ಬೆಳಗಾವಿ ೦೮: ಬೆಳಗಾವಿಯ ಹಿರಿಯ ಸಾಹಿತಿ, ಕನ್ನಡ ಹೋರಾಟಗಾರ ಡಾ. ಸಿ. ಕೆ. ಜೋರಾಪೂರ ಅವರ ಎಪ್ಪತ್ತೈದನೆಯ ವರ್ಷದ ಅಮೃತ ಮಹೋತ್ಸವ ಸಮಾರಂಭ ಇದೇ ದಿ. ೧೦ ರವಿವಾರ ಬೆಳಿಗ್ಗೆ ೧೧ ಗಂಟೆಗೆ ಶಿವಬಸವನಗರದ ಕನ್ನಡ ಭವನದಲ್ಲಿ ಜರುಗಲಿದ್ದು, ಪ.ಪೂ. ಡಾ. ಸಿದ್ದರಾಮ ಮಹಾಸ್ವಾಮಿಗಳು, ಜಗದ್ಗುರು ತೋಂಟದಾರ್ಯ ಮಠ ಗದಗ ಇವರು ದಿವ್ಯ ಸಾನ್ನಿಧ್ಯ ವಹಿಸಿ "ಅದಮ್ಯ ಚೇತನ" ಎಂಬ ಅಭಿನಂದನ ಸಂಪುಟ ಬಿಡುಗಡೆಗೊಳಿಸಲಿದ್ದಾರೆ. ಡಾ. ಎಚ್. ಬಿ. ರಾಜಶೇಖರ ಅವರ ಅಧ್ಯಕ್ಷತೆಯಲ್ಲಿ ಹಾವೇರಿ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಎನ್. ಭಾಸ್ಕರ ಅವರು ಸಮಾರಂಭ ಉದ್ಘಾಟಿಸುವರು. ಶ್ರೀ ಗೋವಿಂದಪ್ಪ ಗೌಡಪ್ಪಗೋಳ, ಶ್ರೀ ರಾಘವೇಂದ್ರ ಕಾಗವಾಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಪ್ರಭಾಕರ ಉಳ್ಳಾಗಡ್ಡಿ ಅವರು ಅಭಿನಂದನ ಸಂಪಪುಟದ ಕುರಿತು ಮಾತನಾಡಲಿದ್ದು, ಪ್ರಧಾನ ಸಂಪಾದಕರಾದ ಶ್ರೀ ಎಲ್. ಎಸ್. ಶಾಸ್ತ್ರಿ ಮತ್ತು ಡಾ. ಎಚ್. ಐ. ತಿಮ್ಮಾಪುರ ಅವರು ಪ್ರಾಸ್ತಾವಿಕ ಹಾಗೂ ಅಭಿನಂದನ ಭಾಷಣ ಮಾಡಲಿದ್ದಾರೆ. ಪೂಜ್ಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ನಾಗನೂರು ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಕಿತ್ತೂರು ಕಲ್ಮಠದ ಶ್ರೀ ಮಡಿವಾಳೇಶ್ವರ ಸ್ವಾಮಿಗಳ ಸಾನ್ನಿಧ್ಯವಿರುತ್ತದೆ. ಅಭಿನಂದನ ಸಮಿತಿ ಪರವಾಗಿ ಜೋರಾಪೂರ ದಂಪತಿಗಳ ಸನ್ಮಾನದ, ನಂತರ ಜೋರಾಪೂರರ ಅವರು ತಮ್ಮ ಆತ್ಮೀಯ ಬಳಗದ ಅರವತ್ತು ಜನ ಗಣ್ಯಮಾನ್ಯರನ್ನು ಸತ್ಕರಿಸಲಿದ್ದಾರೆ. ಸಮಾರಂಭಕ್ಕೆ ಆಗಮಿಸಬೇಕಾಗಿ ಸಮಿತಿ ಅಧ್ಯಕ್ಷರಾದ ಡಾ. ಎಚ್. ಬಿ. ರಾಜಶೇಖರ , ಕಾರ್ಯಾಧ್ಯಕ್ಷರಾದ ಶಿವು ನಂದಗಾವಿ, ಕಾರ್ಯದರ್ಶಿ ಡಾ. ಎಚ್. ಐ. ತಿಮ್ಮಾಪುರ ಅವರು ಕೋರಿದ್ದಾರೆ.