Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಚ ಪೀಠಾಧಿಪತಿಗಳ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ: ಜೋತಿಷ್ಯ ರತ್ನ ಡಾ.ರಮೇಶಕುಮಾರ ಶಾಸ್ತ್ರಿ

ರನ್ನ ಬೆಳಗಲಿ:ಸೆ.೧೬.,ನವರಾತ್ರಿ ಉತ್ಸವದ ಪ್ರಯುಕ್ತ ಸೆ.೧೮ರ ಗುರುವಾರ ಸಂಜೆ ೬.೩೦ಕ್ಕೆರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳ ಸಾನಿಧ್ಯದಲ್ಲಿ ೩೦ಕ್ಕೂ ಹೆಚ್ಚು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೃಹತ್ ಧರ್ಮಸಭೆ ನಡೆಯಲಿದೆ ಎಂದು ಜ್ಯೋತಿಷ್ಯ ರತ್ನ ಡಾ. ರಮೇಶಕುಮಾರ ಶಾಸ್ತ್ರಿ ತಿಳಿಸಿದರು.

ಮಹಾಲಿಂಗ ಪೂರ ಜಿಎಲ್‌ವಿಸಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವ?ದಂತೆ ಈ ಬಾರಿಯೂ ರನ್ನಬೆಳಗಲಿಯ ಶ್ರೀ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ ಪುಣ್ಯಕೋಟಿ ಸಿದ್ಧಾಶ್ರಮದ ವತಿಯಿಂದ ನಾಡಹಬ್ಬ ದಸರಾ, ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ, ಬೃಹತ್ ಕುಂಭಮೇಳ ಮತ್ತು ನವರಾತ್ರಿ ಉತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸೆ. ೧೭ ರಿಂದ ಎರಡು ದಿನಗಳ ಕಾಲ ೫೦ ಕ್ಕಿಂತ ಹೆಚ್ಚಿನ ನುರಿತ ಪಂಡಿತರಿಂದ ಯಜ್ಞ ಯಾಗ ಜರಗುವುದು.ಸೆ.೧೮ ಗುರುವಾರ ಬೆಳಿಗ್ಗೆ ೭.೩೦ಕ್ಕೆ ನಿಡಸೋಸಿ ಶ್ರೀಗಳಾದ ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳಿಂದ ಆದಿಶಕ್ತಿ ಭುವನೇಶ್ವರಿ ದೇವಿ ಮೂರ್ತಿಗೆ ಪ್ರಾಣ ಪ್ರತಿ?ಪನೆ, ೮.೩೦ ಕ್ಕೆ ಮಹರ್ಷಿ ಡಾ. ಆನಂದ ಗುರೂಜಿ ಅವರಿಂದ ವಿಶ್ವ ಶಾಂತಿಗಾಗಿ ಆಯುತ ಮಹಾ ಚಂಡಿಯಾಗ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಶ್ರೀ ಚಕ್ರಕ್ಕೆ ವಿಶೇ? ಕುಂಕುಮಾರ್ಚನೆ ಮಧ್ಯಾಹ್ನ ೩ಕ್ಕೆ ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಬೃಹತ್ ಕುಂಭಮೇಳ ಹಾಗೂ ೫೦೦೮ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ, ಸಂಜೆ ೬ಕ್ಕೆ ಕಾಶಿಯ ನುರಿತ ಪಂಡಿತರಿಂದ ಶಾಂಭವಿ ಸರೋವರಕ್ಕೆ ಮಹಾಗಂಗಾರತಿ, ೬.೩೦ಕ್ಕೆ ಪಂಚ ಪೀಠಾಧೀಶ್ವರರ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ, ಆಶೀರ್ವಚನ, ಮಹಾಪ್ರಸಾದ ಮರುದಿನ ಸೆ. ೧೯ರ ಬೆಳಗ್ಗೆಯಿಂದ ವಿವಿಧ ಮಠಾಧೀಶರ ಭೇಟಿ ಹಾಗೂ ಸಂಜೆ ೭.೩೦ಕ್ಕೆ ರಾಜ್ಯದ ಮತ್ತು ಉತ್ತರ ಕರ್ನಾಟಕದ ಹೆಸರಾಂತ ಕಲಾವಿದರಿಂದ ಅದ್ದೂರಿ ಹಾಸ್ಯ ಮತ್ತು ಸಂಗೀತ ರಸಮಂಜರಿ ಜರುಗುವುದಾಗಿ ತಿಳಿಸಿದರು.

ಮುಖಂಡರಾದ ಸಿದ್ದುಗೌಡ ಪಾಟೀಲ, ಪಂಡಿತ ಪೂಜಾರಿ, ಶಿವನಗೌಡ ಪಾಟೀಲ, ಚಿಕ್ಕಪ್ಪನಾಯಕ, ಹನಮಂತ ಕೊಣ್ಣೂರ, ಶಿವಪ್ಪ ಹಾಡಕರ, ಮಹಾದೇವ ನೇಸೂರ, ನಾಗಪ್ಪ ಪಾಶ್ಚಾಪುರ, ಮಹಾಲಿಂಗಯ್ಯ ಮಠಪತಿ, ಪ್ರಕಾಶ ಪಾಶ್ಚಾಪುರ, ರವಿಚಂದ್ರ ಸಾಲಿಮನಿ ಮತ್ತಿತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ