ಜಮಖಂಡಿ,ಅ,೩೧ : ನಗರದಲ್ಲಿ ಪ್ರ ಪ್ರಥಮ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ೧೦ ದಿನಗಳ ಕಾಲ ನಡೆಯಲಿರುವ ರಂಭಾಪುರಿ ಪೀಠದ ದಸರಾ ಉತ್ಸವ ಶರನ್ನವರಾತ್ರಿ ಉತ್ಸವದ ಯಶಸ್ಸಿಗೆ ಸೆ.೨ ಬುಧವಾರ ದಂದು ಸಂಜೆ ೪ ಗಂಟೆಗೆ ನಗರದ ಕಲ್ಯಾಣ ಮಠದಲ್ಲಿ ಸರ್ವ ಸಮಾಜದ ಮುಖಂಡರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು, ಮುತ್ತಿನ ಕಂತಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಡಿದ ಅವರು, ಕಳೆದ ವರ್ಷ ಬಸವಕಲ್ಯಾಣ ದಲ್ಲಿ ಶರನ್ನವರಾತ್ರಿ ಉತ್ಸವ ನಡೆದಿತ್ತು ಆ ಸಂದರ್ಭದಲ್ಲಿ ಶ್ರೀಗಳನ್ನು ಭೆಟಿ ಮಾಡಿ ಭಿನ್ನವತ್ತಳಿಕೆ ಸಮರ್ಪಿಸಲಾಗಿತ್ತು. ಅವರು ಸಂತೋಷ ದಿಂದ ಜಮಖಂಡಿ ನಗರದಲ್ಲಿ ಶರನ್ನವರಾತ್ರಿ, ದಸರಾ ದರ್ಬಾರ ಉತ್ಸವವನ್ನು ನಡೆಸಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು, ಅಕ್ಟೋಬರ್ ತಿಂಗಳ ೧೦ನೇ ತಾರಿಖಿನಿಂದ ೨೦ನೇ ತಾರಿಖಿನ ವರೆಗೆ ೧೧ ದಿನಗಳ ವರೆಗೆ ಉತ್ಸವ ನಡೆಯಲಿದ್ದು ರಾಜ್ಯ ಮತ್ತು ಪಕ್ಕದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ನೂರಾರು ಜನ ಮಠಾಧಿಪತಿಗಳು, ಕಲಾವಿದರು, ಸಾಹಿತಿಗಳು, ಉತ್ಸವ ದಲ್ಲಿ ಭಾಗವಹಿಸಲಿದ್ದಾರೆ ಅದಕ್ಕಾಗಿ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದ್ದು ಎಲ್ಲ ಸಮಾಜದವರ ಸಹಕಾರ ಅವಶ್ಯಕವಾಗಿದೆ ಎಂದರು. ಕೇಂದ್ರ , ರಾಜ್ಯ, ಪಕ್ಕದ ರಾಜ್ಯಗಳ ಮಂತ್ರಿಗಳು, ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಉತ್ಸವದಲ್ಲಿ ಭಾಗವಹಿಸ ಲಿದ್ದಾರೆ, ಉತ್ತಮ ವ್ಯವಸ್ಥೆಗೆ ಕಮಿಟಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ನಿಯಮಿಸಲು ಸರ್ವ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.
ಮುತ್ತಿನ ಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ ನಗರದ ಮೈಗೂರು ರಸ್ತೆಯ ಕಲೂತಿ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಶ್ರೀಗಳ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ, ಇಷ್ಟಲಿಂಗ ಪೂಜೆ, ಸಂಜೆ ಧರ್ಮ ಸಭೆಗಳು ನಡೆಯಲಿದ್ದು ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು, ರಾಷ್ಟ್ರ ಮಟ್ಟದ ಶರನ್ನವರಾತ್ರಿ ಉತ್ಸವದ ಯಶಸ್ಸಿಗೆ ಎಲ್ಲ ಸಮಾಜದ ಸಹಕಾರ ಅವಶ್ಯಕವಾಗಿದ್ದು ಸೆ.೨ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯರು , ಕಲ್ಯಾಣ ಮಠದ ಗೌರಿಶಂಕರ ಸ್ವಾಮಿಗಳು ಬನಹಟ್ಟಿಯ ಶರಣ ಬಸವ ಶಿವಾಚಾರ್ಯರು ಇದ್ದರು,