ತಾಳಿಕೋಟೆ, ಹಸಿರು ಕ್ರಾಂತಿಯ ಹರಿಕಾರ, ದೇಶ ಕಂಡ ಶ್ರೇಷ್ಠ ನಾಯಕ, ಭಾರತದ ಮಾಜಿ ಉಪಪ್ರಧಾನಿಗಳಾದ ಡಾ. ಬಾಬು ಜಗಜೀವನ ರಾಮ್ ಅವರ ೪೦ನೇ ಪುಣ್ಯಸ್ಮರಣೆಯನ್ನು ತಹಶೀಲ್ದಾರರ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀಮತಿ ಡಾ.ವಿನಯಾ ಹೂಗಾರ ಹಾಗೂ ಯಮನಪ್ಪ ಕಟ್ಟಿಮನಿ ಅವರು ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲಪ್ಪ ಶಿರೋಳ, ಪರಶುರಾಮ ಹೋಟಗಾರ, ದ್ಯಾಮಣ್ಣ ಸೋಮನಾಳ, ಬಸ್ಸು ಕಟ್ಟಿಮನಿ, ರಮೇಶ್ ಮಾದರ, ಕಾಶಿನಾಥ ಕಟ್ಟಿಮನಿ, ರಮೇಶ್ ದೋಡಮನಿ, ಹುಲಗಪ್ಪ ಕಟ್ಟಿಮನಿ, ಆಸೀಫ್ ಕೆಂಭಾವಿ, ಮಡು ಚಲವಾದಿ, ಗೋಪಾಲ ಕಟ್ಟಿಮನಿ, ಶೇಖಪ್ಪ ಕಾರಗಾನೂರ ಹಾಗೂ ತಹಶೀಲ್ದಾರರ ಕಚೇರಿ ಸಿಬ್ಬಂದಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.