Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ : ಚಂದ್ರಶೇಖರ ಬಿ ಕಂದಕೂರ

ರೋಣ : ಮಲ್ಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂದಿಗವಾಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅನುದಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಗ್ರಾಮ ಛಾವಡಿ ಮತ್ತು ಅರಿವು ಕೇಂದ್ರ (ಗ್ರಂಥಾಲಯ)ದ ಉದ್ಘಾಟನಾ ಸಮಾರಂಭವು ಇಂದು ವಿಜೃಂಭಣೆಯಿಂದ ನಡೆಯಿತು.

ತಹಶೀಲ್ದಾರದ ನಾಗರಾಜ್ ಕೆ ರೋಣ ಗ್ರಾಮ ಆಡಳಿತ ಅಧಿಕಾರಿ ಕೊಠಡಿಯನ್ನು ಉದ್ಘಾಟಿಸಿ, ಕರ್ನಾಟಕ ಸರಕಾರದ ಪೋತಿ ಖಾತೆ ಕಾರ್ಯಕ್ರಮ ದಡಿ ರಾಜ್ಯದ ಮೊದಲ ಪೋತಿ ಖಾತೆಯಾಗಿ ಈ ಕೊಠಡಿ ಆಗಿದೆ ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ವನ್ನು ಪಡೆಯಬೇಕೆಂದು ಕರೆ ನೀಡಿದ ಅವರು, ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಗ್ರಾಮ ಆಡಳಿತ ಅಧಿಕಾರಿ ಶ್ರೀ ವಾಯ್. ಡಿ. ಬಡಿಗೇರ ಇವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೋತಿ ಖಾತೆಯಿಂದ ವಾರಸರಾದ ರೈತರಿಗೆ ಪಹಣಿಗಳನ್ನು ವಿತರಿಸಲಾಯಿತು.

ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ  ಚಂದ್ರಶೇಖರ ಕಂದಕೂರ ಇವರು ಅರಿವು ಕೇಂದ್ರದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ. ಮಕ್ಕಳು, ಯುವಕರು ಹಾಗೂ ವಯಸ್ಕರು ಮೊಬೈಲ್‌ನಿಂದ ದೂರವಿದ್ದು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. "ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ. ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಶಿಕ್ಷಣದಲ್ಲಿ ಶಿಕ್ಷೆ ಮತ್ತು ಬಹುಮಾನ ಎರಡೂ ಅವಶ್ಯಕ. ಶಿಕ್ಷಕರು ಮಕ್ಕಳನ್ನು ಶಿಸ್ತಿನಿಂದ ಕಲಿಸಿದಾಗ ಪೋಷಕರು ವಿರೋಧಿಸಬಾರದು. ಒಂದು ವೇಳೆ ಶಿಕ್ಷಕರು ಬುದ್ಧಿ ಕಲಿಸದಿದ್ದರೆ, ಮುಂದೆ ಪೊಲೀಸ್ ಸ್ಟೇಷನ್ ನಲ್ಲಿ ಬುದ್ಧಿ ಕಲಿಯಬೇಕಾಗುತ್ತದೆ," ಎಂದು ಹಾಸ್ಯ ಚಟಾಕಿಯಿಂದ ತಿಳಿಸಿದರು. ಅಲ್ಲದೆ, ಗ್ರಾಮಸ್ಥರು ಪ್ರತಿವರ್ಷ ತಮ್ಮ ಮನೆ, ಜಾಗೆ ಮತ್ತು ನೀರಿನ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯದ ಮಹತ್ವವನ್ನು ಒತ್ತಿ ಹೇಳಿದ ಅವರು, ನೀರಿನ ಅನಗತ್ಯ ಬಳಕೆ ತಡೆಗಟ್ಟುವಂತೆ ಸೂಚಿಸಿದರು.

ಈ ಕಾರ್ಯಕ್ರಮಕ್ಕೆ ತಹಶೀಲ್ದಾರದ   ನಾಗರಾಜ ಕೆ ಹಾಗೂ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ   ಚಂದ್ರಶೇಖರ ಕಂದಕೂರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಧಾರ್ಮಿಕ ಸಾನ್ನಿಧ್ಯವನ್ನು ವೇ.ಮೂ.  ಸಿದ್ದಯ್ಯ ಹಿರೇಮಠ ಇವರು ವಹಿಸಿದ್ದರ, ಅಧ್ಯಕ್ಷತೆಯನ್ನು  ಹನಮಂತಗೌಡ ಹೂಲ್ಲೂರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ, ಸದಸ್ಯರಾದ ಶ್ರೀಮತಿ ಬಸಮ್ಮ ಟಕ್ಕೆದ, ಕಸ್ತೂರೆವ್ವ ಜಂಪಣ್ಣನವರ, ಮೈಲಾರಪ್ಪ ಕರಿಲಿಂಗಣ್ಣವರ, ಕಮಲಾಕ್ಷಿ ಭರಮಗೌಡ್ರ, ದ್ರಾಕ್ಷಾಯಣಿ ಹಡಪದ, ಸುಮಂಗಲಾ ಕೊಳ್ಳದ, ಗಿರಿಜವ್ವ ಹಟ್ಟಿ, ವಿಕ್ರಮ ದಾನರಡ್ಡಿ, ಯಲ್ಲಪ್ಪ ಮಳಗಿ, ವೀರನಗೌಡ ಕಟ್ಟಿ, ಸುರೇಶ ವತ್ತಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಗುರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ   ಡಿ. ಎಸ್. ಹಂಚಿನಾಳ ಇವರು ಸ್ವಾಗತ ಭಾಷಣ ಮಾಡಿದರು, ಹಾಗೂ   ಮುತ್ತು ಅರಹುಣಸಿ ಇವರು ವಂದನಾರ್ಪಣೆ ಸಲ್ಲಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ