ರಾಜಾ ಲಖನಗೌಡ ವಿಜ್ಞಾನ ಮಹಾವಿದ್ಯಾಲಯದ ಸಿ.ವಿ.ರಾಮನ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅವರು ಆಯೋಜಿಸಿದ "ವ್ಯಸನಮುಕ್ತ ಜಾಗೃತಿ ಅಭಿಯಾನ" ಕಾರ್ಯಕ್ರಮದಲ್ಲಿ "ಡ್ರಗ್ ವ್ಯಸನ ಮಾರಕ" ಎಂಬ ವಿಷಯದ ಕುರಿತು ಡಾ. ಸ್ಪೂರ್ತಿ ಮಾಸ್ತಿಹೊಳಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇದರಲ್ಲಿ ಪಾಲಕರ ಪಾತ್ರ ಮುಖ್ಯ. ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಸಮಾಜಪರ ಚಿಂತನೆಗಳ ಸೇವಾ ಸಂಸ್ಥೆಗಳು ಮೆಲಿಂದ ಮೇಲೆ ಕಾರ್ಯಾಗಾರವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮಾಡಿಸಬೇಕು.ನಮ್ಮ ನಾಡಿನ ಮುಂದಿನ ಪ್ರಜೆ ಗಳಾದ ಇಂದಿನ ಯುವ ಪೀಳಿಗೆ ವ್ಯಸನಮುಕ್ತ ಪ್ರಜೆಗಳಾಗಿ ಸದೃಢ ದೇಶದ ನಿರ್ಮಾಣದ ಹೊಣೆ ತಮ್ಮ ಮೇಲಿದೆ ಅಂತ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ರೊ.ಉದಯಸಿಂಗ ರಜಪೂತ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದನೆ ಮಾಡಿದರು.ವೇದಿಕೆಯ ಮೇಲೆ ಇವೆಂಟ್ ಚೇರ್ಮನ್ ರೊ.ಗಿರೀಶ ಕತ್ತಿಶೆಟ್ಟಿ.ರೊ.ನಂದನ ಬಾಗಿ ಇದ್ದರು ವಿದ್ಯಾಲಯ ದಪ್ರಚಾರ್ಯರು ಸ್ವಾಗತಿಸಿದರು ವಿನಯಕುಮಾರವರು ವಂದನಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಡಾ.ವಿಜಯ ಪೂಜಾರ,ರೊ.ಅಶೋಕ ಬದಾಮಿ,ರೊ.ರಾಜೀವ ದೇಶಪಾಂಡೆ ಉಪಸ್ಥಿತರಿದ್ದರು.