Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆಣ್ಣು ಕುಟುಂಬದ ಆರೋಗ್ಯದ ಕಣ್ಣು ; ಡಾ. ವೀಣಾ ಕೆ 

ಬಳ್ಳಾರಿ. ನ. 22::. ಹೆಣ್ಣು ಆರೋಗ್ಯದ ಕಣ್ಣು ಉತ್ತಮವಾದ ಅಡುಗೆಯನ್ನು ಮಾಡಿ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವುದು ಹೆಣ್ಣು, ಅಡುಗೆಯಲ್ಲಿ ಪೌಷ್ಟಿಕಾಂಶಯುಕ್ತ ಮೊಳಕೆ ಕಾಳು ಮತ್ತು ಹಸಿ ತರಕಾರಿಗಳಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಕುಟುಂಬದ ಮಹಿಳೆ ಈ ಉತ್ತಮವಾದ ಗುಣಮಟ್ಟದ ಆಹಾರವನ್ನು ತಯಾರಿಸಿದಲ್ಲಿ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡಾ. ವೀಣಾ ಕೆ ಮಹಿಳೆಯರಿಗೆ ಕಿವಿಮಾತು ಹೇಳಿದರು.


 ಅವರು ಇಂದು ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತರಾಗಿದ್ದಲ್ಲಿ ಕುಟುಂಬವನ್ನು ಆರೋಗ್ಯವಾಗಿಡಬಹುದು ಅತ್ಯಂತ ವಿಶೇಷವಾಗಿ ಮಹಿಳೆಯರ ಆರೋಗ್ಯದಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಗಂಡದ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿವೆ ಇವುಗಳನ್ನು ಮುಂಜಾಗ್ರತ ಕ್ರಮವಾಗಿ  ಅದರಲ್ಲೂ ಮಹಿಳೆಯರ ಗರ್ಭಕಂಠ ಕ್ಯಾನ್ಸರನ್ನು ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಅತ್ಯಕ್ಕಬಹುದು ಎಲ್ಲರೂ ಈ ವ್ಯಾಕ್ಸಿನನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.


 ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಯೋಜನಾಧಿಕಾರಿ ರೋಹಿತಾಕ್ಷ, ರೈತರು ಮತ್ತು ಮಹಿಳೆಯರ ಜೀವನ ಸುಧಾರಣೆಗಾಗಿ ಅಮ್ಮ ಹೇಮಾವತಿ ಹೆಗ್ಗಡೆಯವರು ಈ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಕಳೆದ 30 ವರ್ಷಗಳ ಹಿಂದೆ ತಾಲೂಕ ಮಟ್ಟದಲ್ಲಿ ಆಯೋಜಿಸಿದ್ದರು ಮಹಿಳೆಯರಿಗೆ ಕಾನೂನು ಸೌಲಭ್ಯ ಸ್ವಾವಲಂಬಿ ಜೀವನ ವಿದ್ಯೆ ಉದ್ಯೋಗ ಕುಟುಂಬ ನಿರ್ವಹಣೆ ಸೇರಿದಂತೆ ಐದಾರು ವಿಷಗಳೊಂದಿಗೆ ಆರಂಭವಾದ ಈ ಯೋಜನೆ ಜನಪದ ಶೈಲಿಯಲ್ಲಿ ಬಾಯಿಂದ ಬಾಯಿಗೆ ಹರಡಿ ಇಂದು ರಾಜ್ಯಾದ್ಯಂತ ಗೃಹದಾಕಾರವಾಗಿ ಬೆಳೆದು ನಿಂತಿದೆ ಸುಮಾರು 4,56,000 ಸಂಘಗಳಿಂದ ಕೂಡಿದ ಈ ಸಂಸ್ಥೆ ಶೇಕಡಾ 90% ಮಹಿಳಾ ಮಣಿಗಳನ್ನು ಹೊಂದಿದೆ 51 ಲಕ್ಷ ಸದಸ್ಯರಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು  ಮಹಿಳಾ ಕಾರ್ಯಕರ್ತರಿದ್ದಾರೆ, ಮಹಿಳೆಯರ ಜೀವನ ಅಭಿವೃದ್ಧಿಯೇ ಧರ್ಮಸ್ಥಳ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.


ಸಂಸ್ಥೆಯ ಪ್ರಾಜೆಕ್ಟ್ ಅಧಿಕಾರಿ ಸೇರಿದಂತೆ, ಬಳ್ಳಾರಿ-1 ಘಟಕದ ಅಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಬಳ್ಳಾರಿ ತಾಲೂಕಿನಲ್ಲಿ ಮಹಿಳಾ ಸಂಘಟನೆಗಳ ಬಲವರ್ಧನೆಗೆ ಈ ವಿಚಾರಗೋಷ್ಠಿ ಮತ್ತೊಂದು ಹೆಜ್ಜೆ ಎಂದೂ ಭಾಗವಹಿಸಿದ ಮಹಿಳೆಯರು ಅಭಿಪ್ರಾಯ ಪಟ್ಟರು. ಈ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಜನಾರ್ದನ ರೆಡ್ಡಿ ಸದಸ್ಯರಾದ ಜಿ ನಾಗರಾಜ ರೆಡ್ಡಿ ಪುಷ್ಪಲತಾ ರೂಪಶ್ರೀ ವೀಣಾ ಕುಮಾರಿ ರಂಗಭೂಮಿ ಕಲಾವಿದರು ಕರ್ನಾಟಕ ಗ್ರಾಮೀಣ ಅಧಿಕಾರಿಗಳಾದ ಜಯಶ್ರೀ ಸೌಜನ್ಯ ಪ್ರಕಾಶ್ ರೆಡ್ಡಿ ಸೇರಿದಂತೆ ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ