ಇಂಡಿ,ಜೂ,೦೮: ಸಮಾಜದ ಏಳ್ಗೆಗಾಗಿ ಬಡವ ಬಲಿದ ಎಂಬ ಭೇಧ ವಿಲ್ಲದೆ ಬಡವರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯ ಕಾಪಾಡಿ ಗುಣಮುಖ ವಾಗುವಂತೆ ಮಾಡುವವವರು ವೈದ್ಯರು. ಇಂದು ವೈದ್ಯ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಡಾ|| ರಾಜೇಶ ಕೋಳೆಕರ ಅವರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಮಾಜಿ ಆರೋಗ್ಯ ವೈದ್ಯಾಧಿಕಾರಿ ಮತ್ತು ಮಾಜಿ ಶಾಸಕ ಡಾ|| ಸಾರ್ವಭೌಮ ಬಗಲಿ ಹೇಳಿದರು.
ನಗರದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಆರೋಗ್ಯ ಇಲಾಖೆಯಲ್ಲಿ ತಾಲೂಕಾ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ|| ರಾಜೇಶ ಕೋಳೆಕರ ಇವರ ನಿವೃತ್ತಿ ಬಿಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ತಾಪಂ ಇಒ ಮಹಾದೇವಪ್ಪ ಏವೂರ ಮಾತನಾಡಿ ಕೋವಿಡ್ ಸಮಯದಲ್ಲಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ತಮ್ಮ ತಂಡದ ಜೊತೆಗೆ ಕೋವಿಡ್ ಚಿಕಿತ್ಸೆ ನೀಡಿ ನೂರಾರು ಜನರ ಆರೋಗ್ಯ ಕಾಪಾಡಿರುವದು ಡಾ|| ರಾಜೇಶ ಕೋಳೆಕರ ಇವರ ಕಾರ್ಯ ಪ್ರಶಂಸನೀಯ ಎಂದರು.
ನಿವೃತ್ತ ಡಾ|| ರಾಜೇಶ ಕೋಳೆಕರ ನನ್ನ ವೈದ್ಯ ವೃತ್ತಿ ಜೀವನದಲ್ಲಿ ಎಲ್ಲರು ಸಹಕಾರ ನೀಡಿದ್ದರಿಂದ ೩೦ ವರ್ಷಗಳ ಕಾಲ ಸುದಿರ್ಘವಾಗಿ ಸೇವೆ ಮಾಡಲು ಸಾದ್ಯವಾಗಿದೆ. ನಾನು ಇಂಡಿ ನಗರದಲ್ಲಿ ಹುಟ್ಟಿ ಬೆಳೆದು ಇದೇ ನಗರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.
ರಲ್ಲಿ ಕೃಷಿ ಉಪ ನಿರ್ದೇಶಕರ ಚಂದ್ರಕಾಂತ ಪವಾರ, ಆರೋಗ್ಯ ಅಧಿಕಾರಿ ಡಾ|| ಸಂಪತಕುಮಾರ ಗುಣಾರಿ, ಡಾ|| ಅನೀಲ ವಾಲಿ, ಡಾ|| ಸಂತೋಷ ಪವಾರ, ಪ್ರೀತಿ ಕೋಳೆಕರ , ಲಲಿತಾ ಅಂಗಡಿ ಮತ್ತು ಧನರಾಜ ಮುಜಗೊಂಡ ನಿವೃತ್ತ ಡಾ|| ರಾಜೇಶ ಕೋಳೆಕರ ಮಾತನಾಡಿದರು.
ವೇದಿಕೆಯ ಮೇಲೆ ಕೃಷ್ಣ ಕುಮಾರ ಜಾಧವ, ಡಾ|| ಮಲ್ಲನಗೌಡ ಬಿರಾದಾರ ಸಂತೋಷ ಶೆಟ್ಟಿ ಹಿರಿಯ ವೈದ್ಯ ಡಾ|| ಎಂ.ಜೆ.ಪಾಟೀಲ, ಸಿ.ಪಿ.ಐ ಪ್ರದೀಪ ಬಿಸೆ, ಡಾ|| ವಿಜಯಕುಮಾರ ಕಟಕದೊಂಡ, ಡಾ. ಎಸ್.ಐ ಮೇತ್ರಿ,ಜಗದೀಶ ಕ್ಷತ್ರಿ, ವಿಜಯಕುಮಾರ ಪಾಟೀಲ, ಸಿ.ಎಂ.ತಾಳಿಕೋಟಿ, ಆಸ್ಪತ್ರೆ ವೈದ್ಯಾದಿಕಾರಿ ಆರ್.ಎಸ್.ಇಂಗಳೆ ನಜಿಮಾ ಕಾಖಂಡಕಿ, ಗುರುಬಾಯಿ ಹಿರೇಪಟ್ಟ ಮತ್ತಿತರಿದ್ದರು.
ವೈದ್ಯರಾದ ಪ್ರದೀಪ ಗಜಾಕೋಶ, ಮನೋಜ ಗಿಡಗಂಟಿ, ವಿಪುಲ ಕೋಳೆಕರ, ಅಮೀತ ಕೋಳೆಕರ, ರವಿ ಅಂಬೇವಾಡಿ, ವಿಕಾಸ ಸಿಂದಗಿ, ಶ್ರೀಮತಿ ವಿಜಯಾದೇವಿ ಹಾದಿಮನಿ ಮತ್ತಿತರಿದ್ದರು.