ಹಸಿರು ಕ್ರಾಂತಿ ವರದಿ, ಜಮಖಂಡಿ; ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯುವ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ದಸರಾ ದರ್ಬಾರ 2026ರ ಉತ್ಸವ ಜಮಖಂಡಿ ನಗರದಲ್ಲಿ ನಡೆಯಲಿದೆ ಅದಕ್ಕಾಗಿ ಎಲ್ಲ ಸಮಾಜದವರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು, ನಗರದ ಕಲ್ಯಾಣ ಮಠದಲ್ಲಿ ಏರ್ಪಡಿಸಿದ್ದ ಸಮಾರಂಭದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ,ಮಾತನಾಡಿದ ಅವರು ಮೈಸೂರು ದಸರಾ ಉತ್ಸವ ದಂತೆ ಗುರುಗಳ ದಸರಾ ದರ್ಬಾರ ಉತ್ಸವ ಅದ್ದೂರಿಯಿಂದ ನಡೆಯುತ್ತದೆ. ಹಲವಾರು ನಗರಗಳ ಭಕ್ತರ ಅಪೇಕ್ಷೆಯ ಮಧ್ಯೆಯು ನಮ್ಮ ನಗರದಲ್ಲಿ ಉತ್ಸವ ನಡೆಸಲು ಗುರುಗಳು ಒಪ್ಪಿಗೆ ನೀಡಿರುವದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು. ಸನಾತನ ವೀರಶೈವ ಲಿಂಗಾಯತ ಧರ್ಮದ ಅತಿದೊಡ್ಡ ಉತ್ಸವವಾಗಿದ್ದು ನೂರಾರು ಸಂಖ್ಯೆಯಲ್ಲಿ ವಿವಿಧ ಮಠಗಳ ಸ್ವಾಮಿಗಳು, ಪಂಚಪೀಠಾಧೀಶ್ವರರು ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ, 10 ದಿನಗಳ ಉತ್ಸವ ಲಕ್ಷಾಂತ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. 11.10.2026 ರಿಂದ 20.10.2026ರ ವರೆಗೆ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಕೃಷಿಮೇಳ, ವಿವಿಧ ಶಿಬಿರಗಳು ಇಷ್ಟಲಿಂಗ ಪೂಜೆ, ಲಿಂಗದೀಕ್ಷೆ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳ ರಚನೆ ಹಾಗೂ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದರು.
ಕಲ್ಯಾಣ ಮಠದ ಗೌರಿಶಂಕರ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಓಲೆಮಠದ ಆನಂದ ದೇವರು, ಕೊಣ್ಣೂರು ಹೊರಗಿನ ಮಠದ ವಿಶ್ವಪ್ರಭುಸ್ವಾ ಮಿಗಳು, ಹಿರೇಪಡಸಲಗಿಯ ಶಿದ್ದಲಿಂಗ ಶಿವಾಚಾರ್ಯರು, ಶೂರ್ಪಾಲಿ ಸಾರಂಗ ಮಠದ ಸುನಂದಮ್ಮ ನವರು, ಮಾತನಾಡಿದರು. ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಿದರು. ಅತಿಥಿ ಅಭ್ಯಾಗತರಿಗೆ ಪ್ರಸಾದ ಹಾಗೂ ಉಳಿದು ಕೊಳ್ಳುವ ವ್ಯವಸ್ಥೆಗಳ ಕುರಿತು ಚರ್ಚೆಗಳು ನಡೆದವು. ಚಂದ್ರು ಬಾಳೆಹಳ್ಳಿ , ವೀರೆಶ ಗುಮ್ಮಟ ಅವರು ವಿಶೇಷ ಸಲಹೆ ಸೂಚನೆ ನೀಡಿದರು,