ಹುನಗುಂದ; ಕಳೆದ ೪ದಶಗಳಿಂದ ಬ್ರಾಹ್ಮಣ ಸಮಾಜವು ಶ್ರೀ ರಾಘವೇಂದ್ರ ಮಠದಲ್ಲಿ ಅಧಿಕ ಮಾಸ ನಿಮಿತ್ಯ ೩೩ದಿನಗಳ ವರೆಗೆ ಮಹಿಳಾ ಸಂಘವು ನಡೆಸಿಕೊಂಡು ಬಂದಂತಂತೆ ಈ ವರ್ಷವೂ ಪ್ರತಿದಿನ ಸಾಯಂಕಾಲ ೫ರಿಂದ ೩೭ ದಾಸರ ಪದ ಹಾಡು ಕಾರ್‍ಯಕ್ರಮ ನಡೆಯುತ್ತಿದೆ. ಕಳೆದ ಮೇ ೧೭ರಿಂದ ಪ್ರಾರಂಭವಾದ ಈ ಕಾರ್‍ಯಕ್ರಮವು ಬರುವ ಜೂನ್ ೧೫ರಂದು ಮುಕ್ತಾಂiiಗೊಳ್ಳುವದು. ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಗೌರಿ ದೇಶಪಾಂಡೆ ಮಾತನಾಡಿ ಪ್ರತಿ ವಷ್ ನಡೆಸುವ ಈ ಕಾರ್‍ಯಕ್ರಮದಿಂದ ಸಮಾಜ ಬಾಲ್ಯ ವಯಸ್ಸಿನ ಮಕ್ಕಳು ದಾಸರ ಪದಗಳನ್ನು ಹಾಡಲು ಮತ್ತು ಕೀರ್ತನಗಳನ್ನು ಕಲಿಯುವವದರ ಜೊತೆಗೆ ವಿಶೇಷ ಗೌರಿ ಪೂಜೆಯಲ್ಲಿ ಪಾಲ್ಗೊಂಡು ವಯಕ್ತಿಕ ಹಾಗೂ ಸಾಮೂಹಿಕ ಹಾಡುಗಳಳನ್ನು ಕಲಿಯುತ್ತಾರೆ ಎಂದರು. ಜೂನ್ ೧೫ರಂದು ಪೂಜೆ ಮುಕ್ತಾಯ ದಿನದಂದು ತೀರ್ಥ ಪ್ರಸಾದ ನಡೆಯಲಿದೆ ಎಂದರು. ಈ ವೇಳೆ ವಿದ್ಯಾ ಗುಡ್ಡದ, ಲೀಲಾವತಿ ದೇಶಪಾಂಡೆ, ವಿಜಯಲಕ್ಷ್ಮಿ ಗುಡ್ಡದ, ಅಂಜಲಿ ಗುಡ್ಡದ, ಕನಿಷಾ ಮುದಕವಿ, ಹೇಮಾವತಿ ದೇಶಪಾಂಡೆ, ಛಾಯಾ ಜೋಶಿ, ಸುಜಾತಾ ದೇಶಪಾಂಡೆ, ಮಾಧವಿ ದೇಶಪಾಂಡೆ, ಸುನಂದಾ ಕುಲಕರ್ಣಿ, ಭವಾನಿ ದೇಶಪಾಂಡೆ, ಅಕ್ಷತಾ ದೇಶಪಾಂಡೆ ಸೇರದಂತೆ ಬ್ರಾಹ್ಮಣ ಸಮಾಜದ ಭಗಿನಿಯರು ಇದ್ದರು.
