ಬಳ್ಳಾರಿ, ಮೇ.14:ಬಳ್ಳಾರಿ ನಗರದ ಮೆಕ್ಕಾ ಮಸೀದಿಗೆ ಭೇಟಿ ನೀಡಿದ ಶಾಸಕ ನಾರಾ ಭರತ್ ರೆಡ್ಡಿಯವರು ಮಸೀದಿಯ ಅಭಿವೃದ್ಧಿ ಕಾರ್ಯಗಳಿಗಾಗಿ ವೈಯಕ್ತಿಕವಾಗಿ ₹2.50 ಲಕ್ಷ ದೇಣಿಗೆ ನೀಡಿ ಸೌಹಾರ್ದತೆಯ ಸಂದೇಶ ಸಾರಿದರು.
ಬುಧವಾರ ಮಸೀದಿಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳೀಯ ಮುಖಂಡರು ಹಾಗೂ ಸಮಿತಿಯ ಸದಸ್ಯರೊಂದಿಗೆ ಶಾಸಕ ಭರತ್ ರೆಡ್ಡಿಯವರು ಚರ್ಚಿಸಿದರು. ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಪಾಲಿಕೆಯ ಸದಸ್ಯ ಕುಬೇರ, ವಾರ್ಡ್ ಮುಖಂಡರಾದ ಜಬಿಯುಲ್ಲ, ಪರಶುರಾಮುಡು, ದೇವಿನಗರ ಹೊನ್ನೂರಪ್ಪ, ಹೊನ್ನೂರ್ ವಲಿ, ಹೊನ್ನಪ್ಪ, ಅರ್ಷದ್, ಸಾದಿಕ್, ಖಲಂದರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
