ಹೊಸಪೇಟೆ: ಜು ೮. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೊಂದಣಿಗೆ ಆಗ್ರಹಿಸಿ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ವೃತ್ತದಿಂದ ಪ್ರತಿಭಟನೆ ಆರಂಭವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಸಾಗಿತು. ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಪ್ರತಿಭಟನಾಕಾರರು ಕೈಯಲ್ಲಿ ಬ್ಯಾನರ್, ಪ್ಲೇ ಕಾರ್ಡ್ ಹಿಡಿದು "ಆರ್.ಎಸ್.ಎಸ್ ನೊಂದಣಿ ಮಾಡಿ", "ಸಂವಿಧಾನ ರಕ್ಷಿಸಿ" ಎಂಬ ಘೋಷಣೆ ಕೂಗಿದರು. ಬ್ಯಾನರ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಾಗೂ "ಸಂವಿಧಾನ ಸಂರಕ್ಷಣಾ ಸಮಿತಿ" ಎಂದು ಬರೆಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರಾದ "ಸೋಮ ಶೇಖರ್ ಬಣ್ಣ ದ ಮನೆ " , ಮರಡಿ ಜಂಬಯ್ಯ ನಾಯಕ, ಡಿ. ವೆಂಕಟರಮಣ, ಎ. ಕರುಣಾನಿಧಿ, ವೈ. ರಾಮಚಂದ್ರ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಮತ್ತಿತರರು ಮಾತನಾಡಿ, "ಸಂವಿಧಾನದ ಮಾನಸಿಕತೆಯ ವಿರುದ್ಧ ಪ್ರತಿಕ್ರಿಯಿಸುವ ಸಂಘ ಸಂಸ್ಥೆಗಳ ನೊಂದಣಿ ಆಗಬೇಕು. ಅದೇ ರೀತಿ ಆರ್.ಎಸ್.ಎಸ್ ಕೂಡ ನೊಂದಣಿ ಮಾಡಬೇಕು. ಹಾಗೂ ಆರ್.ಎಸ್.ಎಸ್ ಆರ್ಥಿಕ ಚಟುವಟಿಕೆಗಳನ್ನು ತನಿಖೆಗೆ ಒಳಪಡಿಸಬೇಕು" ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣ ಮೊದಲಿಯಾರ್, ಸಣ್ಣ ಮಾರಪ್ಪ, ಕೆ.ಎಂ. ಸಂತೋಷ್ ಕುಮಾರ್, ಎನ್. ಯಲ್ಲಾಲಿಂಗ, ಅಬ್ದುಲ್ ರಶೀದ್, ಡಿನ್ನಿ ತಾಕಪ್ಪ ನಾಯಕ್, ಅಂಜನಿ ವಸಂತ ಕಲಾಲ್, ವಕೀಲರಾದ ಮಹೇಶ್, ಕಲ್ಲಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.