Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೀವನದಲ್ಲಾಗುವ ತಿರುವುಗಳಿಂದ ಬದಲಾವಣೆಯಾಗುತ್ತದೆ: ಡಾ.ಕೃಷ್ಣಕೊಲ್ಹಾರ ಕುಲಕರ್ಣಿ


ವಿಜಯಪುರ : 'ಜೀವನದಲ್ಲಿ ತಿರುವುಗಳು ಯಾವಾಗಲಾದರೂ ಬರಬಹುದು ಮಹಿಪತಿ ದಾಸರಿಸಿಗೆ ನಂಗಾಶಾಹಿ ಸೂಫಿಯ ಮೂಲಕವಾಗಿ ಅವರು ಆಧ್ಯಾತ್ಮದತ್ತ ಹೊರಳಿದರು'  ಡಾ. ಕೃಷ್ಣ ಕೊಲ್ಹಾರಕುಲಕರ್ಣಿ  ಹೇಳಿದರು.


ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ  ನಡೆದ, 'ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ)' ಆಯೋಜನೆ 'ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ' ವಿಷಯ ಮೇಲೆ ಮಾತಾಡಿದ ಅವರು   'ಮಲ್ಲಿಕ್ ಕಾಫೂರ್, ಮಹಮ್ಮದ್ ಬಿನ್ ತುಘಲಕ್ ದಾಳಿಯ ನಂತರ ದಕ್ಷಿಣದ ತುಂಗಭದ್ರಾ ನದಿಯ ಕೆಳಗಿನ ಭಾಗದಲ್ಲಿ 'ವಿಜಯನಗರ" ಸಾಮ್ರಾಜ್ಯ ; ನದಿಯ ಮೇಲ್ಬಾಗ ಬಹುಮನಿ ಸಾಮ್ರಾಜ್ಯಗಳು ಉದಯಿಸಿದವು.  ಬಹುಮನಿ ಸಾಮ್ರಾಜ್ಯದಲ್ಲಿ ವಿಜಯಪುರ ಒಂದು ಸುಬೆಯಾಗಿದ್ದು 'ಯೂಸುಫ್' ಈ ಸುಬೆಯ  ಸರ್ದಾರನಾಗಿದ್ದನು. ಅವನೇ ಮುಂದೇ ಆದಿಲ್ ಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ. ಈ ಆದಿಲ್ ಶಾಹಿ ಮನೆತನದ ಎರಡನೇ ಅಲಿ ಆದಿಲ್ ಶಾಹಿ ಕಾಲದಲ್ಲಿ ಮಹಿಪತಿದಾಸರು ಹಣಕಾಸು ಇಲಾಖೆಯಲ್ಲಿದ್ದರು.  ಅವರಿಗೆ ನಂಗಾಶಾಹಿ ಸೂಫಿಯ ಮೂಲಕ  ಪರಿವರ್ತನೆಗೊಂಡು  ಭಾಸ್ಕರಸ್ವಾಮಿಗಳ ಶಿಷ್ಯರಾಗುತ್ತಾರೆ.   ಮಹಿಪತಿದಾಸರು ಯೋಗ ಸಾಧನ ಮೂಲಕ ದಿವ್ಯತೆಯನ್ನು ಪಡೆದರು. ಅದನ್ನು ಅವರ ಅನೇಕ ಕೀರ್ತನೆಗಳಲ್ಲಿ ಶಬ್ದದಲ್ಲಿ ಹಿಡಿದಿಟ್ಟಿದ್ದಾರೆ' ಎಂದು ಮಹಿಪತಿದಾಸರ ಚರಿತ್ರೆಯನ್ನು ವಿವರಿಸಿದರು.


'ಮಹಿಪತಿದಾಸರ ಕೀರ್ತನೆಗಳು ಈ ವರೆಗೂ ಸಂಪೂರ್ಣವಾಗಿ ಮುದ್ರಣವಾಗಿಲ್ಲ ,ಮುದ್ರಣವಾಗಬೇಕೆಂದು' ಇನ್ನೋರ್ವ ಉಪನ್ಯಾಸಕಾರದ ನಾರಾಯಣ ಬಾಬಾನಗರ ಆಶಿಸಿದರು.  'ದಾಸರ , ಶರಣ ,ಹಳೆಗನ್ನಡ ಕವಿಗಳ ಕುರಿತು ಸಾಹಿತ್ಯಕ ಕಾರ್ಯಕ್ರಮ ಆಗಾಗ ಆಗುತ್ತಿರಬೇಕೆಂದು' ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹರ್ಷವರ್ಧನ  ಸರಾಫ್ ಅಭಿಪ್ರಾಯ ವ್ಯಕ್ತಪಡಿಸಿದರು.


ಪ್ರಾರ್ಥನೆ ಶ್ರೀಮತಿ ಪ್ರಿಯಾ ಹರಿದಾಸ, ಸ್ವಾಗತಪರಿಚಯ ಆನಂದ ಗೋಡ್ಸೆ,ನಿರೂಪಣೆ ರಾಹುಲ್ ಮರಳಿ , ವಂದನಾರ್ಪಣೆ ಶ್ರೀರಂಗ ಕುಲಕರ್ಣಿ ನಿರ್ವಹಣೆ ಮಾಡಿದರು.  ವಿವೇಕ ಕುಲಕರ್ಣಿ ,ಶ್ರೀರಂಗ ಪುರಾಣಿಕ , ಅನಿಲ ಬಳ್ಳುಂಡಗಿ , ಸುಕಾಂತ ಕುಲಕರ್ಣಿ, ವರಣು ಸೋಲಾಪುರ, ಮಯೂರ ತಿಳಗೂಳಕರ , ಆನಂದ ಜೋಶಿ , ಶಶಿಧರ ಶಿರಾಳಶೆಟ್ಟಿ, ರವೀಂದ್ರ ಹಲ್ಯಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ