Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ಶಿವಲಿಂಗೇಶ್ವರ ಶ್ರೀಗಳ ಸಾಧನೆ ಅಪಾರ: ಪ್ರೊ. ಡಾ.ಎ.ಎಸ್. ಆಲೂರ

ಬೆಳಗಾವಿ: ವ್ಯಕ್ತಿತ್ವದ ವೈಭವೀಕರಣಕ್ಕಿಂತ ಸಾಮಾಜೀಕರಣ ಮುಖ್ಯ ಎನುವ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳ ಚಿಂತನೆ ನಾಡಿನ ಭಕ್ತರ ಹೃದಯಕ್ಕೆ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಪ್ರೊ. ಡಾ. ಎ.ಎಸ್. ಅಲೂರ ಹೇಳಿದರು.



ಸಮೀಪದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಿಮಿತ್ತ ಹಿರಾ ಶುಗರ್ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಭವಿಷ್ಯದ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ- 2020 ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ, ''ಬಡವ- ಶ್ರೀಮಂತರೆಂಬ ಭೇದವಿಲ್ಲದೆ ನಾಡಿನ ಭಕ್ತರ ಬದುಕಿನಲ್ಲಿಸತ್ಸಂಗದ ಚಿಂತನೆ ಮೂಡಿಸಿ ಮೌಡ್ಯತೆಯ ಅಂಧಕಾರ ದೂರಗೊಳಿಸಿರುವ ಶ್ರೀಗಳ ಕೈಂಕರ್ಯ ವರ್ಣಿಸಲು ಸಾಧ್ಯವಿಲ್ಲ'', ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, "ಯಾವ ಜ್ಞಾನ ಕರ್ಮದ ಅನುಭವಕ್ಕೆ ಬರುವುದಿಲ್ಲವೋ ಆ ಜ್ಞಾನ
ವ್ಯರ್ಥ, ಇಂದಿನ ಶಿಕ್ಷಣ ಪದ್ಧತಿ ಕೇವಲ ಸರ್ಟಿಫಿಕೆಟ್ ಗಳಿಗೆ ಸೀಮಿತವಾಗಿದೆ. ಕೌಶಲರಹಿತ ಜೀವನದಿಂದ ಭವಿಷ್ಯದಲ್ಲಿ ದೇಶಕ್ಕೆ ಆಪತ್ತು ಎದುರಾಗಲಿದೆ. ನಿಡಸೋಸಿ ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ಕೃಷಿ ಸಾಧನೆಗಳನ್ನು ಪರಿಗಣಿಸಿ ನೀಡಿದ ಗೌರವ ಡಾಕ್ಟರೇಟ್ ವಿಶ್ವ ವಿದ್ಯಾಲಯದ ಘನತೆಯನ್ನು ಹೆಚ್ಚಿಸಿದೆ'', ಎಂದರು.

ಜಂಗಮಶೆಟ್ಟಿ ಮಾತನಾಡಿ, "ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ಸುತ್ತಲಿನ ಪರಿಸರದ ಕೌಶಲ ಅಭಿವೃದ್ಧಿ ಜತೆಗೆ ದೇಶದ ಇತಿಹಾಸ, ಕಾರ್ಯಕ್ರಮ ಶಿಕ್ಷಣ ನಿಧಿ ಸಾಂಸ್ಕೃತಿಕ, ಸಂಪ್ರದಾಯ, ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳು ಬೆಳವಣಿಗೆಯಾಗುತ್ತವೆ". ಎಂದರು.

ఎనో జీవఎనో ಟ್ರಸ್ಟ್ ಉಪಾಧ್ಯಕ್ಷ ಜಿ.ಎಮ್. ಪಾಟೀಲ, ನಿರ್ದೇಶಕರಾದ ರಾಜೇಂದ್ರ ಪಾಟೀಲ, ಬಿ.ಎಲ್. ಖೋತ, ಕಾಶಿನಾಥ ಗುರವ, ಕಾರ್ಯದರ್ಶಿ ಸುರೇಶ ಬೆಲ್ಲದ, ಚಂದ್ರಕಾಂತ ಕೋಠಿವಾಲೆ, ದುಂಡಪ್ಪಗಳಗಿ, ಸಲಹಾ ಸಮಿತಿ ಸದಸ್ಯರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇದ್ದರು.   ಹಿರಾ ಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ. ಎಸ್.ಸಿ. ಕಮತೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ನಮ್ಮ ಪ್ರತಿ ಕಾರ್ಯಕ್ಕೂ ಪಂಚಮ ಲಿಂ.ನಿಜಲಿಂಗೇಶ್ವರರು, ಬಸಗೌಡ ಪಾಟೀಲ, ದೇವದಾಸಿ ಸಂಘಟನೆಯ ಲತಾಬಾಯಿ ಹಾಗೂ ಶ್ರೀಮಠದ ಸದ್ಭಕ್ತರು ಸದಾ ಗುರುವಿನ ಸ್ಥಾನದಲ್ಲಿ ನಿಂತು ಪ್ರೇರಣೆಯಾಗಿದ್ದಾರೆ. ಡಾ.ಶಿವಲಿಂಗೇಶ್ವರ ಸ್ವಾಮೀಜಿ,ನಿಡಸೋಸಿ ಜಗದ್ಗುರು ಪೂಜೆ ಮಾಡುವವ ಭಕ್ತನಲ್ಲ, ಕಾಯಕದ ಪೂಜೆ ಸಲ್ಲಿಸುವ ಮೂಲಕ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾಯಕಯೋಗಿಯಾಗಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕರಿಸಿ ಆರ್‌ಸಿಯು ಗುರುತರ ಕಾರ್ಯ ಮಾಡಿದೆ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಗದಗ ತೋಂಟದಾರ್ಯ ಮಠ ಬಿ.ಆರ್. ಉಮರಾಣೆ ಪರಿಚಯಿಸಿದರು. ಬಸವರಾಜ ಹಾಲಭಾವಿ, ಆರ್.ಓಂಕಾರಪ್ಪ, ಭಾವಲಿಂಗಾ ಖೋತ ಹಾಗೂ ಸುನೀತಾ ಬಾಗೇವಾಡಿ ನಿರೂಪಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ