Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದು ಸಮಾಜವು ಮುಂದ ಬರಬೇಕಾದರೆ ಶಿಕ್ಷಣವು ಕೂಡ ಅತ್ಯವಶ್ಯಕವಾಗಿರುತ್ತದೆ : ಜಿಲ್ಲಾಧಿಕಾರಿ ದಿವಾಕರ



 ವಿಜಯನಗರ ( ಹೊಸಪೇಟೆ): ವಿಜಯನಗರ  ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ 2ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಎಸಿ ಬುದ್ಧ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.   ಕಾರ್ಯಕ್ರಮದಲ್ಲಿ  ವಿಜಯನಗರ ಜಿಲ್ಲೆ ಜಿಲ್ಲಾಧಿಕಾರಿ ಎಂಎಸ್ ದಿವಾಕರ್ ರವರು ಮಾತನಾಡಿ ಒಂದು ಸಮಾಜವು ಮುಂದ ಬರಬೇಕಾದರೆ ಶಿಕ್ಷಣವು ಕೂಡ ಅತ್ಯವಶ್ಯಕವಾಗಿರುತ್ತದೆ. ಉನ್ನತ ಹುದ್ದೆಯನ್ನು ಸೇರುವುದರಿಂದ ಒಂದು ಕುಟುಂಬ ಬೆಳೆಯುವುದರ ಜೊತೆಗೆ ಸಮಾಜವು ಕೂಡ ಬೆಳೆಯುತ್ತದೆ,, ಎತ್ತರದ ಗುಡಿ ಮತ್ತು ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ತಾವು ಅತ್ಯುತ್ತಮ ಸಾಧನೆ ಮಾಡಿದರೆ ಸನ್ಮಾನಗಳು ತಾವಾಗಿ ಹುಡುಕಿಕೊಂಡು ಬರುತ್ತವೆ. ನಾನು ಒಂದನೇ ತರಗತಿಯಿಂದ ಎಂ.ಎಸ್.ಸಿ ಮುಗಿಯುವವರೆಗೂ ನನಗೆ ಒಂದು ಸನ್ಮಾನವೂ ಆಗಿಲ್ಲ ಆದರೆ ನೀವು 10ನೇ ತರಗತಿ ಇರುವಾಗ ಸಮಾಜ ನಿಮ್ಮನ್ನು ಗುರುತಿಸಿ ಸನ್ಮಾನ ಮಾಡುತ್ತಿದೆ ನೀವು ಅದೃಷ್ಟವಂತರು ಎಂದರೆ ತಪ್ಪಾಗಲಾರದು ನಮ್ಮಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನದೇ ಆದಂತಹ ಕೌಶಲ್ಯವನ್ನು ಹೊಂದಿರುತ್ತಾನೆ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿ ಸನ್ಮಾನಿಸಿದರು.


ಕಾರ್ಯಕ್ರಮವನ್ನು ಎಚ್ ಎನ್ ಎಫ್ ಇಮಾಮ್ ನಿಯಾಜಿ ಅಧ್ಯಕ್ಷರು ನಗರ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ ಇವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಎಲ್ಲಾ ಗಣ್ಯರು ದೀಪವನ್ನು  ಬೇಕಾಗಿಸುವುದ್ರ  ಮೂಲಕ ಹಾಗೂ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕಾರದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೂರ್ಣಾಂದ ಭಾರತಿ ಸ್ವಾಮೀಜಿಗಳು ಮಾತಂಗ ಪರ್ವತ ಹಂಪಿ ವಹಿಸಿ ಇವರು ಆಶೀರ್ವಚನ ನೀಡಿದರು.

.ಪ್ರಸ್ತಾವಿಕವಾಗಿ ಎ. ಬಸವರಾಜ್ ಮಾತನಾಡಿ ನಮ್ಮ ಸಂಘವು ಸಮಾಜದ ಏಳಿಗೆಗಾಗಿ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ ಒಂದು ಸಂಘವನ್ನು ಮುನ್ನಡೆಸಬೇಕಾದರೆ ಅನೇಕ ರೀತಿಯ ಸಮಸ್ಯೆಗಳು ಬರುತ್ತವೆ ಅದನ್ನು ಬದಿಗೊಟ್ಟಿ ನಾವೇ ಮುಂದೆ ಸಾಗಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಶೇಷರವರು  ವಹಿಸಿದ್ದರು.


ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಕುಮಾರ್, ಮಾದಿಗ ಸಮಾಜದ ಗಣ್ಯರಾದ ಎಂ ಸಿ ವೀರಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಅಧ್ಯಕ್ಷರಾದ ಕೆ.ಪಿ. ಉಮಾಪತಿ,ಬಲ್ಲಹುಣಸಿ ರಾಮಣ್ಣ, ಸೋಮಶೇಖರ್ ಕಮಲಾಪುರ, ಪೂಜಾಪ್ಪ,ಕೆ.ಉಚ್ಚಂಗಪ್ಪ, ಹಡಗಲಿ, ನಿಂಗಪ್ಪ, ಪಿ.ಸಂತೋಷ್ ಕುಮಾರ್, ಕೊಟ್ರೇಶ್, ನಾಗಪ್ಪ, ಲಕ್ಷ್ಮಣ ಹಾಗೂ ಮಾದಿಗ ಮಹಾಸಭಾ ಕಾರ್ಯಧ್ಯಕ್ಷರಾದ ಶ್ರೀನಿವಾಸ್ ಎಚ್ ಉಪಾಧ್ಯಕ್ಷರಾದ ಕರಿಯಪ್ಪ, ಬಿ ಹನುಮಂತಪ್ಪ ಜಿ ಪಂಪಾಪತಿ ವಿಜಯ್ ಕುಮಾರ್, ರವಿ ನಿಂಗಪ್ಪ ಆಗೋಲಿ ಸುಹೇಲ್ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಇದ್ದರು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ