಸಮ್ಮೇಳನಗಳಲ್ಲಿ ಚಿಂತನ ಮಂಥನ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು. ನಮಗೆ ಇಂದು ಮಾಹಿತಿ ನೀಡುವ ಶಿಕ್ಷಣ ಬೇಕಾಗಿಲ್ಲ, ದೇಶಾಭಿಮಾನ, ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳುವ ಶಿಕ್ಷಣ ನಮಗೆ ಬೇಕು. ದೇಶಕ್ಕಾಗಿ ಇಲ್ಲವೇ ಜಗತ್ತಿಗೆ ಅಗತ್ಯವಿರುವ ಏನಾದರೂ ವಿಶೇಷ ಕೊಡುಗೆ ನೀಡುವ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಣ ಅಗತ್ಯ. ಮೂರನೇ ತರಗತಿ ಕಲಿತ ಅಲ್ವಾ ಎಡಿಷನ್ ಸತತ ಪ್ರಯತ್ನದಿಂದ ಬಲ್ಬ್ ಕಂಡುಹಿಡಿದು ಜಗತ್ತಿಗೆ ಬೆಳಕು ನೀಡಿದ. ಅಕ್ಷರ ಕಲಿಯದಿದ್ದರೂ ಅಮ್ಮಂದಿರು ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತಿದ್ದಾರೆ. ಯಾವುದೇ ಶಿಕ್ಷಣ ಇಲ್ಲದೆ ನಮ್ಮ ರೈತರು ಚೆನ್ನಾಗಿ ಉಳಿಮೆ ಮಾಡಿ ಸಮೃದ್ಧವಾದ ಬೆಳೆಗಳನ್ನ ಬೆಳೆಯುತ್ತಾರೆ. ಇಂದು ಉನ್ನತವಾದ ಶಿಕ್ಷಣ ಪಡೆದ ಅನೇಕ ಗೋಲ್ಡ್ ಮೆಡನ್ ಪಡೆದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮವಿಶ್ವಾಸ ಮೂಡಿಸುವ ಶಿಕ್ಷಣ ನಮಗೆ ಬೇಕು. ಏನಾದರೂ ಹೊಸದನ್ನು ಕ್ರಿಯೇಟಿವ್ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.
ಹಿಂದಿನ ವಿದ್ಯಾರ್ಥಿಗಳ ಸಮ್ಮಿಲನ ಒಂದು ಮಹತ್ವದ ಚರ್ಚೆಗೆ ಸಾಕ್ಷಿಯಾಗಬೇಕು. ಪ್ರಸ್ತುತ ದಿನಮಾನಗಳ ಶಿಕ್ಷಣ ಪದ್ಧತಿಯ ಬಗ್ಗೆ ಚಿಂತನ ಮಂಥನ ಮಾಡುವುದರ ಜೊತೆಗೆ ಕಲಿತ ಮಹಾವಿದ್ಯಾಲಯಕ್ಕೆ ಮತ್ತು ಉಪನ್ಯಾಸಕರಿಗೆ ಚಿರಋಣಿಯಾಗಿರಬೇಕು. ಸಮಾಜಮುಖಿ ಸೇವೆಗಳನ್ನು ಸಲ್ಲಿಸುವ ಮೂಲಕ ಬದುಕನ್ನ ಸಾರ್ಥಕ ಮಾಡಿಕೊಳ್ಳಬೇಕು. ಎಂದು ಕರೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಮಹಾವಿದ್ಯಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿ ನಾವು ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಮಾನವೀಯ ಮೌಲ್ಯಗಳನ್ನು, ಬದುಕುವ ಕಲೆಯನ್ನು, ಒಕ್ಕಲುತನದ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಹಾವಿದ್ಯಾಲಯ ಸಮಾಜದ ಒಳಿತಿಗಾಗಿ ಸಂಕಲ್ಪ ಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ರೈತರಿಗೆ ಮಣ್ಣು ಪರೀಕ್ಷೆ, ನೀರು ಪರೀಕ್ಷೆ, ಸಾವಯುವ ಬೇಸಾಯ, ಹೈನುಗಾರಿಕೆ ಇನ್ನಿತರ ಕೃಷಿಗೆ ಪೂರಕವಾದ ಉದ್ಯೋಗಗಳನ್ನು ಮಾಡಲು ಶಿಕ್ಷಣ
ಇಂದಿನ ಹಳೆಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅಸ್ತಿ, ಅನೇಕ ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಗೆ ದೇಣಿಗೆ ನೀಡುವ ಮೂಲಕ ಸವಂಗಣ ಮತ್ತು ಪಟ್ಟಣ ನಿರ್ಮಾಣಕ್ಕೆ ಸಹಕಾರ ಮಾಡಿದ್ದಾರೆ. ಈ ಕಾಲೇಜಿನಲ್ಲಿ ಕಲಿತ ಕಳೆದ ೨೦ ವರ್ಷದ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದೀರಿ, ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಂದ ನೀವು ಕಲಿತ ಕಾಲೇಜಿಗೆ, ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಸಮಾಜಕ್ಕೆ ಸೇವೆಯನ್ನು ನೀಡಬೇಕೆಂದು ಕರೆ ನೀಡಿದರು.
ಧಾರವಾಡದ ಶಿಕ್ಷಣ ತಜ್ಞ ಮಹೇಶ ಮಾಶಾಳ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಜಾದವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ರಾಮ ಕುಲಕರ್ಣಿ ಹಾಗೂ ಮುಖ್ಯ ಅತಿಥಿ ರಾಜು ಲೋಕಾಪುರ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಆರ್. ಎಂ ದೇವರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಯಡಹಳ್ಳಿ ಅತಿಥಿಗಳನ್ನ ಪರಿಚಯಿಸಿದರು. ಸಂತೋಷ ಬಡಕಂಬಿ, ಅಮೃತಾ ಧೂಪ ನಿರೂಪಿಸಿದರು. ಭಾಗ್ಯಶ್ರೀ ಗುಂಡಾ ವಂದಿಸಿದರು.
#########
ಧಾರವಾಡದ ಶಿಕ್ಷಣ ತಜ್ಞ ಮಹೇಶ ಮಾಶಾಳ ಉಪನ್ಯಾಸ ನೀಡುತ್ತಾ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಮೀಟಿಂಗು, ಗ್ರೀಟಿಂಗ್ ಮತ್ತು ಈಟಿಂಗ್ ಗೆ ಸೀಮಿತವಾಗಬಾರದು. ಶಾಲೆಗಳಲ್ಲಿ ಪಾಲಕರ ಸಭೆಗೆ ಜನರು ಬರದ ಇಂದಿನ ದಿನಗಳಲ್ಲಿ ಹಳೆಯ ವಿಧ್ಯಾರ್ಥಿಗಳ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಾವಿದ್ಯಾಲಯದ ಹಿಂದಿನ ವಿದ್ಯಾರ್ಥಿಗಳು ಬಂದಿರುವುದು ಸಂತಸ. ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸ್ವಲ್ಪ ಸಂತಸ ಹಂಚಿಕೊಳ್ಳುವದರ ಜೊತೆಗೆ ನಾವು ಕಲಿತ ಕಾಲೇಜಿಗೆ ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂಬ ಚಿಂತನ ಮಂಥನ ಮಾಡಲು ಒಳ್ಳೆಯ ವೇದಿಕೆಯಾಗಿದೆ. ಇಂತಹ ಅವಕಾಶವನ್ನು ಸಂಸ್ಥೆ ನಿಮಗೆ ಕಲ್ಪಿಸಿಕೊಟ್ಟಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಮುಖಿ ಸೇವೆಯನ್ನ ಮಾಡಬೇಕು. ಕಲಿಸಿದ ಗುರುಗಳಿಗೆ ಮತ್ತು ಶಿಕ್ಷಣ ಸಂಸ್ಥೆಗೆ, ಸಮಾಜಕ್ಕೆ, ತಂದೆ ತಾಯಿ ಗೆ ಚಿರಋಣಿಯಾಗಿ ಅವರ ಋಣ ತೀರಿಸಲು ಪ್ರಯತ್ನಿಸಬೇಕು. ಅಂತಹ ಸಂಕಲ್ಪವನ್ನು ಹಳೆಯ ವಿದ್ಯಾರ್ಥಿಗಳು ಮಾಡಬೇಕೆಂದು ಕರೆ ನೀಡಿದರು.
ಔಟಿe ಚಿಣಣಚಿಛಿhmeಟಿಣ
? Sಛಿಚಿಟಿಟಿeಜ bಥಿ ಉmಚಿiಟ
ಆisಠಿಟಚಿಥಿiಟಿg Iಒಉ-೨೦೨೬೦೪೨೩-Wಂ೦೦೩೧.ರಿಠಿg.