Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಟಕಗಳು ಮಾನವೀಯ ಪ್ರತಿಬಿಂಬದ ಪ್ರತೀಕ : ಡಾ.ಸಿ ಬಸವಲಿಂಗಯ್ಯ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 10 ದಿನಗಳ ರಾಷ್ಟಿçÃಯ ರಂಗಭೂಮಿ ಕಾರ್ಯಾಗಾರ



ಬಳ್ಳಾರಿ,ಜೂ.03 : ಮನುಷ್ಯನಲ್ಲಿ ಮಾನವೀಯ ತುಡಿತ ಹಾಗೂ ತಮ್ಮದೇ ಪ್ರತಿಬಿಂಬ ತೋರಿಸಿಕೊಡುವುದೇ ನಾಟಕ ಕಲೆಯ ವೈಶಿಷ್ಟö್ಯ ಎಂದು ಮೈಸೂರಿನ ರಂಗಭೂಮಿ ನಿರ್ದೇಶಕ ಡಾ.ಸಿ ಬಸವಲಿಂಗಯ್ಯ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿ. ಶ್ರೀಮತಿ ರಮಣಿಕ ಗುಪ್ತ ಅವರ ಸ್ಮರಣಾರ್ಥ ಅಂಗವಾಗಿ ಆಯೋಜಿಸಿರುವ 10 ದಿನಗಳ ರಾಷ್ಟಿçÃಯ ರಂಗಭೂಮಿ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳ ಪಾತ್ರಗಳು ಮಾನವನ ಭಾವನೆಗಳೊಂದಿಗಿನ ಆಟವಾಗಿವೆ. ಸೃಜನಶೀಲವಾದ ಸುಳ್ಳುಗಳ ಮೂಲಕ ಪಾತ್ರಗಳಿಗೆ ಜೀವ ತುಂಬಿ ಮನೋಜ್ಞವಾಗಿ ಅಭಿನಯಿಸಿ ಮನಗೆಲ್ಲುವುದೇ ನಾಟಕಗಳ ಜೀವಾಳವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಟಕಗಳು ಸುರ ಮತ್ತು ಅಸುರರ ನಡುವಿನ ಕಾದಾಟದಂತಿರುತ್ತವೆ. ಪ್ರತಿ ಕಲಾವಿದನು ವ್ಯಕ್ತಿತ್ವ, ಚಿತ್ರ, ಅಭಿನಯ ಮೂಲಕ ಚಲನವಲನ, ಮಾತುಗಾರಿಕೆ ಹಾಗೂ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲುಬೇಕು ಎಂದರು.
ಕಾಳಿದಾಸನು ಹೇಳಿರುವಂತೆ ಕಾವ್ಯೇಶು ನಾಟಕ ಬ್ರಹ್ಮೆ ಎಂಬ ಮಾತಿಗೆ ಪೂರಕವಾಗಿ ಮಹಾಶಿವನು ಒಬ್ಬ ಆದಿನಟನಂತಿದ್ದು, ಆತನ ಬಾಹ್ಯ ಪೋಷಾಕುಗಳು ಒಬ್ಬ ಕಲಾವಿದನನ್ನು ಸೂಚಿಸುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಮಾತನಾಡಿ, ಪತ್ರಕರ್ತರೇ ನಿಜವಾದ ಪ್ರೇಕ್ಷಕರಂತಿದ್ದು, ಜಗತ್ತಿನಲ್ಲಿ ನಡೆಯುವ ಎಲ್ಲ ಪ್ರಹಸನಗಳಿಗೂ ಪುರಾವೆಯಾಗಿರುತ್ತಾರೆ. ನಾಡಿನಲ್ಲಿ ನಡೆಯುವ, ನಡೆಯುತ್ತಿರುವ ಚಳುವಳಿಗಳಿಗೆ ಶಕ್ತಿ ಕೊಟ್ಟಿದ್ದೆ ರಂಗಭೂಮಿ. ಆದರೆ ಇತ್ತೀಚಿನ ದಿನಗಳಲ್ಲಿ ‘ಭೂಮಿ’ಗೆ ತಲೆದೋರಿರುವ ನೈಸರ್ಗಿಕ ಸಮಸ್ಯೆಗಳಂತೆ ರಂಗಭೂಮಿ ಕ್ಷೇತ್ರಕ್ಕೂ ಸಂಕಷ್ಟ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
ಬಳ್ಳಾರಿಗೂ, ನಾಟಕಕ್ಕೂ ಅವಿನಾಭಾವ ಸಂಬAಧವಿದ್ದು, ಬಳ್ಳಾರಿ ರಾಘವರಂತ ಕಲಾವಿದರೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಸ್ವಾತಂತ್ರö್ಯ ಪೂರ್ವದಿಂದಲೂ ಚಳುವಳಿಗಳ ಸಂಘಟನೆಗೆ ನಾಟಕಗಳು ಮಾಧ್ಯಮವಾಗಿದ್ದವು. ಇಂದಿನ ಪೀಳಿಗೆಯು ಮೊಬೈಲ್, ಟಿವಿ ಗೀಳಿನಿಂದಾಗಿ ಕಲ್ಪನಾಶಕ್ತಿಯೇ ಇಲ್ಲಂದAತಾಗಿದೆ. ಹೊಸ ಚಿಂತನೆಗಳಿಗೆ ಈ ಶಿಬಿರವು ನಾಂದಿ ಹಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ವಿವಿಧ ರಿಯಾಲಿಟಿ ಶೋಗಳ ಮೂಲಕ ನಾಡಿನ ಅನೇಕ ಪ್ರತಿಭೆಗಳನ್ನು ಟಿ.ವಿ ಚಾನೆಲ್‌ಗಳು ಹೊರತಂದಿವೆ. ನಾಟಕ ರೂಪಿಸುವ ಸಂಪೂರ್ಣ ಜವಾಬ್ದಾರಿ ಒಬ್ಬ ನಿರ್ದೇಶಕನ ಮೇಲಿರುತ್ತದೆ. ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗಕ್ಕೆ ಧನಸಹಾಯ ಮಾಡಿರುವ ದಿ. ರಮಣಿಕ ಗುಪ್ತ ಅವರ ಹೆಸರಲ್ಲಿ ಚಿನ್ನದ ಪದಕ ನೀಡುವಲ್ಲಿ ಚಿಂತನೆ ನಡೆಸಬೇಕು ಎಂದು ವಿಭಾಗದ ಮುಖ್ಯಸ್ಥರಿಗೆ ತಿಳಿಸಿದರು.
ಇದೇ ವೇಳೆ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಫಿಲ್ಮ್ ಇನ್ಸಿ÷್ಟಟ್ಯೂಟ್ ನಿರ್ಮಿಸಲು ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಪ್ರೊ.ಶಾಂತಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ವಿವಿಯ ಕುಲಸಚಿವ ಪ್ರೊ.ವಿ.ಲೋಕೇಶ್, ಕಲಾ ನಿಕಾಯದ ಡೀನ್ ಪ್ರೊ.ರಾಬರ್ಟ್ ಜೋಸ್ ವೇದಿಕೆಯಲ್ಲಿದ್ದರು. ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ನಿರೂಪಿಸಿದರು. ಡಾ.ಶಿವಪ್ರಸಾದ್ ವಂದಿಸಿದರು.
ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರಗಳು 10 ದಿನಗಳ ಕಾಲ ನಡೆಯಲಿದ್ದು, 250ಕ್ಕೂ ಅಧಿಕ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ನೋಂದಣಿ ಮಾಡಿಕೊಂಡಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*